ಯಶಸ್ಸಿನ ಜೊತೆ ಒಲಿದ ಅದೃಷ್ಟ: ಸೂರ್ಯಕುಮಾರ್ ಯಾದವ್‌ಗೆ ಫುಲ್ ಡಿಮ್ಯಾಂಡ್!

ಆತನಿಗೆ ಆಕಾಶವೇ ಸರಹದ್ದು, ಟಿ20 ವಿಶ್ವಕಪ್ ಆರಂಭವಾದಾಗಿನಿಂದ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತುತ್ತಲೇ ಇದ್ದಾನೆ. ಸೂರ್ಯಕುಮಾರ್ ಯಾದವ್ ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಭಾರಿ ಚರ್ಚೆಯಲ್ಲಿರುವ ಆಟಗಾರ. ಆತನ 360 ಡಿಗ್ರಿ ಬ್ಯಾಟಿಂಗ್ ಆತನ ಜನಪ್ರಿಯತೆಯನ್ನು ಹೆಚ್ಚಿಸಿದೆ.
ಸೂರ್ಯಕುಮಾರ್ ಯಾದವ್‌ರನ್ನು ಸದ್ಯ ಕ್ರಿಕೆಟ್ ದಿಗ್ಗಜ ಎಬಿ ಡಿವಿಲಿಯರ್ಸ್‌ಗೆ ಹೋಲಿಕೆ ಮಾಡಲಾಗುತ್ತಿದೆ. ಸ್ವತಃ ಎಬಿ ಡಿವಿಲಿಯರ್ಸ್ ಕೂಡ ಸೂರ್ಯ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ 5 ಪಂದ್ಯಗಳಿಂದ 193.97 ಸ್ಟ್ರೈಕ್ ರೇಟ್‌ನಲ್ಲಿ ಮೂರು ಅರ್ಧಶತಕಗಳು ಸೇರಿದಂತೆ 225 ರನ್ ಗಳಿಸಿದ್ದಾರೆ.
ಕ್ರಿಕೆಟ್ ಲೋಕದಲ್ಲಿ ಅವರಿಗೆ ಜನಪ್ರಿಯತೆ ಹೆಚ್ಚಾದಂತೆ ಜಾಹೀರಾತು ಲೋಕದಲ್ಲಿ ಕೂಡ ಅವರಿಗೆ ಸಖತ್ ಬೇಡಿಕೆ ಸೃಷ್ಟಿಯಾಗಿದೆ. ಸೂರ್ಯಕುಮಾರ್ ಯಾದವ್‌ರ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಏಜೆನ್ಸಿಯ ಪ್ರಕಾರ, 6-7 ಕ್ಕೂ ಹೆಚ್ಚಿನ ಟಾಪ್ ಬ್ರ್ಯಾಂಡ್‌ಗಳು ಸೂರ್ಯಕುಮಾರ್ ಯಾದವ್‌ರನ್ನು ತಮ್ಮ ಹೊಸ ಬ್ರಾಂಡ್ ರಾಯಭಾರಿಯನ್ನಾಗಿ ಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿವೆ. ತಮಗೆ ಬೇಡಿಕೆ ಹೆಚ್ಚಾದ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್‌ರ ಶುಲ್ಕ ಕೂಡ ಶೇಕಡ 200 ರಷ್ಟು ಹೆಚ್ಚಾಗಿದೆ.
"ಸೂರ್ಯಕುಮಾರ್ ಯಾದವ್ ಒಬ್ಬ ಅತ್ಯಾಕರ್ಷಕ ಆಟಗಾರ ಮತ್ತು ತನ್ನ ಆಟದ ಮೂಲಕ ರಾಷ್ಟ್ರದ ಗಮನವನ್ನು ಸೆಳೆದಿದ್ದಾರೆ. ನಾವು ಜುಲೈ 2021 ರಲ್ಲಿ ಅವರ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ ಮತ್ತು ಅವರನ್ನು ದೊಡ್ಡ ವೇದಿಕೆಗೆ ಹೇಗೆ ಸಿದ್ಧಪಡಿಸುವುದು ಎಂಬುದರ ಕುರಿತು ಗಮನಹರಿಸಿದ್ದೇವೆ" ಎಂದು ಪ್ರಾಯೋಜಕತ್ವಗಳ ಮಾರಾಟ ಮತ್ತು ಪ್ರತಿಭೆಯ ಮುಖ್ಯಸ್ಥ ನಿಖಿಲ್ ಬಾರ್ಡಿಯಾ ತಿಳಿಸಿದ್ದಾರೆ.

ಸದ್ಯದಲ್ಲೇ 6-7 ಬ್ರಾಂಡ್‌ಗಳಿಗೆ ರಾಯಭಾರಿ
"ಮುಂಬರುವ ತಿಂಗಳುಗಳಲ್ಲಿ ನಾವು 6-7 ಬ್ರಾಂಡ್‌ಗಳನ್ನು ಪ್ರಕಟಿಸುತ್ತೇವೆ, ಇದರಲ್ಲಿ ಪಾನೀಯಗಳು, ಮೊಬೈಲ್ ಪರಿಕರಗಳು, ಮಾಧ್ಯಮ, ಕ್ರೀಡೆ ಮತ್ತು ಕ್ಯಾಶುಯಲ್ ಉಡುಪುಗಳು ಮತ್ತು ವಿದೇಶದಲ್ಲಿ ಶಿಕ್ಷಣದ ಸೇವೆಗಳು ಸೇರಿವೆ" ಎಂದು ನಿಖಿಲ್ ಬಾರ್ಡಿಯಾ ತಿಳಿಸಿದ್ದಾರೆ.
ಈ ವರ್ಷದ ಅಂತ್ಯದ ವೇಳೆಗೆ ಸೂರ್ಯಕುಮಾರ್ ಯಾದವ್ ಸುಮಾರು 20 ಬ್ರಾಂಡ್‌ಗಳಿಗೆ ರಾಯಬಾರಿಯಾಗಲಿದ್ದಾರೆ ಎಂದು ನಿಖಿಲ್ ಬಾರ್ಡಿಯಾ ಭರವಸೆ ವ್ಯಕ್ತಪಡಿಸಿದ್ದಾರೆ.

ಮೂರು ಪಟ್ಟು ಶುಲ್ಕ ಹೆಚ್ಚಳ
ಅವರ ನಿರ್ಭೀತ ಆಟ, ಟಿ20 ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ, ಒಂದೇ ವರ್ಷದಲ್ಲಿ 1000 ರನ್ ಪೂರೈಕೆ ಹೀಗೆ ಹಲವು ಸಾಧನೆಗಳಿಂದ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಇದೆಲ್ಲದರಿಂದ ಅವರ ಬ್ರಾಂಡ್ ಮೌಲ್ಯ ಕೂಡ ಹೆಚ್ಚಾಗಿದೆ.
ಅವರ ಮ್ಯಾನೇಜರ್‌ಗಳ ಪ್ರಕಾರ, ಅವರ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್ ಶುಲ್ಕವನ್ನು ಸುಮಾರು 3 ಪಟ್ಟು ಹೆಚ್ಚಿಸಲಾಗಿದೆ. 2022ರ ಐಪಿಎಲ್‌ಗೆ ಮುನ್ನ ದಿನಕ್ಕೆ 20 ಲಕ್ಷ ಇದ್ದ ಶುಲ್ಕ ಈಗ 65-70 ಲಕ್ಷಕ್ಕೆ ಹೆಚ್ಚಳವಾಗಿದೆ. ಐಪಿಎಲ್ 2022ಕ್ಕೆ ಮುನ್ನ 4 ಬ್ರಾಂಡ್‌ಗಳಿಗೆ ರಾಯಭಾರಿಯಾಗಿದ್ದ ಅವರು ಈಗ 10 ಬ್ರಾಂಡ್‌ಗಳಿಗೆ ರಾಯಭಾರಿಯಾಗಿದ್ದಾರೆ.

ಪ್ರಮುಖ ಬ್ರಾಂಡ್‌ಗಳಿಗೆ ಸಹಿ
ಸೂರ್ಯಕುಮಾರ್ ಯಾದವ್ ಈಗಾಗಲೇ ಸಹಿ ಮಾಡಿರುವ ಕೆಲವು ಬ್ರಾಂಡ್‌ಗಳಲ್ಲಿ ರಾಯಲ್ ಸ್ಟಾಗ್, ಫಾರ್ಮಾ (ಹೆಲ್ಮೆಟ್‌ಗಳು), ಡ್ರೀಮ್ 11, ಎಸ್‌ಎಸ್ (ಕ್ರಿಕೆಟ್ ಬ್ಯಾಟ್ಸ್ ಮತ್ತು ಸಲಕರಣೆಗಳು) ಮತ್ತು ಮ್ಯಾಕ್ಸಿಮಾ (ಸ್ಮಾರ್ಟ್ ವಾಚ್‌ಗಳು) ಸೇರಿವೆ.
ಇತ್ತೀಚೆಗೆ ಸ್ವದೇಶಿ ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪನಿ ಬೌಲ್ಟ್ ಆಡಿಯೊಗೆ ಬ್ರಾಂಡ್ ಅಂಬಾಸಿಡರ್ ಎಂದು ಅವರನ್ನು ಘೋಷಿಸಲಾಯಿತು. ಟಿ20 ವಿಶ್ವಕಪ್‌ನಲ್ಲಿ ಅವರ ಇತ್ತೀಚಿನ ಪ್ರದರ್ಶನದ ನಂತರ ಬ್ರಾಂಡ್‌ಗಳ ಸಂಖ್ಯೆ 20 ಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications