ಟೀಂ ಇಂಡಿಯಾ ಕೋಚ್ ಹುದ್ದೆಗೆ ಮತ್ತೆ ಅರ್ಜಿ ಹಾಕಿದ ಕುಂಬ್ಳೆ
ಲಂಡನ್, ಜೂನ್ 07: ಟೀಂ ಇಂಡಿಯಾದ ಹಾಲಿ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರು ಮತ್ತೊಮ್ಮೆ ಕೋಚ್ ಹುದ್ದೆ ಬಯಸಿ ಅರ್ಜಿ ಹಾಕಿರುವ ಸುದ್ದಿ ಇದೀಗ ಬಹಿರಂಗಗೊಂಡಿದೆ.
ಅನಿಲ್ ಕುಂಬ್ಳೆ ಅವರು ಇನ್ನೊಂದು ಅವಧಿಗೆ ಕೋಚ್ ಆಗಲು ಬಯಸಿಲ್ಲ ಎಂಬ ಸುದ್ದಿಯ ನಡುವೆಯೇ ಮತ್ತೊಮ್ಮೆ ಅರ್ಜಿ ಹಾಕಿರುವುದು ದೃಢಪಟ್ಟಿದೆ. ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಟ್ವೀಟ್ ಮಾಡುವ ಶೈಲಿಯಲ್ಲೇ ಅರ್ಜಿ ಹಾಕಿದ್ದು ಎಲ್ಲರ ಗಮನಸೆಳೆದಿರುವುದನ್ನು ಓದಿರುತ್ತೀರಿ. ಈಗ ಅರ್ಜಿಗಳೆಲ್ಲವೂ ಫಿಲ್ಟರ್ ಆಗಿ 12 ಅರ್ಜಿಗಳು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮುಂದಿದೆ.[ಟೀಂ ಇಂಡಿಯಾ ಕೋಚ್ ಹುದ್ದೆ: ಜಂಬೋಗೆ ಸೆಹ್ವಾಗ್ ಪೈಪೋಟಿ]

ಬಿಸಿಸಿಐ ನ ಕ್ರಿಕೆಟ್ ಸಮಿತಿಯ ಸದಸ್ಯರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಅವರ ಆಯ್ಕೆಯ ಅಭ್ಯರ್ಥಿಯನ್ನು ಕೋಚ್ ಆಗಿ ಬಿಸಿಸಿಐ ನೇಮಿಸಲಿದೆ. ಅನಿಲ್ ಕುಂಬ್ಳೆ ಆಲ್ಲದೆ ವೀರೇಂದ್ರ ಸೆಹ್ವಾಗ್, ಆಸ್ಟ್ರೇಲಿಯಾದ ಟಾಮ್ ಮೂಡಿ ರೇಸಿನಲ್ಲಿ ಮುಂದಿದ್ದಾರೆ. ಲಾಲ್ ಚಂದ್ ರಜಪೂತ್, ಕರ್ನಾಟಕದ ದೊಡ್ಡ ಗಣೇಶ್ ಹಾಗೂ ರಿಚರ್ಡ್ ಪೈಬಸ್ ಅವರೂ ಅರ್ಜಿ ಸಲ್ಲಿಸಿದ್ದಾರೆ.[ಟೀಂ ಇಂಡಿಯಾ ಕೋಚ್ ಹುದ್ದೆ ಸೆಹ್ವಾಗ್ ಹೆಗಲಿಗೆ ?]
ಜೂನ್ 02ರ ಹೊತ್ತಿಗೆ ಕುಂಬ್ಳೆಯವರೇ ಈ ರೇಸ್ ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದು, ಸೆಹ್ವಾಗ್ ಅವರಿಗೆ ಕೋಚ್ ಹುದ್ದೆ ಒಲಿಯುವ ಸಾಧ್ಯತೆಗಳು ದಟ್ಟವಾಗಿತ್ತು. ಆದೆರೆ, ಈಗ ಮತ್ತೆ ಪೈಪೋಟಿ ಆರಂಭವಾಗಿದೆ.
Story first published: Wednesday, January 3, 2018, 10:05 [IST]
Other articles published on Jan 3, 2018
Read in English: Kumble re-applies for India coach job
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications