For Quick Alerts
ALLOW NOTIFICATIONS  
For Daily Alerts
 

ಟೀಂ ಇಂಡಿಯಾ ಕೋಚ್ ಹುದ್ದೆ: ಜಂಬೋಗೆ ಸೆಹ್ವಾಗ್ ಪೈಪೋಟಿ

ಭಾರತೀ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರ ಹುದ್ದೆಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಅರ್ಜಿ ಸಲ್ಲಿಸಿರುವುದರಿಂದ ಈ ಹುದ್ದೆಗಾಗಿ ರೇಸ್ ಗೆ ಇಳಿದಿರುವವರ ಸಂಖ್ಯೆ ಆರಕ್ಕೇರಿದೆ.

ಮುಂಬೈ, ಜೂನ್ 1: ದೆಹಲಿಯ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು, ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.

ಇದರೊಂದಿಗೆ, ಈ ಪ್ರತಿಷ್ಠಿತ ಹುದ್ದೆಗೇರಲು ಪೈಪೋಟಿಯಲ್ಲಿರುವವರ ಸಂಖ್ಯೆ 6ಕ್ಕೇರಿದೆ. ಮಾಜಿ ಕ್ರಿಕೆಟಿಗರಾದ ಲಾಲ್ ಚಂದ್ ರಜಪೂತ್, ಕರ್ನಾಟಕದ ದೊಡ್ಡ ಗಣೇಶ್, ಟಾಮ್ ಮೂಡಿ ಹಾಗೂ ರಿಚರ್ಡ್ ಪೈಬಸ್ ಅವರೂ ಅರ್ಜಿ ಸಲ್ಲಿಸಿದ್ದಾರೆ. ಇನ್ನು, ಹಾಲಿ ಕೋಚ್ ಅನಿಲ್ ಕುಂಬ್ಳೆ ಕೂಡಾ ಈ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ.[ಕುಂಬ್ಳೆಯಿಂದ ಕೊಹ್ಲಿ ಜತೆಗಿನ ಖಾಸಗಿ ಚಾಟ್ ಬಹಿರಂಗ?]

Sehwag, Moody apply for Indian cricket team head coach position

ಹಾಲಿ ಕೋಚ್ ಆಗಿರುವ ಅನಿಲ್ ಕುಂಬ್ಳೆ ಅವರ ಸೇವಾವಧಿ ಜೂ. 22ರಂದು ಕೊನೆಗೊಳ್ಳಲಿದೆ. 2016ರ ಜೂನ್ 23ರಂದು ಅವರು ಈ ಹುದ್ದೆಗೆ ನೇಮಿಸಲ್ಪಟ್ಟಿದ್ದರು.[ಭಾರತ -ಪಾಕ್ ಪಂದ್ಯ ಎಲ್ಲಿ ನೋಡ್ತೀರಿ ನನಗೆ ತಿಳಿಸಿ : ಸೆಹ್ವಾಗ್]

ಮುಖ್ಯ ತರಬೇತುದಾರರ ಹುದ್ದೆಗಾಗಿ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ವೈಯಕ್ತಿಕ ಸಂದರ್ಶನಗಳನ್ನು ನಡೆಸಿದ ಮೇಲೆ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಹಾಗೂ ಸೌರವ್ ಗಂಗೂಲಿ ಅವರುಳ್ಳ ಬಿಸಿಸಿಐ ಸಲಹಾ ಸಮಿತಿಯು ತರಬೇತುದಾರರನ್ನು ಆಯ್ಕೆ ಮಾಡುತ್ತಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+