ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಬಿ ಡಿವಿಲೆಯರ್ಸ್ ಸ್ಪೆಷಲ್ '100'

By Mahesh

ಬೆಂಗಳೂರು, ಜುಲೈ 27: ದಕ್ಷಿಣ ಆಫ್ರಿಕಾದ ನಾಯಕ ಹಾಗೂ ರಾಯಲ್‌ ಚಾರ್ಲೆಂಜರ್ಸ್ ಬೆಂಗಳೂರು ತಂಡದ ವಿಶೇಷ ಬ್ಯಾಟ್ಸ್‌ಮನ್ ಎಬಿ ಡಿವಿಲೆಯರ್ಸ್‌ ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಪೆಷಲ್ 100 ಕ್ಲಬ್ ಸೇರುವ ಸುವರ್ಣ ಅವಕಾಶ ಲಭ್ಯವಾಗಿದೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್, ಏಕದಿನ ಹಾಗೂ ಟಿ20 ಸರಣಿಯ ದಿನಾಂಕ ಹಾಗೂ ಕ್ರೀಡಾಂಗಣಗಳ ಪಟ್ಟಿಯನ್ನು ಬಿಸಿಸಿಐ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಸೋಮವಾರ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು. [ಭಾರತ-ದಕ್ಷಿಣ ಆಫ್ರಿಕಾ ಸರಣಿ ದಿನಾಂಕಪಟ್ಟಿ ಪ್ರಕಟ]

ನವೆಂಬರ್ 14 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿಲಿಯರ್ಸ್‌ ಅವರು ಕಣಕ್ಕಿಳಿದರೆ ಅದು ಅವರ 100ನೇ ಟೆಸ್ಟ್ ಪಂದ್ಯವಾಗಲಿದೆ. [ಟೆಸ್ಟ್ ದಾಖಲೆಗಿಂತ ಅಪ್ಪನಾಗುವ ಖುಷಿ ಮುಖ್ಯ: ಎಬಿಡಿ]ಬೆಂಗಳೂರು ಮೈದಾನ ಎಬಿ ಡಿವಿಲಿಯರ್ಸ್‌ ಅವರಿಗೆ ಎರಡನೇ ತವರು ಎಂದರೆ ತಪ್ಪಾಗಲಾರದು. ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಎಬಿಡಿ ಅವರು ಅತ್ಯಂತ ಜನಪ್ರಿಯ ಆಟಗಾರ.

ಎಬಿಡಿವಿಲಿಯರ್ಸ್ ಇಲ್ಲಿ ತನಕ 98 ಟೆಸ್ಟ್ ಪಂದ್ಯಗಳನ್ನಾಡಿದ್ದು 52.09ರ ಸರಾಸರಿಯಲ್ಲಿ 7,608 ರನ್‌ಗಳನ್ನು ಗಳಿಸಿದ್ದು ಇದರಲ್ಲಿ 21 ಶತಕ ಹಾಗೂ 38 ಅರ್ಧಶತಕಗಳು ಸೇರಿವೆ. ಅಜೇಯ 278 ಸರ್ವಶ್ರೇಷ್ಠ ರನ್ ಆಗಿದೆ. ಮೊದಲ ಟೆಸ್ಟ್ ಪಂದ್ಯವನ್ನು ಮೊಹಾಲಿಯಲ್ಲಿ ಆಡಲಿದ್ದಾರೆ. ಕೊನೆ ಪಂದ್ಯ ನವದೆಹಲಿಯಲ್ಲಿ ನಡೆಯಲಿದೆ. (ಒನ್ ಇಂಡಿಯಾ ಸುದ್ದಿ)

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, July 27, 2015, 17:22 [IST]
Other articles published on Jul 27, 2015
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X