ಮುಂಬೈ, ಜೂನ್ 2: ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ದೆಹಲಿ ಮಾಜಿ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರಿಗೆ ಕೋಚ್ ಹುದ್ದೆ ಸಿಗುವುದು ಬಹುತೇಕ ಖಾತ್ರಿಯೆಂದು ಬಿಸಿಸಿಐನ ಒಳ ಮೂಲಗಳು ಹೇಳಿವೆ. ಈಗಷ್ಟೇ ಶುರುವಾಗಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಮುಗಿದ ಕೂಡಲೇ ಸೆಹ್ವಾಗ್ ಆಯ್ಕೆ ಪ್ರಕಟಿಸಲು ಬಿಸಿಸಿಐ ಆಲೋಚಿಸಿದೆ ಎಂದು ಹೇಳಲಾಗಿದೆ.
ಏತನ್ಮಧ್ಯೆ, ಟೀಂ ಇಂಡಿಯಾದಲ್ಲಿ ತಮ್ಮ ವಿರುದ್ಧ ಅಸಮಾಧಾನ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಕೋಚ್ ಹುದ್ದೆಗೆ ಮತ್ತೆ ಪ್ರಯತ್ನಿಸದಿರಲು ಹಾಲಿ ಕೋಚ್ ಅನಿಲ್ ಕುಂಬ್ಳೆ ನಿರ್ಧರಿಸಿದ್ದಾರೆಂದು ಅವರ ಆಪ್ತ ಮೂಲಗಳು ತಿಳಿಸಿವೆ.[ಧೋನಿ ಗವಾಸ್ಕರ್ ಜನ್ಮ ಜಾಲಾಡಿದ ರಾಮಚಂದ್ರ ಗುಹಾ]

ಗುರುವಾರ (ಜೂನ್ 1) ದಿನಾಂತ್ಯಕ್ಕೆ ಕೋಚ್ ಹುದ್ದೆಯ ರೇಸ್ ನಲ್ಲಿ ಕುಂಬ್ಳೆ ಸೇರಿದಂತೆ ಸೆಹ್ವಾಗ್, ಟಾಮ್ ಮೂಡಿ, ಲಾಲ್ ಚಂದ್ ರಜಪೂತ್, ಕರ್ನಾಟಕದ ದೊಡ್ಡ ಗಣೇಶ್ ಹಾಗೂ ರಿಚರ್ಡ್ ಪೈಬಸ್ ಅವರೂ ಅರ್ಜಿ ಸಲ್ಲಿಸಿದ್ದರು. ಹಾಗಾಗಿ, ಕೋಚ್ ಹುದ್ದೆಗೆ ಪ್ರಬಲರ ರೇಸ್ ಇದೆ ಎಂದೇ ಹೇಳಲಾಗಿತ್ತು.[ಟೀಂ ಇಂಡಿಯಾ ಕೋಚ್ ಹುದ್ದೆ: ಜಂಬೋಗೆ ಸೆಹ್ವಾಗ್ ಪೈಪೋಟಿ]
ಆದರೀಗ, ಶುಕ್ರವಾರ (ಜೂನ್ 2) ಸಂಜೆಯ ಹೊತ್ತಿಗೆ, ಕುಂಬ್ಳೆಯವರೇ ಈ ರೇಸ್ ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದು, ಸೆಹ್ವಾಗ್ ಅವರಿಗೆ ಕೋಚ್ ಹುದ್ದೆ ಒಲಿಯುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಹೇಳಲಾಗಿದೆ.