ಡೇವಿಡ್ ವಾರ್ನರ್ ಬಗ್ಗೆ ಕುತೂಹಲದ ಸಂಗತಿ ಹೇಳಿದ ಕುಕ್!

ಲಂಡನ್, ಸೆಪ್ಟೆಂಬರ್ 11 : ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್. ಒಂದು ವರ್ಷದ ನಿಷೇಧದ ಬಳಿಕ ಕ್ರಿಕೆಟ್‌ಗೆ ಮರಳಿರುವ ವಾರ್ನರ್ ವಿರುದ್ಧ ಅಲಸ್ಟೈರ್ ಕುಕ್ ಆರೋಪವೊಂದನ್ನು ಮಾಡಿದ್ದಾರೆ.
ಡೇವಿಡ್ ವಾರ್ನರ್ ಅಂತರಾಷ್ಟ್ರೀಯ ಪಂದ್ಯ ಮಾತ್ರವಲ್ಲ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿಯೂ ಕೂಡಾ ಚೆಂಡನ್ನು ವಿರೂಪಗೊಳಿಸುತ್ತಿದ್ದರು ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಲಸ್ಟೈರ್ ಕುಕ್ ದೂರಿದ್ದಾರೆ.
ವಾರ್ನರ್ ಫೀಲ್ಡಂಗ್ ಮಾಡುವಾಗ ಕೈ ಬೆರಳುಗಳ ರಕ್ಷಣೆಗೆ ಬಳಕೆ ಮಾಡುತ್ತಿದ್ದ ಪಟ್ಟಿಯಿಂದ ಚೆಂಡನ್ನು ವಿರೂಪಗೊಳಿಸುತ್ತಿದ್ದರು ಎಂದು ಕುಕ್ ಹೇಳಿದ್ದಾರೆ. ಕುಡಿದ ಮತ್ತಿನಲ್ಲಿ ಇದನ್ನು ವಾರ್ನರ್ ನಮಗೆ ಹೇಳಿದ್ದರು ಎಂದು ಕುಕ್ ತಿಳಿಸಿದ್ದಾರೆ.
2017ರ ಆಶಸ್ ಟೆಸ್ಟ್ ಸರಣಿ ಬಳಿಕ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ವೇಳೆ ಡೇವಿಡ್ ವಾರ್ನರ್ ಇದನ್ನು ಕುಕ್‌ಗೆ ಹೇಳಿದ್ದರು. ಡೇವಿಡ್ ವಾರ್ನರ್ ಹೇಳಿದ ಕೂಡಲೇ ಸ್ಟೀವ್ ಸ್ಮಿತ್, "ಓಹ್ ಇದನ್ನು ನೀನು ಹೇಳಬಾರದಿತ್ತು" ಎಂದು ಎಚ್ಚರಿಸಿದ್ದರು ಎಂದು ಕುಕ್ ಹೇಳಿದ್ದಾರೆ.
ಅಲಸ್ಟೈರ್ ಕುಕ್ 2018ರ ಭಾರತ ತಂಡದ ಇಂಗ್ಲೆಡ್ ಪ್ರವಾಸದ ಬಳಿಕ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದರು. 2019ರಲ್ಲಿ ಡೇವಿಡ್ ವಾರ್ನರ್ ನೀಡಿದ್ದ ಹೇಳಿಕೆಯನ್ನು ಕುಕ್ ಬಹಿರಂಗಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಚೆಂಡು ವಿರೂಪಗೊಳಿಸಿ ಆಸ್ಟ್ರೇಲಿಯಾದ ನಾಯಕ ಸ್ವೀವ್ ಸ್ಮಿತ್ ಮತ್ತು ಉಪ ನಾಯಕರಾಗಿದ್ದ ಡೇವಿಡ್ ವಾರ್ನರ್ ಒಂದು ವರ್ಷ ನಿಷೇಧಕ್ಕೆ ಒಳಗಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications