ಏಷ್ಯಾಕಪ್: ಟಾಸ್ ಗೆದ್ದ ಹಾಂಕಾಂಗ್ ಬ್ಯಾಟಿಂಗ್ ಆಯ್ಕೆ, ಗೆಲ್ಲುವ ವಿಶ್ವಾಸದಲ್ಲಿ ಪಾಕ್

ದುಬೈ, ಸೆಪ್ಟೆಂಬರ್ 16: ಏಷ್ಯಾ ಕಪ್ ಕ್ರಿಕೆಟ್ 2018ರ ಎರಡನೇ ಪಂದ್ಯ ಪಾಕಿಸ್ತಾನ ಮತ್ತು ಹಾಂಕಾಂಗ್ ನಡುವೆ ದುಬೈನಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದಿರುವ ಹಾಂಕಾಂಗ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಕ್ರಿಕೆಟ್ ಶಿಶು ಹಾಂಕಾಂಗ್ ತಂಡ ಇದೇ ವರ್ಷದ ಆರಂಭದಲ್ಲಿ ಏಕದಿನ ಆಡುವ ಅರ್ಹತೆಯನ್ನು ಕಳೆದುಕೊಂಡಿತ್ತು. ಹಾಗಾಗಿ ಏಷ್ಯಾಕಪ್ ಟೂರ್ನಿಯಲ್ಲಾಡಲು ಅರ್ಹತಾ ಸುತ್ತಿನ ಪಂದ್ಯಗಳನ್ನು ಆಡಿ ಪ್ರಸ್ತುತ ಟೂರ್ನಿಗೆ ಆಯ್ಕೆ ಆಗಿದೆ.
ಬಲಾಬಲ ಲೆಕ್ಕಾಚಾರದಲ್ಲಿ ಪಾಕಿಸ್ತಾನ ತಂಡವು ಅತ್ಯಂತ ಬಲಿಷ್ಠವಾಗಿದ್ದು, ಗೆಲುವು ಪಾಕಿಸ್ತಾನದ್ದೇ ಎಂದು ವಿಶ್ಲೇಷಿಸಲಾಗಿದೆ. ಪಾಕಿಸ್ತಾನವು ಬಹುತೇಕ ಯುವಕರನ್ನು ಈ ಪಂದ್ಯಕ್ಕೆ ಕಣಕ್ಕಿಳಿಸುವ ಸಾಧ್ಯತೆ ಇದೆ. ಎ ಗುಂಪಿನ ಮೊದಲ ಪಂದ್ಯ ಇದಾಗಿದ್ದು ಇದೇ ಗುಂಪಿನಲ್ಲಿ ಭಾರತ ತಂಡ ಸಹ ಇದೆ.
ಕಳೆದ ವರ್ಷದ ಚಾಂಪಿಯನ್ಸ್ ಟ್ರೋಫಿಯಿಂದಲೂ ಉತ್ತಮ ಕ್ರಿಕೆಟ್ ಆಡುತ್ತಾ ಬಂದಿರುವ ಪಾಕಿಸ್ತಾನ ಈ ಪಂದ್ಯದಲ್ಲಿ ಏಕಮೇವಾಧಿಪತ್ಯ ಸಾಧಿಸುವುದು ನಿಚ್ಚಳ. ಕ್ರಿಕೆಟ್ ನಲ್ಲಿ ಇನ್ನೂ ಅಂಬೆಗಾಲು ಇಡುತ್ತಿರುವ ಹಾಂಕಾಂಗ್ ತಂಡ ಪಾಕಿಸ್ತಾನಕ್ಕೆ ಸಣ್ಣ ಪ್ರತಿರೋಧವನ್ನು ತೋರಿಸರು ದೊಡ್ಡ ಸಾಧನೆಯೇ ಎನಿಸಿಕೊಳ್ಳಲಿದೆ.
ಈ ಮುಂಚೆ ಪಾಕಿಸ್ತಾನ ಮತ್ತು ಹಾಂಕಾಂಗ್ ತಂಡಗಳು ಎರಡು ಬಾರಿ ಮುಖಾ-ಮುಖಿ ಆಗಿವೆ ಎರಡು ಬಾರಿಯೂ ಪಾಕಿಸ್ತಾನ ಭಾರಿ ಅಂತರದಿಂದ ಗೆದ್ದಿದೆ. ಪಾಕಿಸ್ತಾನ ಈ ಹಿಂದೆ ಕ್ರಿಕೆಟ್ ಶಿಶು ಐರ್ಲೆಂಡ್ ಗೆ ಸೋತಿರುವ ಉದಾಹರಣೆ ಇದೆ. ಹಾಗಾಗಿ ಪಾಕಿಸ್ತಾನ ಎಚ್ಚರದಿಂದಲೇ ಈ ಪಂದ್ಯವನ್ನು ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications