ಕುಂಬ್ಳೆ ಮುಂದುವರಿಕೆಗೆ ಸಚಿನ್, ಗಂಗೂಲಿ, ಲಕ್ಷ್ಮಣ್ ಒಲವು
ಲಂಡನ್, ಜೂನ್ 09 : ಟೀಂ ಇಂಡಿಯಾ ಕೋಚ್ ಹುದ್ದೆಗೆ ಸಂಬಂಧ ಭಾರತೀಯ ಕ್ರಿಕೆಟ್ ಸಮಿತಿಯಲ್ಲಿ ಭಾರೀ ಚರ್ಚೆಗಳು ನಡೆದಿವೆ. ವಿರಾಟ್ ಕೊಹ್ಲಿ ಮತ್ತು ಕೋಚ್ ಅನಿಲ್ ಕುಂಬ್ಳೆ ಅವರ ನಡುವಿನ ಮುಸುಕಿನ ಗುದ್ದಾಟಕ್ಕೆ ಬ್ರೇಕ್ ಹಾಕಿ ಕುಂಬ್ಳೆ ಅವರನ್ನು ಭಾರತ ತಂಡದ ಮುಖ್ಯ ಕೋಚ್ ಹುದ್ದೆಯಲ್ಲಿ ಮುಂದುವರಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಲವು ತೋರಿದೆ.
ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಅವರನ್ನು ಹೊಂದಿರುವ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಗುರುವಾರ ಒವಲ್ ನಲ್ಲಿ ನಡೆಸಿದ ಸಭೆಯಲ್ಲಿ ಕುಂಬ್ಳೆ ಮುಂದುವರಿಕೆಗೆ ಒಲವು ತೋರಿದೆ ಎನ್ನಲಾಗಿದೆ.[ಟೀಂ ಇಂಡಿಯಾ ಕೋಚ್ ಹುದ್ದೆ ಸೆಹ್ವಾಗ್ ಹೆಗಲಿಗೆ ?]
ಬಿಸಿಸಿಐ ಆಡಳಿತ ನೋಡಿಕೊಳ್ಳಲು ಸುಪ್ರೀಂಕೋರ್ಟ್ ನಿಂದ ನೇಮಕವಾಗಿರುವ ವಿನೋದ್ ರಾಯ್ ಸಾರಥ್ಯದ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಈ ವಿಷಯದಲ್ಲಿ ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳಲಿದೆ.[ಟೀಂ ಇಂಡಿಯಾ ಕೋಚ್ ಹುದ್ದೆ: ಜಂಬೋಗೆ ಸೆಹ್ವಾಗ್ ಪೈಪೋಟಿ]
ಕುಂಬ್ಳೆ ಅವರ ಅವಧಿ ಮುಕ್ತಾಯ ಹಿನ್ನಲೆಯಲ್ಲಿ ಟೀಂ ಇಂಡಿಯಾಕ್ಕೆ ಹೊಸ ಕೋಚ್ ಆಯ್ಕೆಗೆ ಬಿಸಿಸಿಐ ಈಗಾಗಲೇ ಅರ್ಜಿಗಳನ್ನು ಕರೆದಿದ್ದು ಹಲವರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಕೋಚ್ ಹುದ್ದೆಗೆ ಯಾರ್ಯಾರು ರೇಸ್ ನಲ್ಲಿದ್ದಾರೆ ಎಂಬುವುದನ್ನು ಮುಂದೆ ಓದಿ...

ಮುಂಚೂಣಿಯಲ್ಲಿ ವಿರೇಂದ್ರ ಸೆಹ್ವಾಗ್
ಭಾರತ ತಂಡದ ಕೋಚ್ ಹುದ್ದೆಗೆ ಹಲವರು ಅರ್ಜಿ ಸಲ್ಲಿಸಿದ್ದು ಈ ಈ ಪೈಕಿ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರು ಮುಂಚೂಣಿಯಲ್ಲಿದ್ದಾರೆ. ಆದರೆ, ಇದೀಗ ಕುಂಬ್ಳೆ ಅವರನ್ನು ಮುಂದುವರೆಸಲು ನಿರ್ಧರಿಸಲಾಗಿದ್ದು, ಮುಂದೆ ಕುಂಬ್ಳೆ ಅವರನ್ನು ಕೈಬಿಟ್ಟ ಬಳಿಕ ಕೋಚ್ ಹುದ್ದೆ ಸೆಹ್ವಾಗ್ ಅವರಿಗೆ ಒಲಿದರೆ ಆಶ್ಚರ್ಯ ಪಡಬೇಕಿಲ್ಲ.

ಮತ್ತೆ ಅರ್ಜಿ ಹಾಕಿದ ಕುಂಬ್ಳೆ
ಹಾಲಿ ಕೋಚ್ ಹುದ್ದೆಯ ಅವಧಿ ಮುಕ್ತಾಯಗೊಂಡಿದ್ದರಿಂದ ಹೋಸ ಕೋಚ್ ಆಯ್ಕೆಗೆ ಬಿಸಿಸಿಐ ಅರ್ಜಿ ಕರೆದಿದೆ. ಈ ಹಿನ್ನಲೆಯಲ್ಲಿ ಮತ್ತೆ ಎರಡನೇ ಬಾರಿಗೂ ಕೋಚ್ ಹುದ್ದೆ ನಿಭಾಯಿಸಲು ಸಿದ್ಧರಾಗಿರುವ ಕುಂಬ್ಳೆ ಅವರು ಅರ್ಜಿ ಸಲ್ಲಿಸಿದ್ದಾರೆ.

ಕೋಚ್ ಹುದ್ದೆಗೆ ಅರ್ಜಿ ಹಾಕಿದ ಮತ್ತೀತರರು
ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆ ನಿಭಾಯಿಸಲು ಮಾಜಿ ಕ್ರಿಕೆಟಿಗರಾದ ಲಾಲ್ ಚಂದ್ ರಜಪೂತ್, ಕರ್ನಾಟಕದ ದೊಡ್ಡ ಗಣೇಶ್, ಟಾಮ್ ಮೂಡಿ ಹಾಗೂ ರಿಚರ್ಡ್ ಪೈಬಸ್ ಅವರೂ ಅರ್ಜಿ ಸಲ್ಲಿಸಿದ್ದಾರೆ.

‘ಜೂನ್ 26ರ ವರೆಗೆ ಹೊಸ ಕೋಚ್ ಬೇಡ
‘ಜೂನ್ 26ರಂದು ಬಿಸಿಸಿಐ ವಾರ್ಷಿಕ ಮಹಾಸಭೆ ನಿಗದಿಯಾಗಿದ್ದು ಅಲ್ಲಿಯವರೆಗೂ ಹೋಸ ಕೋಚ್ ನೇಮಕ ಪ್ರಕ್ರಿಯೆ ನಡೆಸದಂತೆ ಚೌಧರಿಯವರಿಗೆ ಸೂಚಿಸಿದ್ದೇನೆ' ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಖನ್ನಾ ಹೇಳಿದ್ದಾರೆ. ಇದರಿಂದ ಅಲ್ಲಿ ವರೆಗೆ ಕುಂಬ್ಳೆ ಅವರನ್ನು ಮುಂದುವರೆಸಲು ಚಿಂತನೆ ನಡೆದಿವೆ,
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications