ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹರಿಣಗಳ ಮೇಲೆ ಹರಿಹಾಯ್ದ ಬಾಂಗ್ಲಾ ಹುಲಿಗಳು

By Mahesh

ಢಾಕಾ, ಜುಲೈ 16: ಬಾಂಗ್ಲಾದೇಶ ಹುಲಿಗಳ ಅರ್ಭಟಕ್ಕೆ ದಕ್ಷಿಣ ಆಫ್ರಿಕಾದ ಹರಿಣಗಳು ತತ್ತರಿಸಿದ್ದಾರೆ. ತವರು ನೆಲದಲ್ಲಿ ನಾಲ್ಕನೇ ಏಕದಿನ ಕ್ರಿಕೆಟ್ ಸರಣಿ ಗೆದ್ದ ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಎಲ್ಲೆಡೆಯಿಂದ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ.

ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸುವುದಕ್ಕೂ ಮುನ್ನ ತವರಿನಲ್ಲಿ ಜಿಂಬಾಬ್ವೆ, ಪಾಕಿಸ್ತಾನ ಹಾಗೂ ಭಾರತ ತಂಡದ ಮೇಲೆ ಭರ್ಜರಿ ಜಯ ಸಾಧಿಸಿದೆ. [ಇಂಡಿಯನ್ ಕ್ರಿಕೆಟರ್ಸ್ ಮಾನ ಹರಾಜು]

ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾಕ್ಕೆ ಮೊಟ್ಟ ಮೊದಲ ಬಾಂಗ್ಲಾ ಪ್ರವಾಸದಲ್ಲೇ ಸರಣಿ ಸೋಲು ಅನುಭವಿಸಿದೆ.

Bangladesh crush South Africa to win ODI series

ಐಸಿಸಿ ವಿಶ್ವಕಪ್ ​ಗೂ ಮುನ್ನ ಜಿಂಬಾಬ್ವೆ ವಿರುದ್ಧ ನಡೆದ ಏಕದಿನ ಸರಣಿಯನ್ನು 5-0 ಅಂತರದಲ್ಲಿ ಗೆದ್ದ ಬಾಂಗ್ಲಾದೇಶ ಕ್ಲೀನ್ ಸ್ವೀಪ್ ಮಾಡಿತ್ತು. ನಂತರ ಪಾಕಿಸ್ತಾನ ವಿರುದ್ಧ 3-0 ವಿಜಯ ದಾಖಲಿಸಿತ್ತು. [ರೆಹಮಾನ್ ಬುಟ್ಟಿಗೆ ಮತ್ತೊಂದು ವಿಶ್ವದಾಖಲೆ]

ವಿಶ್ವಕಪ್ ಸೆಮಿಫೈನಲ್ ತಲುಪಿದ್ದ ಟೀಮ್ ​ಇಂಡಿಯಾವನ್ನು ಕರೆಸಿಕೊಂಡು 2-1 ರಿಂದ ಸೋಲಿಸಿ ಕಳಿಸಿತ್ತು. ಈಗ ದಕ್ಷಿಣ ಆಫ್ರಿಕಾ ವಿರುದ್ಧ 2-1 ಅಂತರದ ಸರಣಿ ಜಯ ಪಡೆದುಕೊಂಡಿದೆ.

3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 9 ವಿಕೆಟ್​ಗಳಿಂದ ಮಣಿಸಿ ಸರಣಿಯನ್ನು 2-1ರಿಂದ ವಶಪಡಿಸಿಕೊಂಡಿದೆ. ['ಹಳದಿ ಕಪ್ಪು ಮಿಂಚಿನ ಹೊಡೆತಕ್ಕೆ ಭಾರತ ಬಲಿ']

ಡಕ್​ವರ್ತ್-ಲೂಯಿಸ್ ನಿಯಮದನ್ವಯ 170 ರನ್​ಗಳ ಪರಿಷ್ಕೃತ ಗುರಿ ಪಡೆದ ಬಾಂಗ್ಲಾಕ್ಕೆ ಆರಂಭಿಕ ಆಟಗಾರ ಸೌಮ್ಯ ಸರ್ಕಾರ್ 90 ರನ್ (75 ಎಸೆತ, 13 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಹಾಗೂ ತಮೀಮ್​ಇಕ್ಬಾಲ್ ಅಜೇಯ 61ರನ್(77ಎಸೆತ, 7ಬೌಂಡರಿ) ನೆರವಿನಿಂದ ಸುಲಭ ಜಯ ಸಾಧಿಸಿತು.

ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ: 40 ಓವರ್​ಗಳಲ್ಲಿ 9 ವಿಕೆಟ್​ಗೆ 168 (ಜೆಪಿ ಡುಮಿನಿ 51, ಮಿಲ್ಲರ್ 44, ಶಕೀಬ್ 33ಕ್ಕೆ 3, ಮುಸ್ತಾಫಿಝುುರ್ 24ಕ್ಕೆ 2)
ಬಾಂಗ್ಲಾದೇಶ: 26.1 ಓವರ್​ಗಳಲ್ಲಿ 1 ವಿಕೆಟ್​ಗೆ 170 (ತಮೀಮ್​ಇಕ್ಬಾಲ್ 61*, ಸೌಮ್ಯ ಸರ್ಕಾರ್ 90)
ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ: ಸೌಮ್ಯ ಸರ್ಕಾರ್.
(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X