ಮಾಧ್ಯಮಗಳ ವಿರುದ್ಧ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಗರಂ
ಲಂಡನ್, ಜೂನ್ 07 : ಮಾಧ್ಯಮಗಳ ವಿರುದ್ಧ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಗರಂ ಆಗಿದ್ದಾರೆ. ಟೀಂ ಇಂಡಿಯಾದ ಕೋಚ್ ಆಗುವ ಸಾಧ್ಯತೆ ಬಗ್ಗೆ ಬಂದಿರುವ ವರದಿಗಳನ್ನು ತಳ್ಳಿ ಹಾಕಿದ್ದಾರೆ.
ವಿಶ್ವದ ಶ್ರೀಮಂತ ಸಂಸ್ಥೆ ಕೂಡಾ ಸಂಬಳ ನೀಡಲಾರದಷ್ಟು ಮೊತ್ತವನ್ನು ಶೇನ್ ಡಿಮ್ಯಾಂಡ್ ಮಾಡಿದ್ದಾರೆ ಎಂದು ವರದಿಯಾಗಿತ್ತು. ವಿರಾಟ್ ಕೊಹ್ಲಿ ಬಗ್ಗೆ ಕೂಡಾ ನಾನು ನೀಡದೆ ಇರುವ ಹೇಳಿಕೆಯನ್ನು ಸೇರಿಸಲಾಗಿದೆ ಎಂದು ವಾರ್ನ್ ಗರಂ ಆಗಿದ್ದಾರೆ.[ಟೀಂ ಇಂಡಿಯಾ ಕೋಚ್ ಹುದ್ದೆಗೆ ಮತ್ತೆ ಅರ್ಜಿ ಹಾಕಿದ ಕುಂಬ್]

47 ವರ್ಷ ವಯಸ್ಸಿನ ಶೇನ್ ವಾರ್ನ್ ಅವರು, ಟೀಂ ಇಂಡಿಯಾ ಕೋಚ್ ಸ್ಥಾನದ ರೇಸಿನಲ್ಲಿದ್ದಾರೆ. ಆದರೆ, ಅವರನ್ನು ಆಯ್ಕೆ ಮಾಡದಿರಲು ದುಬಾರಿ ಸಂಭಾವನೆಯೇ ಕಾರಣ ಎಂದು ಕೆಲ ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಬಗ್ಗೆ ಶೇನ್ ವಾರ್ನ್ ಬೇಸರ ವ್ಯಕ್ತಪಡಿಸಿ, ಇದು ಪತ್ರಿಕೋದ್ಯಮವಲ್ಲ ಎಂದಿದ್ದಾರೆ.[ಟೀಂ ಇಂಡಿಯಾ ಕೋಚ್ ಹುದ್ದೆ ಸೆಹ್ವಾಗ್ ಹೆಗಲಿಗೆ ?]
ಟೀಂ ಇಂಡಿಯಾದ ಹಾಲಿ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರು ಮತ್ತೊಮ್ಮೆ ಕೋಚ್ ಹುದ್ದೆ ಬಯಸಿ ಅರ್ಜಿ ಹಾಕಿರುವ ಸುದ್ದಿ ಇದೀಗ ಬಹಿರಂಗಗೊಂಡಿದೆ.
ಬಿಸಿಸಿಐ ನ ಕ್ರಿಕೆಟ್ ಸಮಿತಿಯ ಸದಸ್ಯರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಅವರ ಆಯ್ಕೆಯ ಅಭ್ಯರ್ಥಿಯನ್ನು ಕೋಚ್ ಆಗಿ ಬಿಸಿಸಿಐ ನೇಮಿಸಲಿದೆ. ಅನಿಲ್ ಕುಂಬ್ಳೆ ಆಲ್ಲದೆ ವೀರೇಂದ್ರ ಸೆಹ್ವಾಗ್, ಆಸ್ಟ್ರೇಲಿಯಾದ ಟಾಮ್ ಮೂಡಿ, ಲಾಲ್ ಚಂದ್ ರಜಪೂತ್, ಕರ್ನಾಟಕದ ದೊಡ್ಡ ಗಣೇಶ್, ಕ್ರೆಗ್ ಮೆಕ್ಡರ್ಮಟ್ ಹಾಗೂ ರಿಚರ್ಡ್ ಪೈಬಸ್ ಅವರ ಹೆಸರು ಪಟ್ಟಿಯಲ್ಲಿದೆ.(ಒನ್ಇಂಡಿಯಾ ಸುದ್ದಿ)
Story first published: Wednesday, January 3, 2018, 10:05 [IST]
Other articles published on Jan 3, 2018
Read in English: Warne clears air on Indian coaching
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications