For Quick Alerts
ALLOW NOTIFICATIONS  
For Daily Alerts
 

ಆ್ಯಶಸ್ 2ನೇ ಟೆಸ್ಟ್: ಇಂಗ್ಲೆಂಡ್‌ 236 ರನ್‌ಗಳಿಗೆ ಆಲೌಟ್‌, ಆಸ್ಟ್ರೇಲಿಯಾಗೆ 282 ರನ್‌ಗಳ ಮುನ್ನಡೆ

Ashes 2nd test

ಅಡಿಲೇಡ್ ಓವಲ್‌ನಲ್ಲಿ ನಡೆಯುತ್ತಿರುವ ಆ್ಯಶಸ್‌ ಟೆಸ್ಟ್ ಸರಣಿಯ ಎರಡನೇ ಟೆಸ್ಟ್‌ನ ಮೂರನೇ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯಾ ಭರ್ಜರಿ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್ ತಂಡವನ್ನ 236ರನ್‌ಗಳಿಗೆ ಆಲೌಟ್ ಮಾಡಿದ ಆಸ್ಟ್ರೇಲಿಯಾ ದಿನದಾಟದಂತ್ಯಕ್ಕೆ 282 ರನ್‌ಗಳ ಮುನ್ನಡೆ ಸಾಧಿಸಿದೆ.

ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್‌ ಒಂದು ವಿಕೆಟ್ ನಷ್ಟಕ್ಕೆ 45ರನ್ ಕಲೆಹಾಕಿದೆ. ಡೇವಿಡ್ ವಾರ್ನರ್ 13ರನ್‌ಗಳಿಸಿದ್ದಾಗ ಸ್ಟುವರ್ಟ್ ಬ್ರಾಡ್ ಚುರುಕು ಫೀಲ್ಡಿಂಗ್‌ಗೆ ರನೌಟ್ ಆದ್ರು. ಚೊಚ್ಚಲ ಟೆಸ್ಟ ಪಂದ್ಯವನ್ನಾಡುತ್ತಿರುವ ಮಿಚೆಲ್ ನೆಸರ್ ಅಜೇಯ 2ರನ್ ಕಲೆಹಾಕಿದ್ರೆ, ಮಾರ್ಕಸ್ ಹ್ಯಾರಿಸ್ ಅಜೇಯ 21ರನ್‌ಗಳಿಸಿ ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇದಲ್ಲದೆ ಆಸ್ಟ್ರೇಲಿಯಾ 282ರನ್‌ಗಳ ಮುನ್ನಡೆಯೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.

ಇದಕ್ಕೂ ಮೊದಲು ಮೂರನೇ ದಿನದಾಟದಲ್ಲಿ ಆಸ್ಟ್ರೇಲಿಯಾದ 473ರನ್‌ಗಳಿಗೆ ಉತ್ತರವಾಗಿ ಬ್ಯಾಟ್ ಬೀಸಿದ ಇಂಗ್ಲೆಂಡ್‌ 2 ವಿಕೆಟ್ ನಷ್ಟಕ್ಕೆ 17 ರನ್ ಕಲೆಹಾಕಿತ್ತು. ಆದ್ರೆ ಮೂರನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ನಾಯಕ ಜೋ ರೂಟ್ ಮತ್ತು ಡೇವಿಡ್ ಮಲನ್ ಆಸೀಸ್ ಬೌಲರ್‌ಗಳನ್ನ ತಾಳ್ಮೆಯಿಂದ ಎದುರಿಸಿದ್ರು.

138ರನ್‌ಗಳ ಜೊತೆಯಾಟವಾಡಿದ್ದ ಈ ಜೋಡಿಯನ್ನ ಆಸೀಸ್ ಬೌಲರ್ ಗ್ರೀನ್ ಬೇರ್ಪಡಿಸಿದ್ರು. 116 ಎಸೆತಗಳಲ್ಲಿ 62 ರನ್‌ ಕಲೆಹಾಕಿದ್ದ ಜೋ ರೂಟ್ ಸ್ಟೀವನ್ ಸ್ಮಿತ್‌ಗೆ ಕ್ಯಾಚಿತ್ತು ಪೆವಿಲಿಯನ್‌ಗೆ ಸೇರಿದ್ರು. ಇದ್ರ ಬೆನ್ನಲ್ಲೇ ಶತಕದ ಭರವಸೆ ಮೂಡಿಸಿದ್ದ ಡೇವಿಡ್ ಮಲನ್ 150 ಎಸೆತಗಳಲ್ಲಿ 80ರನ್‌ಗೆ ಮಿಚೆಲ್‌ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದ್ರು. ಬೆನ್‌ ಸ್ಟೋಕ್ಸ್ ಆಟವೂ 34ರನ್‌ಗೆ ಕೊನೆಗೊಂಡಿತು.

ಜೋ ರೂಟ್ ವಿಕೆಟ್ ಪಡೆದಿದ್ದ ಗ್ರೀನ್ ವಿಶ್ವದ ಶ್ರೇಷ್ಟ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್ 34ರನ್‌ಗಳಿಸಿದ್ದಾಗ ಕ್ಲೀನ್ ಬೌಲ್ಡ್ ಮಾಡುವಲ್ಲಿ ಯಶಸ್ವಿಯಾದ್ರು. ಸ್ಟೋಕ್ಸ್ ಬಳಿಕ ಬಂದ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳೆಲ್ಲಾ ಒಬ್ಬರ ಹಿಂದೆ ಒಬ್ಬೊಬ್ಬರಾಗಿ ಪೆವಿಲಿಯನ್ ಸೇರಿಕೊಂಡ್ರು.

ಒಲ್ಲಿ ಪೋಪ್ 5, ವಿಕೆಟ್ ಕೀಪರ್ ಜಾಸ್ ಬಟ್ಲರ್ 0, ಕ್ರಿಸ್ ವೋಕ್ಸ್ 24, ರಾಬಿನ್‌ಸನ್ 0, ಸ್ಟುವರ್ಟ್ ಬ್ರಾಡ್ 9ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು. ಅಂತಿಮವಾಗಿ ಇಂಗ್ಲೆಂಡ್ 236ರನ್‌ಗಳಿಗೆ ಸರ್ವಪತನಗೊಂಡು ಭಾರೀ ಹಿನ್ನಡೆ ಅನುಭವಿಸಿದೆ.

ಈಗಾಗಲೇ ಮೊದಲ ಟೆಸ್ಟ್ ಸೋತಿರುವ ಜೋ ರೂಟ್ ಬಳಗ, ಎರಡನೇ ಆ್ಯಶಸ್ ಟೆಸ್ಟ್‌ನಲ್ಲೂ ಬಹುತೇಕ ಪಂದ್ಯವನ್ನ ಆಸ್ಟ್ರೇಲಿಯಾಗೆ ಬಿಟ್ಟುಕೊಟ್ಟಿದೆ. ಕಾಂಗರೂಗಳನ್ನ ನಾಲ್ಕನೇ ದಿನದಾಟದಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದ್ರೆ ಮಾತ್ರ ಪಂದ್ಯದ ಮೇಲೆ ಸ್ವಲ್ಪ ಹಿಡಿತ ಸಾಧಿಸಬಹುದು.

ಆಸ್ಟ್ರೇಲಿಯಾ ತಂಡದ ಪ್ಲೇಯಿಂಗ್ 11
ಮಾರ್ಕಸ್ ಹ್ಯಾರಿಸ್, ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್ (ನಾಯಕ), ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮೈಕೆಲ್ ನೆಸರ್, ಮಿಚೆಲ್ ಸ್ಟಾರ್ಕ್, ನಥಾನ್ ಲಿಯಾನ್, ಜೈ ರಿಚರ್ಡ್ಸನ್

ಇಂಗ್ಲೆಂಡ್ ತಂಡದ ಪ್ಲೇಯಿಂಗ್ 11
ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜೋ ರೂಟ್(ನಾಯಕ), ಬೆನ್ ಸ್ಟೋಕ್ಸ್, ಆಲಿ ಪೋಪ್, ಜೋಸ್ ಬಟ್ಲರ್(ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಆಲಿ ರಾಬಿನ್ಸನ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್

Story first published: Saturday, December 18, 2021, 19:05 [IST]
Other articles published on Dec 18, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+