2021ರ ಏಷ್ಯಾಕಪ್ ಶ್ರೀಲಂಕಾದಲ್ಲಿ, 2022ರ ಆಯೋಜನೆಯ ಹಕ್ಕು ಪಾಕಿಸ್ತಾನಕ್ಕೆ: ಪಿಸಿಬಿ ಸಿಇಒ ವಾಸಿಂ ಖಾನ್

ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ವರ್ಷದಲ್ಲಿ ನಡೆಯಬೇಕಿದ್ದ ಬಹುತೇಕ ಪ್ರಮುಖ ಕ್ರೀಡಾ ಟೂರ್ನಿಗಳು ಮುಂದೂಡಿಕೆಯಾಗಿದೆ. ಕ್ರಿಕೆಟ್‌ನಲ್ಲಿ ಟಿ20 ವಿಶ್ವಕಪ್‌ನ ಬಳಿಕ ಮುಂದೂಡಿಕೆಯಾದ ದೊಡ್ಡ ಕ್ರೀಡಾಕೂಟವೆಂದರೆ ಅದು ಏಷ್ಯಾಕಪ್ ಟೂರ್ನಿ. ಆಯೋಜನಾ ಸ್ಥಳ ಬದಲಾವಣೆ ಹಾಗೂ ಸಮಯದ ಬದಲಾವಣೆ ಬಗ್ಗೆ ಸುದೀರ್ಘ ಚರ್ಚೆಯ ಬಳಿಕ ಈ ಟೂರ್ನಿಯನ್ನು ಮುಂದೂಡುವ ನಿರ್ಧಾರ ತೆಗೆದುಕೊಳ್ಳಲಾಯಿತು.
ಮುಂದಿನ ಏಷ್ಯಾಕಪ್ ಆಯೋಜನೆಯ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸಿಇಒ ವಾಸಿಂ ಖಾನ್ ಪ್ರತಿಕ್ರಿಯಿಸಿದ್ದು 2021ರ ಏಷ್ಯಾಕಪ್‌ನ ಆಯೋಜನೆ ಶ್ರೀಲಂಕಾ ವಹಿಸಿಕೊಳ್ಳಲಿದ್ದು ಜೂನ್‌ನಲ್ಲಿ ನಡೆಯಲಿದೆ ಎಂದು ಹೇಳಿದೆ. ಇದರ ಜೊತೆಗೆ ಪಾಕಿಸ್ತಾನ 2022ರ ಏಷ್ಯಾಕಪ್ ಆಯೋಜನೆಯ ಹಕ್ಕನ್ನು ಹೊಂದಿದೆ ಎಂದು ಹೇಳಿಕೆಯನ್ನು ನೀಡಿದ್ದಾರೆ.
"ಮುಂದಿನ ಏಷ್ಯಾಕಪ್ ಶ್ರೀಲಂಕಾದಲ್ಲಿ ಜೂನ್ ತಿಂಗಳಿನಲ್ಲಿ ನಡೆಯಲಿದೆ. ಮತ್ತು ನಾವು 2022ರ ಏಷ್ಯಾಕಪ್ ಕ್ರಿಕೆಟ್ ಆಯೋಜನೆಯ ಹಕ್ಕನ್ನು ಈಗ ಪಡೆದುಕೊಂಡಿದ್ದೇವೆ" ಎಂದು ಹೇಳಿಕೆಯನ್ನು ನೀಡಿರುವುದನ್ನು ಪಿಟಿಐ ಉಲ್ಲೇಖಿಸಿದೆ.
ಈ ಹಿಂದಿನ ನಿರ್ಧಾರದ ಪ್ರಕಾರ 2020ರ ಆಗಸ್ಟ್ ಸೆಪ್ಟೆಂಬರ್ ತಿಂಗಳಿನಲ್ಲಿ ಏಷ್ಯಾಕಪ್ ಕ್ರಿಕೆಟ್‌ಅನ್ನು ಪಾಕಿಸ್ತಾನ ಆಯೋಜನೆ ಮಾಡಬೇಕಿತ್ತು. ಆದರೆ ಕೊರೊನಾ ವೈರಸ್‌ನ ಹಾವಳಿಯಿಂದಾಗಿ ಆ ಟೂರ್ನಿಯನ್ನು ಮುಂದೂಡುವ ನಿರ್ಧಾರಕ್ಕೆ ಬರಲಾಗಿತ್ತು. ಈಗ 2021ಕ್ಕೆ ಈ ಟೂರ್ನಿ ಆಯೋಜನೆಯಾಗಲಿದ್ದು ಶ್ರಿಲಂಕಾ ಕ್ರಿಕೆಟ್ ಮಂಡಳಿ ಈ ಟೂರ್ನಿಯ ಆಯೋಜನೆಗೆ ಹಕ್ಕನ್ನು ಪಡೆದುಕೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications