Ind Vs Eng: ಜಿಂಬಾಬ್ವೆ ವಿರುದ್ಧ ಮಾಡಿದ ತಪ್ಪನ್ನು ಮತ್ತೆ ಮಾಡಬೇಡಿ : ಭಾರತ ತಂಡಕ್ಕೆ ಅನಿಲ್ ಕುಂಬ್ಳೆ ಸಲಹೆ

ಜಿಂಬಾಬ್ವೆ ವಿರುದ್ಧದ ಟಿ20 ವಿಶ್ವಕಪ್ 2022 ಸೂಪರ್ 12 ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಬದಲಿಗೆ ರಿಷಬ್ ಪಂತ್ ಆಯ್ಕೆ ಮಾಡುವ ಅಗತ್ಯ ಇರಲಿಲ್ಲ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.
ದಿನೇಶ್ ಕಾರ್ತಿಕ್ ಬದಲಿಗೆ ಆಯ್ಕೆಯಾದರೂ ಪಂತ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಆದರೂ, ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ರಿಷಬ್ ಪಂತ್ ಆಡಿಸಿದ್ದು, ಇಂಗ್ಲೆಂಡ್ ವಿರುದ್ಧ ಕೂಡ ಅವರನ್ನು ಆಡಿಸಬೇಕು ಎಂದು ಹೇಳಿದ್ದಾರೆ.
ಗುರುವಾರ, ನವೆಂಬರ್ 10 ರಂದು ಅಡಿಲೇಡ್ ಓವಲ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2022 ರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆಂಗ್ಲರ ವಿರುದ್ಧ ಸೆಣಸಲಿದೆ. ಈ ಹಣಾಹಣಿಯಲ್ಲಿ ವಿಜೇತರು ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCG) ಫೈನಲ್‌ನಲ್ಲಿ ಪಾಕಿಸ್ತಾನವನ್ನು ಎದುರಿಸಲಿದ್ದಾರೆ.
ಭಾರತ-ಇಂಗ್ಲೆಂಡ್ ಸೆಮಿಫೈನಲ್‌ನಲ್ಲಿ, ಭಾರತದ ಪ್ಲೇಯಿಂಗ್ XI ನಲ್ಲಿ ಕೀಪರ್-ಬ್ಯಾಟರ್ ಯಾರಾಗಿರಬೇಕು ಎಂಬುದರ ಕುರಿತು ಭಾರಿ ಚರ್ಚೆ ನಡೆದಿದೆ. ಈ ಬಗ್ಗೆ ಟೀಂ ಇಂಡಿಯಾದ ಮಾಜಿ ಕೋಚ್ ಅನಿಲ್ ಕುಂಬ್ಳೆ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಪ್ಲೇಯಿಂಗ್ XI ನಲ್ಲಿ ಯಾವ ಬದಲಾವಣೆ ಮಾಡಬೇಡಿ
ಕಳೆದ ಪಂದ್ಯದಲ್ಲಿ ಭಾರತ ಬದಲಾವಣೆ ಮಾಡಿ ಪಂತ್ ಅವರನ್ನು ಕರೆತಂದಾಗಿದೆ, ಸೆಮಿಫೈನಲ್‌ನಲ್ಲಿ ಅವರೊಂದಿಗೆ ಆಡಬೇಕು ಎಂದು ಹೇಳಿದ್ದಾರೆ. ಸೆಮಿಫೈನಲ್‌ನಲ್ಲಿ ತಂಡದಲ್ಲಿ ಬದಲಾವಣೆಯ ಅಗತ್ಯವಿದೆ ಎಂದು ನನಗೆ ಅನಿಸುವುದಿಲ್ಲ. ಕಾರ್ತಿಕ್‌ಗೆ ಅವಕಾಶಗಳು ಸಿಕ್ಕರೂ ರನ್ ಗಳಿಸಲಿಲ್ಲ ಎಂದು ಹೇಳಿದರು.
ಅಡಿಲೇಡ್‌ನಲ್ಲಿ ಬೌಂಡರಿಗಳು ಚಿಕ್ಕದಾಗಿರುವುದರಿಂದ ಅವರು ಎಡಗೈ ಆಟಗಾರ ಎಂದು ಪರಿಗಣಿಸಿ, ಇಂಗ್ಲೆಂಡ್ ವಿರುದ್ಧ ಪಂತ್ ಅವರನ್ನು ಸೇರಿಸುವುದು ಆಟದ ತಂತ್ರದಲ್ಲಿ ನಡೆಯಾಗಿರಬಹುದು ಎಂದು ಕುಂಬ್ಳೆ ಒಪ್ಪಿಕೊಂಡರು.
ಯಶಸ್ಸಿನ ಜೊತೆ ಒಲಿದ ಅದೃಷ್ಟ: ಸೂರ್ಯಕುಮಾರ್ ಯಾದವ್‌ಗೆ ಫುಲ್ ಡಿಮ್ಯಾಂಡ್!

ಅಡಿಲೇಡ್ ಓವಲ್ ಮೈದಾನ ಚಿಕ್ಕದಾಗಿದೆ
"ಆಟದಲ್ಲಿ ಇನ್ನೂ ಒಂದು ಅಂಶವಿದೆ. ಅಡಿಲೇಡ್‌ನಲ್ಲಿನ ಅಡ್ಡ ಬೌಂಡರಿ ತುಂಬಾ ಚಿಕ್ಕದಾಗಿದೆ. ಇಂಗ್ಲೆಂಡ್ ಆದಿಲ್ ರಶೀದ್ ಅವರನ್ನು ಹೊಂದಿದೆ, ಆದ್ದರಿಂದ ಭಾರತವು ಎಡಗೈ ಆಟಗಾರನನ್ನು ಎಲ್ಲಿ ಬೇಕಾದರೂ ಬಳಸಬಹುದು. ಪಂತ್ ನಂ.5 ಅಥವಾ ನಂ.6ರಲ್ಲಿ ಬ್ಯಾಟ್ ಮಾಡಲು ಸಾಧ್ಯವಿಲ್ಲ ಅಂತಲ್ಲ. ಅವರು ಇತರ ಸ್ವರೂಪಗಳಲ್ಲಿ ಮ್ಯಾಚ್ ವಿನ್ನಿಂಗ್ ನಾಕ್‌ಗಳನ್ನು ಆಡುವುದನ್ನು ನಾವು ನೋಡಿದ್ದೇವೆ" ಎಂದು ಹೇಳಿದ್ದಾರೆ.
ರಿಷಬ್ ಪಂತ್ ಸ್ಫೋಟಕ ಆಟಗಾರ ಅದರಲ್ಲಿ ಯಾವುದೇ ಸಂಶಯವಿಲ್ಲ, ಆದರೆ, ಅವರನ್ನು ಮೊದಲನೇ ಪಂದ್ಯದಿಂದಲೇ ಆಡಿಸಬೇಕಿತ್ತು ಎಂದು ಹೇಳಿದ್ದಾರೆ.

ಪಂತ್ ಆಡಿದರೆ ಪಾಂಡ್ಯ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ
ಪಂತ್ ಅವರನ್ನು ಪ್ಲೇಯಿಂಗ್ ಇಲೆವೆನ್‌ಗೆ ಸೇರಿಸಿಕೊಳ್ಳುವುದು ಹಾರ್ದಿಕ್ ಪಾಂಡ್ಯ ಅವರನ್ನು ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡುತ್ತದೆ ಎಂದು ಕುಂಬ್ಳೆ ಒಪ್ಪಿಕೊಂಡರು. ಆದಾಗ್ಯೂ, ಅವರು ಸೆಮಿಫೈನಲ್‌ನಲ್ಲಿ ಮಾರ್ಪಡಿಸಿದ ಪಾತ್ರವನ್ನು ವಹಿಸಬೇಕಾದರೆ ಹೊಂದಿಕೊಳ್ಳಲು ಅನುಭವಿ ಆಲ್‌ರೌಂಡರ್ ಪಾಂಡ್ಯಗೆ ಬೆಂಬಲ ನೀಡಿದರು.
"ಪಂತ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದರಿಂದ, ಪಾಂಡ್ಯ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಾಗುತ್ತದೆ. ಮಧ್ಯಮ ಕ್ರಮಾಂಕದಲ್ಲಿ ಎಡಗೈ ಬ್ಯಾಟರ್ ಇರುವುದು ಉತ್ತಮ ಎಂದು ನಾನು ಭಾವಿಸುತ್ತೇನೆ. ಅಕ್ಷರ್ ಪಟೇಲ್ ಬದಲಿಗೆ ಯುಜುವೇಂದ್ರ ಚಹಾಲ್ ಕೂಡ ಆಡಬಹುದು, ಹಾರ್ದಿಕ್ ಪಪಾಂಡ್ಯ ಐಪಿಎಲ್‌ನಲ್ಲಿ ಮುಂಬೈ ತಂಡಕ್ಕೆ ಫಿನಿಷರ್ ಪಾತ್ರ ನಿರ್ವಹಿಸುತ್ತಿದ್ದರು" ಎಂದು ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
2022ರ ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಇಲ್ಲಿಯವರೆಗೆ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 40, 2, 5 ಮತ್ತು 18 ರನ್‌ಗಳನ್ನು ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications