ಟೆಸ್ಟ್ ಸರಣಿ: ದಾಖಲೆ ಬರೆಯಲು ಆ್ಯಂಡರ್ಸನ್ ಸಜ್ಜು, ಡ್ರಾ ಮಾಡಿಕೊಳ್ಳಲು ಪಾಕ್ ಹರಸಾಹಸ

ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಅಂತಿಮ ಟೆಸ್ಟ್ ಪಂದ್ಯವನ್ನು ಉಳಿಸಿಕೊಳ್ಳಲು ಪಾಕಿಸ್ತಾನ ಭಾರೀ ಹರಸಾಹಸ ಪಡುತ್ತಿದೆ. ಪಾಕಿಸ್ತಾನದ ಈ ಸಾಹಸಕ್ಕೆ ನಾಲ್ಕನೇ ದಿನ ಮಳೆಯೂ ಸಾಕಷ್ಟು ಸಹಕಾರವನ್ನು ನೀಡಿತ್ತು. ಪಂದ್ಯದ ನಾಲ್ಕನೇ ದಿನ ಕೇವಲ 56 ಓವರ್‌ಗಳ ಆಟವಷ್ಟೇ ನಡೆಯಲು ಸಾಧ್ಯವಾಯಿತು.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಪೇರಿಸಿದ 583/8 ರನ್‌ಗಳ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ಕೇವಲ 273 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ ಫಾಲೋಆನ್ ಅವಮಾನಕ್ಕೆ ತುತ್ತಾಗಿ ಮತ್ತೊಮ್ಮೆ ಬ್ಯಾಟಿಂಗ್‌ಗೆ ಇಳಿಯಿತು. ಆದರೆ ನಾಲ್ಕನೇ ದಿನದಾಟದಲ್ಲಿ ಪಾಕಿಸ್ತಾನ ತಂಡ ತನ್ನ ಎರಡನೆ ಇನ್ನಿಂಗ್ಸ್‌ನಲ್ಲಿ ಕೇವಲ ಎರಡು ವಿಕೆಟ್ ಮಾತ್ರವೇ ಕಳೆದುಕೊಂಡಿದೆ. ಹೀಗಾಗಿ ಅಂತಿಮ ದಿನ ಡ್ರಾ ಮಾಡಿಕೊಳ್ಳಲು ಎಲ್ಲಾ ಪ್ರಯತ್ನವನ್ನೂ ನಡೆಸಲಿದೆ.

ಭಾರೀ ಹಿನ್ನಡೆಯಲ್ಲಿ ಪಾಕ್
ಪಾಕಿಸ್ತಾನ ಇನ್ನೂ ಕೂಡ 210 ರನ್‌ಗಳ ಇನ್ನಿಂಗ್ಸ್ ಹಿನ್ನಡೆಯಲ್ಲಿದೆ. ಹೀಗಾಗಿ ಗೆಲುವಿನ ಅವಕಾಶ ಸಂಪೂರ್ಣವಾಗಿ ಮುಚ್ಚಿದಂತಿದೆ. ಆದರೆ ಡ್ರಾ ಮಾಡಿಕೊಳ್ಳುವ ಅವಕಾಶ ಪಾಕ್ ಮುಂದಿದ್ದು ಅದಕ್ಕಾಗಿ ತನ್ನೆಲ್ಲಾ ಪ್ರಯತ್ನವನ್ನು ನಡೆಸುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಏಕಾಂಗಿ ಹೋರಾಟವನ್ನು ನಡೆಸಿ ಭರ್ಜರಿ ಶತಕವನ್ನು ಸಿಡಿಸಿದ ನಾಯಕ ಅಜರ್ ಅಲಿ ಹಾಗೂ ಭರವಸೆಯ ಆಟಗಾರ ಬಾಬರ್ ಅಜಂ ಕ್ರೀಸ್‌ನಲ್ಲಿದ್ದಾರೆ.

