ಬೌಲಿಂಗ್ ಕೋಚ್ ಆಗಿ ಜಹೀರ್ ನೇಮಿಸಿ: ಕುಂಬ್ಳೆ ಶಿಫಾರಸು
ಮುಂಬೈ, ಮೇ 25: ಭಾರತದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಅವರನ್ನು ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿ ನೇಮಿಸಲು ಇದು ಸಕಾಲ ಎಂದು ಹಾಲಿ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರು ಶಿಫಾರಸು ಮಾಡಿದ್ದಾರೆ.
ಅನಿಲ್ ಕುಂಬ್ಳೆ ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ಹೊರ ಹಾಕಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸಿದ್ಧವಾಗಿರುವ ಸಂದರ್ಭದಲ್ಲೇ ಕುಂಬ್ಳೆ ಹೀಗೊಂದು ಶಿಫಾರಸು ಮಾಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.[ಜಹೀರ್ ಎಂಗೇಜ್ ಮೆಂಟ್ ಗೆ ಸಾಕ್ಷಿಯಾದ ಕ್ರಿಕೆಟ್ ತಾರೆಯರು]

ಹೈದರಾಬಾದಿನಲ್ಲಿ ಭಾರತದ ಹಾಲಿ ಕೋಚ್‌ಗಳು, ಬಿಸಿಸಿಐ ಪದಾಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರೊಂದಿಗೆ ನಡೆಸಿದ್ದ ಸಭೆಯಲ್ಲಿ ಕುಂಬ್ಳೆ ಅವರು ಜಹೀರ್ ಹೆಸರನ್ನು ಬೌಲಿಂಗ್ ಕೋಚ್ ಹುದ್ದೆಗೆ ಶಿಫಾರಸು ಮಾಡಿದ್ದಾರೆ ಎಂಬ ಸುದ್ದಿ ಬಂದಿದೆ. ಕುಂಬ್ಳೆ ಅವರ ಪ್ರಸ್ತಾವದ ಬಗ್ಗೆ ಸರಿಯಾದ ಸಮಯದಲ್ಲಿ ಪ್ರತಿಕ್ರಿಯಿಸುವುದಾಗಿ ತಿಳಿಸಿದ್ದಾರೆ.[ನಟಿ ಸಾಗರಿಕಾ ಬದಲು ಪತ್ರಕರ್ತೆಗೆ ವಿಶ್ ಮಾಡಿದ ಕುಂಬ್ಳೆ]
92 ಟೆಸ್ಟ್‌ಗಳಲ್ಲಿ 311 ವಿಕೆಟ್ ಹಾಗೂ 200 ಏಕದಿನಗಳಲ್ಲಿ 282 ವಿಕೆಟ್‌ಗಳನ್ನು ಉರಳಿಸಿದ್ದ ಜಹೀರ್ ಖಾನ್ ಅವರು ಐಪಿಎಲ್ 10ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕರಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications