'ಜಂಬೋ' ಕುಂಬ್ಳೆ ಹುಟ್ಟುಹಬ್ಬಕ್ಕೆ ಟಾಪ್ 5 ಕ್ರಿಕೆಟ್ ಕ್ಷಣಗಳು

ಸ್ಪಿನ್ ಮಾಂತ್ರಿಕ, ಕನ್ನಡಿಗ, ಅಭಿಮಾನಿಗಳ ಪಾಲಿನ ಪ್ರೀತಿಯ 'ಜಂಬೋ' ಅನಿಲ್ ಕುಂಬ್ಳೆ ಅವರಿಗೆ ಇಂದು (ಅಕ್ಟೋಬರ್ 17) 48ನೇ ಹುಟ್ಟುಹಬ್ಬದ ಸಂಭ್ರಮ. ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಆಟಗಾರರ ಪೈಕಿ ಅನಿಲ್ ಕುಂಬ್ಳೆ ಅವರು ತಮ್ಮದೇ ಆದ ವಿಶಿಷ್ಟ ಬೌಲಿಂಗ್ ಶೈಲಿ ಮೂಲಕ ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದಾರೆ.
ಎರಡು ದಶಕಗಳ ಕಾಲ ಕ್ರಿಕೆಟ್ ಮೈದಾನದಲ್ಲಿ ಹತ್ತು ಹಲವು ರೋಚಕ ಸನ್ನಿವೇಶಗಳನ್ನು ಸೃಷ್ಟಿಸಿದ ಅನಿಲ್ ಕುಂಬ್ಳೆ ಅವರ ಪರಿಶ್ರಮ, ಹೋರಾಟ ಮನೋಭಾವವನ್ನು ಎಲ್ಲರೂ ಮುಕ್ತಕಂಠದಿಂದ ಹೊಗಳುತ್ತಾರೆ.
ಕುಂಬ್ಳೆ ಅವರು ಭಾರತದ ಗೆಲುವಿಗೆ ಅನೇಕ ಬಾರಿ ಕಾರಣರಾಗಿದ್ದರು. ಅವರ ವೃತ್ತಿ ಬದುಕಿನಲ್ಲಿ ಅನೇಕ ಸ್ಮರಣೀಯ ಪಂದ್ಯಗಳನ್ನು ಗುರುತಿಸಬಹುದು. ಈ ಪೈಕಿ ಮೈಖೇಲ್ ಆಯ್ದ ಐದು ರಸಕ್ಷಣಗಳನ್ನು ನಿಮ್ಮ ಮುಂದಿಡುತ್ತಿದೆ.
ಕರ್ನಾಟಕ ಅನಿಲ್ ಕುಂಬ್ಳೆ ಅವರು ಭಾರತ ಪರ ಲೆಗ್ ಸ್ಪಿನ್ನರ್ ಆಗಿ ಟೆಸ್ಟ್ ಕ್ರಿಕೆಟ್ ಹಾಗೂ ಏಕದಿನ ಕ್ರಿಕೆಟ್ ಎರಡರಲ್ಲೂ ಅತ್ಯಧಿಕ ವಿಕೆಟ್ ಪಡೆದಿರುವ ಬೌಲರ್ ಆಗಿದ್ದಾರೆ.
ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕುಂಬ್ಳೆ ಪಾದಾರ್ಪಣೆ ಮಾಡಿದ್ದು ಎಪ್ರಿಲ್ 25, 1990ರಂದು, ಶ್ರೀಲಂಕಾ ಮೇಲಿನ ಪಂದ್ಯದಲ್ಲಿ. ಅದೇ ವರ್ಷ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟರು. ಅನಿಲ್ ಕುಂಬ್ಳೆ, 619 ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ. ಅತಿ ಹೆಚ್ಚು ವಿಕೆಟ್ ಪಡೆದ ಬೌಲರುಗಳ ಪೈಕಿ ಮೂರನೆಯವರು.

#1 ಪಾಕಿಸ್ತಾನದ ವಿರುದ್ಧ 10/74, 1999
ಫೆಬ್ರವರಿ 7, 1999ರಂದು ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಪಾಕಿಸ್ತಾನದ ವಿರುದ್ಧ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ 26.3-9-74-10 ಅದ್ಭುತ ಸ್ಪೆಲ್ ಮಾಡಿ ಭಾರತಕ್ಕೆ 212ರನ್ ಗಳ ಬೃಹತ್ ಜಯ ತಂದಿತ್ತಿದ್ದರು. ಈ ನೆನಪಿನಲ್ಲಿ ತಮ್ಮ ಟ್ವಿಟ್ಟರ್ ಐಡಿಯನ್ನು @anilkumble1074 ಎಂದು ಆಯ್ಕೆ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

#2 ವೆಸ್ಟ್ ಇಂಡೀಸ್ ವಿರುದ್ಧ 6/12, 1993
ಹೀರೋ ಕಪ್ ಪಂದ್ಯಾವಳಿಯ ಫೈನಲ್ ನಲ್ಲಿ ಭಾರತವನ್ನು 225 ಸ್ಕೋರಿಗೆ ನಿಯಂತ್ರಿಸಿದ್ದ ವೆಸ್ಟ್ ಇಂಡೀಸ್ ಗೆಲುವಿನ ಕನಸು ಕಾಣುತ್ತಿತ್ತು. ಆದರೆ, ಲೆಗ್ ಸ್ಪಿನ್ನರ್ ಕುಂಬ್ಳೆ ಅವರು 6/12 ಪಡೆದು ವಿಂಡೀಸ್ ಆಸೆಗೆ ತಣ್ಣಿರೆರಚಿದರು. ಇದು ಭಾರತದ ಬೌಲರ್ ನ ಶ್ರೇಷ್ಠ ಬೌಲಿಂಗ್ ಸಾಧನೆಯಾಗಿತ್ತು. ಆದರೆ, 2014ರಲ್ಲಿ ಬಾಂಗ್ಲಾದೇಶದಲ್ಲಿ ಕರ್ನಾಟಕದವರೇ ಆದ ಸ್ಟುವರ್ಟ್ ಬಿನ್ನಿ ಅವರು 6/4 ಗಳಿಸಿ, ಸಾಧನೆಯನ್ನು ಉತ್ತಮ ಪಡಿಸಿದರು.
ಕಿಚ್ಚ ಸುದೀಪ್ ನಟನೆ ನನಗಿಷ್ಟ ಎಂದ ಅನಿಲ್ ಕುಂಬ್ಳೆ!

#3 ಪಾಕಿಸ್ತಾನ ವಿರುದ್ಧ 6/72, 2004
ಮುಲ್ತಾನ್ ಟೆಸ್ಟ್ ಪಂದ್ಯ, ಸೆಹ್ವಾಗ್ ಅವರ ತ್ರಿಶತಕದ ಸಂಭ್ರಮದ ಜತೆಗೆ ಕುಂಬ್ಳೆ ಅವರು ಎರಡನೇ ಇನ್ನಿಂಗ್ಸ್ ನಲ್ಲಿ ಗಳಿಸಿದ 6/72 ನಿಂದಾಗಿ ಪಾಕಿಸ್ತಾನ ವಿರುದ್ಧ ಭಾರತವು 52 ರನ್ ಗಳ ಜಯ ದಾಖಲಿಸಿತು. ಮೊಹಮ್ಮದ್ ಯೂಸುಫ್ ಶತಕ ವ್ಯರ್ಥವಾಯಿತು.

#4 ವೆಸ್ಟ್ ಇಂಡೀಸ್ ವಿರುದ್ಧ 2002
2002ರಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯವೊಂದು ನೀರಸ ಡ್ರಾನಲ್ಲಿ ಅಂತ್ಯ ಕಂಡಿತ್ತು. ಆದರೆ, ಆ ಪಂದ್ಯದಲ್ಲಿ ಅನಿಲ್ ಕುಂಬ್ಳೆ ತೋರಿದ ಹೋರಾಟ ಮನೋಭಾವ ಭಾರಿ ಮೆಚ್ಚುಗೆಗೆ ಪಾತ್ರವಾಯಿತು. ಮರ್ವಿನ್ ದಿಲ್ಲೋನ್ ಎಸೆತದಲ್ಲಿ ಪೆಟ್ಟು ತಿಂದಿದ್ದ ಕುಂಬ್ಳೆ ಅವರು ತಲೆಗೆ ಬ್ಯಾಂಡೇಜ್ ಕಟ್ಟಿಕೊಂಡೇ ಮೈದಾನಕ್ಕೆ ಇಳಿದರು. ಬ್ರಿಯಾನ್ ಲಾರಾ ಅವರ ವಿಕೆಟ್ ಕೂಡಾ ಪಡೆದಿದ್ದರು.
ಕ್ರಿಕೆಟ್: ಟಾಪ್ 5 ಶ್ರೇಷ್ಠ ಬೌಲಿಂಗ್ ಪ್ರದರ್ಶನ

#5 ಇಂಗ್ಲೆಂಡ್ ವಿರುದ್ಧ 100, 2007
ಇಂಗ್ಲೆಂಡ್ ನಲ್ಲಿ 21 ವರ್ಷಗಳ ನಂತರ ಭಾರತ ತಂಡವು ಟೆಸ್ಟ್ ಸರಣಿ ಗೆಲ್ಲಲು ಕುಂಬ್ಳೆ ಕೂಡಾ ಕಾರಣರಾಗಿದ್ದರು. ಓವಲ್ ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಪ್ ಸ್ತರ ಬ್ಯಾಟ್ಸ್ ಮನ್ ಗಳು ವೈಫಲ್ಯ ಕಂಡಾಗ ಬಾಲಂಗೋಚಿಯಂತೆ ಬಂದ ಅನಿಲ್ ಕುಂಬ್ಳೆ ಅವರು ಟೆಸ್ಟ್ ಬದುಕಿನಲ್ಲಿ ಶತಕ ಗಳಿಸಿದ್ದಲ್ಲದೆ, ಸರಣಿಗೆ ಜೀವ ತುಂಬಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications