Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯು-19 ಸೋಲಿಗೆ ಪಾಕ್ ಕ್ರಿಕೆಟ್ ಬೋರ್ಡ್‌ ವಿರುದ್ಧವೇ ಕೆಂಡಕಾರಿದ ಶೋಯೆಬ್ ಅಖ್ತರ್!

Akhtar slams PCB after Pakistan suffer heavy loss to India at U19 World Cup semis | PCB | U19
Akhtar Slams PCB After Pakistan Suffer Heavy Loss To India

ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಖ್ತರ್ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ವಿರುದ್ಧ ಕೆಂಡಕಾರಿದ್ದಾರೆ. ಪಾಕಿಸ್ತಾನ ಅಂಡರ್-19 ತಂಡದ ಭಾರತದ ಕಿರಿಯ ವಿರುದ್ಧ 10 ವಿಕೆಟ್‌ಗಳಿಂದ ಹೀನಾಯವಾಗಿ ಸೋತ ಬಳಿಕ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

ಭಾರತದ ಕಿರಿಯರ ಸಾಧನೆಯನ್ನು ಈ ಸಂದರ್ಭದಲ್ಲಿ ಶೋಯೆಬ್ ಅಖ್ತರ್ ಹೊಗಳಿದ್ದಾರೆ. ಟೀಮ್ ಇಂಡಿಯಾ ಆಟಗಾರರು ಪಕ್ವತೆಯ ಪ್ರದರ್ಶನವನ್ನು ನೀಡಿದ್ದಾರೆ ಎಂದಿದ್ದಾರೆ. ಆದರೆ ಪಾಕಿಸ್ತಾನದ ಕಿರಿಯರಲ್ಲಿ ಈ ಪಕ್ವತೆಯ ಕೊರತೆ ಎದ್ದು ಕಾಣುತ್ತಿದೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಕಿರಿಯರ ಕ್ರಿಕೆಟ್‌ಗೆ ಸಾಕಷ್ಟು ಹೂಡಿಕೆ ಮಾಡಬೇಕು ಎಂದಿದ್ದಾರೆ.

ಭಾರತೀಯ ಕಿರಿಯರು ಪಕ್ವತೆಯ ಆಟವನ್ನಾಡಿದ್ದಾರೆ. ಅದಕ್ಕೆ ಕಾರಣ ಅನುಭವಿ ಆಟಗಾರ ಕೋಚ್ ಆಗಿದ್ದರು. ಮಧ್ಯಮ ಕ್ರಮಾಂಕದ ರಾಹುಲ್ ದ್ರಾವಿಡ್ ಅಂಡರ್ 19 ತಂಡದ ಕೋಚ್ ಆಗಿ ಉತ್ತಮ ಕ್ರಿಕೆಟ್‌ಗೆ ಭದ್ರಬುನಾದಿ ಹಾಕಿದ್ದಾರೆ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.

ಉತ್ತಮ ಕೋಚನ್ನು ಪಡೆಯಬೇಕಾದರೆ ಉತ್ತಮ ಮೊತ್ತವನ್ನು ನೀಡಬೇಕಾಗುತ್ತದೆ. ಆದರೆ ಪಾಕಿಸ್ತಾನದಲ್ಲಿ ಕೋಚ್‌ ಹುದ್ದೆಗೆ ಯೂನಿಸ್ ಖಾನ್‌ನಂತಾ ಅನುಭವಿ ಆಟಗಾರ ಮುಂದಾದರೆ 15 ಲಕ್ಷ ಕೊಡೊದಿಕ್ಕೆ ಸಾಧ್ಯವಿಲ್ಲ 13 ಲಕ್ಷಕ್ಕೆ ಒಪ್ಪಿಕೊಳ್ಳಿ ಎಂದು ಚೌಕಾಸಿ ಮಾಡಲು ಪಿಸಿಬಿ ಪ್ರಾರಂಭಿಸಿತು. ಇದು ಪಾಕಿಸ್ತಾನ ಕ್ರಿಕೆಟ್ ಬೋರ್ಟ್ ಸ್ಟಾರ್ ಆಟಗಾರರನ್ನು ನಡೆಸಿಕೊಳ್ಳುತ್ತಿರುವ ರೀತಿ ಎಂದು ಕಿಡಿಕಾರಿದ್ದಾರೆ.

ಬಿಸಿಸಿಐ ಅನ್ನು ಸೌರವ್ ಗಂಗೂಲಿ ಮುನ್ನಡೆಸುತ್ತಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್‌ ಬೋರ್ಡನ್ನು ಆಂಡ್ರೋ ಸ್ಟ್ರಾಸ್ ಮುನ್ನಡೆಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ಕ್ರಿಕೆಟನ್ನು ಗ್ರೇಮ್ ಸ್ಮಿತ್ ಮುನ್ನಡೆಸುತ್ತಿದ್ದಾರೆ. ಆದರೆ ಪಾಕಿಸ್ತಾನದಲ್ಲಿ ಮಾಜಿ ಕ್ರಿಕೆಟರ್‌ಗಳು ಯೂಟ್ಯೂಬ್ ಚಾನೆಲ್ ಮಾಡಿಕೊಂಡಿರಬೇಕಾದ ಪರಿಸ್ಥಿತಿಯೆಂದು ಪಿಸಿಬಿಯನ್ನು ಜರಿದಿದ್ದಾರೆ ಶೋಯೆಬ್ ಅಖ್ತರ್

Story first published: Friday, February 7, 2020, 13:01 [IST]
Other articles published on Feb 7, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+