ದಾಖಲೆಗೆ ಬೇಕು 1 ವಿಕೆಟ್
ಮತ್ತೊಂದೆಡೆ ಪಾಕಿಸ್ತಾನದ ಉಳಿದ 8 ವಿಕೆಟ್‌ಗಳನ್ನು ಪಡೆಯಲು ಇಂಗ್ಲೆಂಡ್ ಬೌಲರ್‌ಗಳು ಉತ್ಸುಕರಾಗಿದ್ದಾರೆ. ಅದರಲ್ಲೂ ಅನುಭವಿ ಜೇಮ್ಸ್ ಆ್ಯಂಡರ್ಸನ್ ಈ ಪಂದ್ಯದಲ್ಲಿ 600 ವಿಕೆಟ್‌ಗಳ ಮೈಲಿಗಲ್ಲಿ ಸ್ಥಾಪಿಸುವ ಎಲ್ಲಾ ಸಾಧ್ಯತೆಗಳೂ ಇದೆ. ಈ ದಾಖಲೆಗೆ ಆ್ಯಂಡರ್ಸನ್‌ಗೆ ಬೇಕಿರುವುದು ಇನ್ನು ಕೇವಲ 1 ವಿಕೆಟ್ ಮಾತ್ರ.

ಮೊದಲ ಇನ್ನಿಂಗ್ಸ್‌ನಲ್ಲಿ ಪಾಕ್‌ಗೆ ಕಂಟಕ
ಮೊದಲ ಇನ್ನಿಂಗ್ಸ್‌ನಲ್ಲಿ ಆ್ಯಂಡರ್ಸನ್ ಅದ್ಭುತ ದಾಳಿಯನ್ನು ಸಂಘಟಿಸಿದ್ದರು. ಪಾಕಿಸ್ತಾನ ಬ್ಯಾಟಿಂಗ್‌ನ ಐದು ವಿಕೆಟ್‌ಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲೂ ಒಂದು ವಿಕೆಟ್ ಪಡೆದಿರುವ ಹಿರಿಯ ವೇಗಿ ಇನ್ನು ಕೇವಲ ಒಂದು ವಿಕೆಟ್ ಪಡೆದರೆ 600 ವಿಕೆಟ್ ಪಡೆದ ದಾಖಲೆಗೆ ಪಾತ್ರರಾಗಲಿದ್ದಾರೆ.

600 ವಿಕೆಟ್ ಪಡೆಯಲಿರುವ ಮೊದಲ ವೇಗಿ
ಜೇಮ್ಸ್ ಆಂಡರ್ಸನ್ ಈ ಸಾಧನೆಯನ್ನು ಮಾಡಿದರೆ ವಿಶ್ವ ಕ್ರಿಕೆಟ್‌ನಲ್ಲಿ ಟೆಸ್ಟ್‌ನಲ್ಲಿ 600 ವಿಕೆಟ್ ಪಡೆದ ಮೊದಲ ವೇಗದ ಬೌಲರ್ ಎಂಬ ಖ್ಯಾತಿಗೆ ಒಳಗಾಗಲಿದ್ದಾರೆ. ಹಾಗೂ ಈ ಸಾಧನೆಯನ್ನು ಮಾಡಿದ ಕೇವಲ ನಾಲ್ಕನೇ ಆಟಗಾರ ಎಂಬ ಖ್ಯಾತಿಗೂ ಪಾತ್ರರಾಗಲಿದ್ದಾರೆ. 800 ವಿಕೆಟ್ ಪಡೆದಿರುವ ಮುತ್ತಯ್ಯ ಮುರಳೀಧರನ್ ಮೊದಲನೇ ಸ್ಥಾನ, 708 ವಿಕೆಟ್ ಪಡೆದಿರುವ ಶೇನ್ ವಾರ್ನ್ ಹಾಗೂ 619 ವಿಕೆಟ್ ಪಡೆದಿರುವ ಅನಿಲ್ ಕುಂಬ್ಳೆ ಈ ಪಟ್ಟಿಯಲ್ಲಿ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ. ಆದರೆ ಈ ಮೂವರು ಕೂಡ ಸ್ಪಿನ್ನರ್‌ಗಳೇ ಆಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications