ಏಷ್ಯಾಕಪ್: ಅಫ್ಘಾನಿಸ್ತಾನ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿ ಶ್ರೀಲಂಕಾ


ದುಬೈ, ಸೆಪ್ಟೆಂಬರ್ 17: ಏಷ್ಯಾಕಪ್‌ನಲ್ಲಿ ಮೊದಲ ಪಂದ್ಯ ಸೋತು ಒತ್ತಡಕ್ಕೆ ಸಿಲುಕಿರುವ ಶ್ರೀಲಂಕಾ ತಂಡ ಇಂದು ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.
ಕ್ರಿಕೆಟ್ ಶಿಶು ಎನಿಸಿಕೊಂಡರೂ ಸಹ ಅಫ್ಘಾನಿಸ್ತಾನ ಕೆಲವು ಉತ್ತಮ ಆಟಗಾರರನ್ನು ಹೊಂದಿದ್ದು, ಶ್ರೀಲಂಕಾಕ್ಕೆ ಈ ಪಂದ್ಯ ಸುಲಭದ್ದೇನೂ ಆಗಿರುವುದಿಲ್ಲ ಎಂಬುದು ಖಚಿತ.
ಮೊದಲ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರಿ ಅಂತರದ ಸೋಲು ಕಂಡಿರುವ ಶ್ರೀಲಂಕಾ ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಈ ಪಂದ್ಯ ಗೆದ್ದರಷ್ಟೆ ಶ್ರೀಲಂಕಾಕ್ಕೆ ಮುಂದಿನ ಹಂತಕ್ಕೆ ಹೋಗಲು ಸಾಧ್ಯ.
ಇತ್ತೀಚಿನ ದಿನಗಳಲ್ಲಿ ಭರವಸೆಯ ಆಟವಾಡುತ್ತಿರುವ ಅಫ್ಘಾನಿಸ್ತಾನ ಲಂಕಾ ತಂಡವನ್ನು ಸೋಲಿಸಿ ವಿಶ್ವಾಸ ಹೆಚ್ಚಿಸಿಕೊಳ್ಳಲು ಅಚಲ ಪ್ರಯತ್ನ ಮಾಡಲಿದೆ. ಅಫ್ಘಾನಿಸ್ತಾನಕ್ಕೆ ವಿಶ್ವದರ್ಜೆಯ ಸ್ಪಿನ್ನರ್ ಅಬ್ದುಲ್ ರಶೀದ್ ಬಲವಿದೆ.
ಜಿಂಬಾಬ್ವೆ ಮತ್ತು ಐರ್ಲೆಂಡ್ ವಿರುದ್ಧ ಸರಣಿಗಳನ್ನು ಗೆದ್ದಿರುವ ಅಫ್ಘಾನಿಸ್ತಾನ ವಿಶ್ವಾಸದ ಅಲೆಯ ಮೇಲಿದೆ. ಅಬ್ದುಲ್ ರಶೀದ್ ಮತ್ತು ಮುಜೀಬ್ ಉರ್ ರೆಹಮಾನ್ ಸ್ಪಿನ್ ಮೋಡಿ ಮಾಡಲು ಯುಎಇಯ ಪಿಚ್‌ಗಳು ಹೇಳಿ ಮಾಡಿಸಿದಂತಿವೆ. ಬ್ಯಾಟ್ಸ್‌ಮನ್ ರೆಹಮತ್ ಶಾ, ಮೊಹಮ್ಮದ್ ಶಹಜಾದ್, ನಜೀಬುಲ್ಲಾ ಜಾದ್ರನ್ ಮತ್ತು ಮೊಹಮ್ಮದ್ ನಬಿ ಉತ್ತಮ ಫಾರ್ಮ್‌ನಲ್ಲಿದ್ದಾರೆ.
ಮೊದಲ ಪಂದ್ಯ ಸೋತಿದ್ದರೂ ಲಂಕಾಕ್ಕೆ ಲಸಿತ್ ಮಲಿಂಗಾ ಮರಳಿ ಫಾರ್ಮ್ ಕಂಡುಕೊಂಡಿರುವುದು ಆನೆ ಬಲ ನೀಡಿದೆ. ವರ್ಷದ ನಂತರ ಏಕದಿನ ಅಂಗಳಕ್ಕೆ ಇಳಿದಿದ್ದ ಲಸಿತ್ ಮಲಿಂಗಾ ನಾಲ್ಕು ವಿಕೆಟ್ ಪೆಡೆದು ಮಿಂಚಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿಯೂ ಮಾಲಿಂಗಾ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications