ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ಧ ಅರೆಸ್ಟ್ ವಾರೆಂಟ್!

ನವದೆಹಲಿ, ಸೆಪ್ಟೆಂಬರ್ 2: ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರ ವಿರುದ್ಧ ಕೋಲ್ಕತ್ತಾ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ. ಕೌಟುಂಬಿಕೆ ಹಿಂಸೆ ಆರೋಪ ಎದುರಿಸುತ್ತಿರುವ ಶಮಿಗೆ ಬಂಧನ ಭೀತಿ ಎದುರಾಗಿದೆ. ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡದ ಪರ ಶಮಿ ಟೆಸ್ಟ್ ಪಂದ್ಯವನ್ನಾಡುತ್ತಿದ್ದಾರೆ.
ಮೊಹಮ್ಮದ್ ಶಮಿ ಮತ್ತು ಅವರ ಸಹೋದರ ಹಸೀದ್ ಅಹ್ಮದ್ ವಿರುದ್ಧ ಶಮಿ ಪತ್ನಿ ಹಸೀನ್ ಜಾಹನ್ ಕೌಟುಂಬಿಕ ಹಿಂಸೆಯಡಿ ದೂರು ದಾಖಲಿಸಿದ್ದರು. ಹೀಗಾಗಿ ಸೋಮವಾರ (ಸೆಪ್ಟೆಂಬರ್ 2) ವೆಸ್ಟ್ ಬೆಂಗಾಲ್‌ನ ಕೋಲ್ಕತ್ತಾದಲ್ಲಿರುವ ಅಲಿಪೋರ್ ಕೋರ್ಟ್ ಶಮಿ ವಿರುದ್ಧ ಬಂಧನ ವಾರೆಂಟ್ ಜಾರಿಗೊಳಿಸಿದೆ.
ಭಾರತ vs ವೆಸ್ಟ್ ಇಂಡೀಸ್, 2ನೇ ಟೆಸ್ಟ್, 4ನೇ ದಿನ, Live ಸ್ಕೋರ್‌ಕಾರ್ಡ್
ಜಮೈಕಾದ ಕಿಂಗ್‌ಸ್ಟನ್‌ನ ಸಬೀನಾ ಪಾರ್ಕ್‌ನಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ದ್ವಿತೀಯ ಮತ್ತು ಕೊನೆಯ ಟೆಸ್ಟ್ ಪಂದ್ಯವನ್ನಾಡುತ್ತಿರುವ ಬಲಗೈ ವೇಗಿ ಶಮಿ, 15 ದಿನಗಳ ಒಳಗೆ ಶರಣಾಗುವಂತೆ ಕೋರ್ಟ್ ಸೂಚಿಸಿದೆ. ಇನ್ನೆರಡು ದಿನಗಳಲ್ಲಿ ವಿಂಡೀಸ್ ಪ್ರವಾಸ ಸರಣಿ ಮುಗಿಯಲಿರುವುದರಿಂದ ಶಮಿ ಅನಂತರ ಕೋರ್ಟ್‌ಗೆ ಹಾಜರಾಗುವುದನ್ನು ನಿರೀಕ್ಷಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯಕಾರಿ, 'ಅರೆಸ್ಟ್ ವಾರೆಂಟ್ ನೀಡಲಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಈ ಸಮಯದಲ್ಲಿ ನಾವು ಇದರಲ್ಲಿ ಭಾಗಿಯಾಗುವುದನ್ನು ನಿಜಕ್ಕೂ ನಿರೀಕ್ಷಿಸಬೇಡಿ. ಚಾರ್ಜ್ ಶೀಟ್ ನೋಡಿದ ಬಳಿಕ ಬಿಸಿಸಿಐ ಕಾನೂನು, ಯಾವುದಾದರೂ ಕ್ರಮ ಕೈಗೊಂಡ ಅನಂತರ ಮುಂದಿನದನ್ನು ನಿರ್ಧರಿಸುತ್ತೇವೆ,' ಎಂದು ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications