KL ರಾಹುಲ್ ಕುರಿತು ನನಗೆ ದ್ವೇಷವಿಲ್ಲ, ಆದ್ರೆ ರಹಾನೆಗೆ ನಾಯಕತ್ವ ಕೊಡಬೇಕಿತ್ತು: ವಾಸಿಂ ಜಾಫರ್

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಅನೇಕ ದಾಖಲೆಗಳನ್ನ ನಿರ್ಮಿಸಿದೆ. ಆಸ್ಟ್ರೇಲಿಯಾ ನೆಲದಲ್ಲಿ ಎರಡು ಬಾರಿ ಟೆಸ್ಟ್ ಸರಣಿ ಗೆದ್ದಿರುವ ಜೊತೆಗೆ, ಇಂಗ್ಲೆಂಡ್ ತಂಡವನ್ನ ಅವರದ್ದೇ ನೆಲದಲ್ಲಿ ಮಣಿಸಿರುವ ಕೀರ್ತಿ ವಿರಾಟ್ ಹೆಸರಿಗಿದೆ. ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಹೊರತುಪಡಿಸಿ ಇನ್ನೆಲ್ಲಾ ಟೆಸ್ಟ್ ಕ್ರಿಕೆಟ್ ಮಾನ್ಯತಾ ರಾಷ್ಟ್ರಗಳಲ್ಲಿ ಭಾರತ ಸರಣಿ ಗೆದ್ದಿದೆ.
ಆದ್ರೀಗ ದಕ್ಷಿಣ ಆಪ್ರಿಕಾದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆಲ್ಲುವ ಸುವರ್ಣಾವಕಾಶ ಭಾರತದ ಮುಂದಿದೆ. ಈಗಾಗಲೇ ಮೂರು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯ ಗೆದ್ದು 1-1ರಿಂದ ಸಮಬಲ ಸಾಧಿಸಿವೆ. ಸೆಂಚುರಿಯನ್‌ನಲ್ಲಿ ಮೊದಲ ಪಂದ್ಯ ಗೆದ್ದ ಭಾರತ, ಜೋಹಾನ್ಸ್‌ಬರ್ಗ್‌ನಲ್ಲಿ ಎಡವಿದೆ. ಈ ಸೋಲಿನ ಕುರಿತು ಪರಾಮರ್ಶೆ ಮುಂದುವರಿದಿದ್ದು, ವಿರಾಟ್ ಅನುಪಸ್ಥಿತಿಯಲ್ಲಿ ಕೆ.ಎಲ್ ರಾಹುಲ್‌ಗೆ ನಾಯಕತ್ವ ನೀಡಿದ್ದರ ಕುರಿತು ಅಸಮಾಧಾನ ವ್ಯಕ್ತವಾಗಿದೆ.

ಅಜಿಂಕ್ಯ ರಹಾನೆಗೆ ನಾಯಕತ್ವ ನೀಡಬೇಕಿತ್ತು: ವಾಸಿಂ ಜಾಫರ್
ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ನಾಯಕ ವಿರಾಟ್ ಕೊಹ್ಲಿ ಬೆನ್ನು ಮೂಳೆಯ ಸೆಳೆತದಿಂದಾಗಿ ಪಂದ್ಯದಿಂದ ಹೊರಗುಳಿದ್ರು. ಪರಿಣಾಮ ಕೆ.ಎಲ್ ರಾಹುಲ್ ಟೀಂ ಇಂಡಿಯಾವನ್ನ ಮುನ್ನಡೆಸಿದ್ರೂ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ. ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ಒಂದು ದಿನ ಬಾಕಿ ಇರುವಂತೆಯೇ 7 ವಿಕೆಟ್‌ಗಳ ಗೆಲುವು ಸಾಧಿಸಿತು.
ಕೆ.ಎಲ್ ರಾಹುಲ್ ಬದಲಿಗೆ ಅನುಭವಿ ಆಟಗಾರ ಅಜಿಂಕ್ಯ ರಹಾನೆ ಟೀಂ ಇಂಡಿಯಾ ನಾಯಕತ್ವ ನೀಡಬೇಕಿತ್ತು ಎಂದು ಮಾಜಿ ಭಾರತದ ಕ್ರಿಕೆಟಿಗ ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.
ಟೆಸ್ಟ್ ನಾಯಕನಾಗಿ ರಹಾನೆ ಅವರ ದಾಖಲೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತವು ರಹಾನೆಯನ್ನು ನಾಯಕನನ್ನಾಗಿ ಮಾಡಬೇಕಿತ್ತು ಎಂದು ಜಾಫರ್ ಉಲ್ಲೇಖಿಸಿದ್ದಾರೆ. ರಹಾನೆ ನಾಯಕತ್ವದಲ್ಲಿ ಭಾರತ ಆರು ಟೆಸ್ಟ್ ಪಂದ್ಯಗಳಲ್ಲಿ ಎರಡು ಪಂದ್ಯಗಳು ಡ್ರಾ ಹಾಗೂ ನಾಲ್ಕು ಪಂದ್ಯಗಳಲ್ಲಿ ಗೆದ್ದಿವೆ.

ಟೀಮ್ ಮ್ಯಾನೇಜ್‌ಮೆಂಟ್ ನಿರ್ಧಾರದಿಂದ ಆಶ್ಚರ್ಯಗೊಂಡೆ ಎಂದ ಜಾಫರ್
ಟೀಮ್ ಮ್ಯಾನೇಜ್‌ಮೆಂಟ್ ತೆಗೆದುಕೊಂಡ ನಿರ್ಧಾರ ನೋಡಿ ನಿಜಕ್ಕೂ ಆಶ್ಚರ್ಯಗೊಂಡಿದ್ದೇನೆ. ನಾಯಕನಾಗಿ ಯಾವುದೇ ಟೆಸ್ಟ್ ಪಂದ್ಯದಲ್ಲಿ ಸೋಲನ್ನ ಕಾಣದ ಮತ್ತು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದಿರುವ ಅಜಿಂಕ್ಯ ರಹಾನೆಯಂತಹ ಉತ್ತಮ ನಾಯಕ ನಿಮಗೆ ಲಭ್ಯವಿದ್ದಾಗ, ನೀವು ಕೆ.ಎಲ್ ರಾಹುಲ್‌ಗೆ ಟೆಸ್ಟ್ ನಾಯಕತ್ವ ನೀಡಬಹುದೇ? ಎಂದು ಜಾಫರ್ ಇನ್‌ಸೈಡ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.
ಟೀಂ ಇಂಡಿಯಾ ಸೋಲಿಗೆ 3 ಪ್ರಮುಖ ಕಾರಣ ತಿಳಿಸಿದ ಗೌತಮ್ ಗಂಭೀರ್

ಕೆ.ಎಲ್ ರಾಹುಲ್ ವಿಚಾರವಾಗಿ ನನಗೇನು ದ್ವೇಷವಿಲ್ಲ
ಕೆ.ಎಲ್ ರಾಹುಲ್‌ರನ್ನ ನಾಯಕ ಮಾಡಬಾರದಿತ್ತು ಎಂದು ಹೇಳಿದಾಕ್ಷಣ ಅವರ ಮೇಲೆ ನನಗೆ ಯಾವುದೇ ದ್ವೇಷವಿಲ್ಲ ಎಂದು ವಾಸಿಂ ಜಾಫರ್ ಹೇಳಿದ್ದಾರೆ. ಅವರು ಯುವ ನಾಯಕರಾಗಿದ್ದು, ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನ ಮುನ್ನಡೆಸಿದ್ದಾರೆ. ಜನರು ಅವರನ್ನ ಭವಿಷ್ಯದ ನಾಯಕ ಎಂದೇ ಯೋಚಿಸುತ್ತಿದ್ದರೆ. ಆದ್ರೆ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತವನ್ನ ರಹಾನೆ ಮುನ್ನಡೆಸಬೇಕಿತ್ತು ಎಂದು ನಾನು ಭಾವಿಸುತ್ತೇನೆ ಎಂದು ಜಾಫರ್ ಹೇಳಿದ್ದಾರೆ.

ವಿರಾಟ್ ಕೊಹ್ಲಿಯನ್ನ ಭಾರತ ಮಿಸ್ ಮಾಡಿಕೊಂಡಿದೆ : ವಾಸಿಂ ಜಾಫರ್
ವಿರಾಟ್ ಕೊಹ್ಲಿ ಮೈದಾನದಲ್ಲಿ ತುಂಬಾ ಅಗ್ರೆಸ್ಸಿವ್ ಆಟವಾಡುವ ಮತ್ತು ಅಂತಹ ವಾತಾವರಣ ಸೃಷ್ಟಿಸುವ ಆಟಗಾರ. ಹೀಗಾಗಿ ವಿರಾಟ್ ಕೊಹ್ಲಿಯನ್ನ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತುಂಬಾ ಮಿಸ್ ಮಾಡಿಕೊಂಡಿದೆ ಎಂದಿದ್ದಾರೆ.
"ಭಾರತವು ಖಂಡಿತವಾಗಿಯೂ ನಾಯಕ ವಿರಾಟ್ ಕೊಹ್ಲಿಯನ್ನು ಮಿಸ್ ಮಾಡಿಕೊಂಡಿತು, ಏಕೆಂದರೆ ಅವರು ಮೈದಾನಕ್ಕೆ ತುಂಬಾ ಆಕ್ರಮಣವನ್ನು ತರುತ್ತಾರೆ. ನೀವು ಮೈದಾನದಲ್ಲಿ ಅಂತಹ ಆಟಗಾರರನ್ನು ಹೊಂದಿಲ್ಲದೇ ಇದ್ದಾಗ ಆ ಶಕ್ತಿಯನ್ನು ಕಳೆದುಕೊಂಡಂತೆ ಭಾಸವಾಗುವುದು" ಎಂದು ಜಾಫರ್ ಸೇರಿಸಿದ್ದಾರೆ.
ಇತ್ತೀಚೆಗಷ್ಟೇ ಕೋಚ್ ರಾಹುಲ್ ದ್ರಾವಿಡ್, ಕೇಪ್ ಟೌನ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡುವುದರ ಬಗ್ಗೆ ಸುಳಿವು ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications