Asia Cup 2022, AFG vs BAN: ಕುಸಿದಿದ್ದ ಬಾಂಗ್ಲಾಗೆ ಹೊಸೇನ್ ಆಸರೆ; ಅಫ್ಘಾನಿಸ್ತಾನಕ್ಕೆ ಸಾಮಾನ್ಯ ಗುರಿ

ಇಂದು ( ಆಗಸ್ಟ್ 30 ) ಶಾರ್ಜಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯ ಮೂರನೇ ಪಂದ್ಯ ಜರುಗುತ್ತಿದೆ. ಪಂದ್ಯದಲ್ಲಿ ಬಿ ಗುಂಪಿನ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 127 ರನ್ ಕಲೆ ಹಾಕಿ ಎದುರಾಳಿ ಅಫ್ಘಾನಿಸ್ತಾನ ತಂಡಕ್ಕೆ ಗೆಲ್ಲಲು 128 ರನ್‌ಗಳ ಸಾಮಾನ್ಯ ಗುರಿಯನ್ನು ನೀಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ತಂಡದ ಮೇಲಿನ ಕ್ರಮಾಂಕದ ದಾಂಡಿಗರು ಕೈಕೊಟ್ಟ ಕಾರಣ ಬಾಂಗ್ಲಾದೇಶ ಆರಂಭಿಕ ಆಘಾತ ಅನುಭವಿಸಿ ತೀರಾ ಕೆಟ್ಟ ಮೊತ್ತವನ್ನು ಕಲೆಹಾಕುವತ್ತ ಸಾಗಿತ್ತು. ಈ ಸಂದರ್ಭದಲ್ಲಿ ತಂಡಕ್ಕೆ ಮೊಸದೆಕ್ ಹೊಸೇನ್ ಆಸರೆಯಾದ ಕಾರಣ ಬಾಂಗ್ಲಾದೇಶ ಕಳಪೆ ಮೊತ್ತಕ್ಕೆ ಆಲ್ ಔಟ್ ಆಗುವ ಮುಖಭಂಗದಿಂದ ಪಾರಾಯಿತು.

ಅಫ್ಘಾನ್ ಬೌಲಿಂಗ್ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶಕಿಬ್ ಅಲ್ ಹಸನ್ ಬಳಗದ ಪರ ಆರಂಭಿಕ ಆಟಗಾರರಾಗಿ ಮಹಮ್ಮದ್ ನಯೀಮ್ ಮತ್ತು ಅನಮುಲ್ ಹಕ್ ಕಣಕ್ಕಿಳಿದರು. ಈ ಇಬ್ಬರೂ ಸಹ ತಂಡಕ್ಕೆ ಉತ್ತಮ ಆರಂಭ ಕಟ್ಟಿಕೊಡುವಲ್ಲಿ ಯಶಸ್ವಿಯಾಗಲಿಲ್ಲ. ಬಾಂಗ್ಲಾದೇಶ ಎರಡನೇ ಓವರ್‌ನಲ್ಲಿಯೇ ತನ್ನ ಮೊದಲ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಮೊದಲ ವಿಕೆಟ್ ಬೀಳುತ್ತಿದ್ದಂತೆ ನಿಧಾನಗತಿಯ ಆಟವನ್ನಾಡಿದ ಬಾಂಗ್ಲಾದೇಶ ಅಫ್ಘಾನಿಸ್ತಾನ ಬೌಲಿಂಗ್ ದಾಳಿ ಎದುರು ರನ್ ಕಲೆಹಾಕಲು ತಿಣುಕಾಡಿತು. ಬಾಂಗ್ಲಾದೇಶದ ಪರ ಮಹಮ್ಮದ್ ನಯೀಮ್ 6, ಅನಮುಲ್ ಹಕ್ 5, ನಾಯಕ ಶಕಿಬ್ ಅಲ್ ಹಸನ್ 11, ಮುಶ್ಫಿಕರ್ ರಹೀಮ್ 1, ಅಫೀಫ್ ಹುಸೇನ್ 12, ಮಹ್ಮದುಲ್ಲಾ 25, ಮೆಹದಿ ಹಸನ್ 14 ರನ್ ಗಳಿಸಿದರು. ಇನ್ನುಳಿದಂತೆ ಸೈಫುದ್ದೀನ್ ಯಾವುದೇ ರನ್ ಗಳಿಸದೆ ಅಜೇಯರಾಗಿ ಉಳಿದರೆ, ತಂಡಕ್ಕೆ ಆಪದ್ಭಾಂಧವನ ಆಟವನ್ನಾಡಿದ ಮೊಸದೆಕ್ ಹೊಸೇನ್ 31 ಎಸೆತಗಳಲ್ಲಿ ಅಜೇಯ 48 ರನ್ ಬಾರಿಸಿ ತಂಡ ಅಲ್ಪ ಮೊತ್ತಕ್ಕೆ ಆಲ್ ಔಟ್ ಆಗಿ ಅನುಭವಿಸುತ್ತಿದ್ದ ಮುಖಭಂಗವನ್ನು ತಪ್ಪಿಸಿದರು.

ಮಿಂಚಿದ ರಶೀದ್ ಖಾನ್
ಅಫ್ಘಾನಿಸ್ತಾನ ತಂಡದ ಬೌಲರ್‌ಗಳಾದ ರಶೀದ್ ಖಾನ್ ಹಾಗೂ ಮುಜೀಬ್ ಉರ್ ರಹಮಾನ್ ತಲಾ 3 ವಿಕೆಟ್ ಪಡೆಯುವುದರ ಮೂಲಕ ಬಾಂಗ್ಲಾದೇಶ ಅಲ್ಪ ಮೊತ್ತಕ್ಕೆ ತನ್ನ ಇನ್ನಿಂಗ್ಸ್ ಅಂತ್ಯಗೊಳಿಸುವಂತೆ ಮಾಡಿದರು.

ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಆಡುವ ಬಳಗಗಳು
ಬಾಂಗ್ಲಾದೇಶ ಆಡುವ ಬಳಗ: ಮೊಹಮ್ಮದ್ ನಯಿಮ್, ಅನಾಮುಲ್ ಹಕ್, ಶಾಕಿಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮೊಸದ್ದೆಕ್ ಹೊಸೈನ್, ಮಹಮ್ಮದುಲ್ಲಾ, ಮಹೇದಿ ಹಸನ್, ಮೊಹಮ್ಮದ್ ಸೈಫುದ್ದೀನ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರಹಮಾನ್
ಬೆಂಚ್‌ಸಬ್ಬೀರ್ ರಹಮಾನ್, ಪರ್ಸಬ್ಬೀರ್ ರಹಮಾನ್, ನಸ್ಬಾರ್ ರಹಮ್ಮದ್, ಹೊಸೈನ್ ಎಮನ್
ಅಫ್ಘಾನಿಸ್ತಾನ ಆಡುವ ಬಳಗ: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (wk), ಇಬ್ರಾಹಿಂ ಝದ್ರಾನ್, ನಜಿಬುಲ್ಲಾ ಝದ್ರಾನ್, ಕರೀಂ ಜನತ್, ಮೊಹಮ್ಮದ್ ನಬಿ (c), ರಶೀದ್ ಖಾನ್, ಅಜ್ಮತುಲ್ಲಾ ಒಮರ್ಝೈ, ನವೀನ್-ಉಲ್-ಹಕ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಖಿ,
ಬೆಂಚ್: ಶಮಿಉಲ್ಲಾ ಶಿನ್ವಾರಿ, ಹಸ್ಮತ್ ಉಲ್ಲಾ ಶಾಹಿದಿ,ಅಫ್ಜರ್ ಝಝೈ, ಫರೀದ್ ಅಹ್ಮದ್ ಮಲಿಕ್, ಉಸ್ಮಾನ್ ಘನಿ, ನೂರ್ ಅಹ್ಮದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications