Asia Cup 2022: ಏಷ್ಯಾಕಪ್ ಮುಖಾಮುಖಿಯಲ್ಲಿ ಅಫ್ಘಾನ್ ಮುಂದೆ ಬಾಂಗ್ಲಾದೇಶ ಕಳಪೆ!

ಪ್ರಸ್ತುತ ಯುಎಇ ನೆಲದಲ್ಲಿ ಏಷ್ಯಾಕಪ್ ಟೂರ್ನಿ ನಡೆಯುತ್ತಿದ್ದು, ಟೂರ್ನಿಯ ಗ್ರೂಪ್ ಹಂತದ ಮೊದಲೆರಡು ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿವೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಕಣಕ್ಕಿಳಿದಿದ್ದ ಮೊಹಮ್ಮದ್ ನಬಿ ನಾಯಕತ್ವದ ಅಫ್ಘಾನಿಸ್ತಾನ 8 ವಿಕೆಟ್‍ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಹಾಗೂ ಟೂರ್ನಿಯ ದ್ವಿತೀಯ ಪಂದ್ಯದಲ್ಲಿ ಮುಖಾಮುಖಿಯಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ಪೈಕಿ ಟೀಮ್ ಇಂಡಿಯಾ 5 ವಿಕೆಟ್‍ಗಳ ರೋಚಕ ಗೆಲುವು ಸಾಧಿಸುವುದರ ಮೂಲಕ ಅಂಕಪಟ್ಟಿಯಲ್ಲಿ ಖಾತೆ ತೆರೆಯಿತು.
ಹೀಗೆ ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಅಫ್ಘಾನಿಸ್ತಾನ ಇಂದು ( ಆಗಸ್ಟ್ 30 ) ನಡೆಯಲಿರುವ ಟೂರ್ನಿಯ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಸೆಣಸಾಟ ನಡೆಸಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಶಾರ್ಜಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಅಫ್ಘಾನಿಸ್ತಾನ ಜಯ ಸಾಧಿಸಿದರೆ ಅಧಿಕೃತವಾಗಿ ಸೂಪರ್ 4 ಸುತ್ತಿಗೆ ಅರ್ಹತೆ ಪಡೆದುಕೊಳ್ಳುವುದರ ಮೂಲಕ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಸೂಪರ್ 4 ಪ್ರವೇಶಿಸಿದ ಪ್ರಥಮ ತಂಡ ಎನಿಸಿಕೊಳ್ಳಲಿದೆ.
ಇನ್ನು ಈ ಪಂದ್ಯ ಬಾಂಗ್ಲಾದೇಶದ ಪಾಲಿಗೆ ಚೊಚ್ಚಲ ಪಂದ್ಯವಾಗಿದ್ದು, ಪಂದ್ಯದಲ್ಲಿ ಸೋತರೆ ಮುಂದಿನ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ನಿರ್ಮಿತವಾಗಲಿದೆ. ಹೀಗಾಗಿ ಎರಡೂ ತಂಡಗಳಿಗೂ ಈ ಪಂದ್ಯ ಅತ್ಯಮೂಲ್ಯವಾಗಿದ್ದು, ಇತ್ತಂಡಗಳ ನಡುವೆ ಈ ಹಿಂದೆ ನಡೆದಿರುವ ಏಷ್ಯಾಕಪ್ ಮುಖಾಮುಖಿ ಪಂದ್ಯಗಳಲ್ಲಿ ಯಾವ ತಂಡ ಎಷ್ಟು ಪಂದ್ಯ ಗೆದ್ದು ಮುನ್ನಡೆ ಸಾಧಿಸಿದೆ ಎಂಬುದರ ಕುರಿತಾದ ವಿವರ ಕೆಳಕಂಡಂತಿದೆ.

ಇತ್ತಂಡಗಳ ನಡುವಿನ ಏಷ್ಯಾಕಪ್ ಮುಖಾಮುಖಿ
ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಏಷ್ಯಾ ಕಪ್ ಇತಿಹಾಸದಲ್ಲಿ ಇಲ್ಲಿಯವರೆಗೂ ಒಟ್ಟು 3 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಈ ಪೈಕಿ ಬಾಂಗ್ಲಾದೇಶ ಕೇವಲ ಒಂದು ಪಂದ್ಯದಲ್ಲಿ ಗೆದ್ದಿದ್ದರೆ, ಉಳಿದೆರಡು ಪಂದ್ಯಗಳಲ್ಲಿ ಅಫ್ಘಾನಿಸ್ತಾನ ಜಯಭೇರಿ ಬಾರಿಸಿದೆ. ಈ ಮೂಲಕ ಉಭಯ ತಂಡಗಳ ನಡುವಿನ ಏಷ್ಯಾಕಪ್ ಮುಖಾಮುಖಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಅಫ್ಘಾನಿಸ್ತಾನ ಸ್ಪಷ್ಟ ಮೇಲುಗೈ ಸಾಧಿಸಿದೆ.

ಅಫ್ಘಾನಿಸ್ತಾನದ ಮುಂದೆ ಬಾಂಗ್ಲಾದೇಶ ಕಳಪೆ
2014ರಲ್ಲಿ ನಡೆದಿದ್ದ ಏಷ್ಯಾಕಪ್ ಪಂದ್ಯವೊಂದರಲ್ಲಿ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಮೊದಲ ಬಾರಿಗೆ ಪರಸ್ಪರ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಅಫ್ಘಾನಿಸ್ತಾನ 32 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು. 2018ರ ಏಷ್ಯಾಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನ ತಂಡಗಳು 2 ಬಾರಿ ಮುಖಾಮುಖಿಯಾಗಿದ್ದವು. ಪ್ರಥಮ ಪಂದ್ಯದಲ್ಲಿ ಅಫ್ಘಾನಿಸ್ತಾನ 136 ರನ್‌ಗಳ ಬೃಹತ್ ಅಂತರದಿಂದ ಗೆಲುವನ್ನು ಸಾಧಿಸಿತ್ತು ಹಾಗೂ ದ್ವಿತೀಯ ಪಂದ್ಯದಲ್ಲಿ ಬಾಂಗ್ಲಾದೇಶ ಅಫ್ಘಾನ್ ವಿರುದ್ಧ 3 ರನ್‌ಗಳ ಜಯ ಸಾಧಿಸಿತ್ತು. ಹೀಗೆ ಉಭಯ ತಂಡಗಳ ಏಷ್ಯಾಕಪ್ ಮುಖಾಮುಖಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಅಫ್ಘಾನಿಸ್ತಾನ ಬೃಹತ್ ಅಂತರದಲ್ಲಿ ಜಯ ಸಾಧಿಸಿದ್ದರೆ, ಬಾಂಗ್ಲಾದೇಶ ಗೆದ್ದಿರುವ ಒಂದು ಪಂದ್ಯದಲ್ಲಿಯೂ ಸಹ ಅಲ್ಪ ಮೊತ್ತದ ಅಂತರದಿಂದ ಮಾತ್ರ ಜಯ ಸಾಧಿಸಿದೆ.

ಉಭಯ ತಂಡಗಳ ಸ್ಕ್ವಾಡ್
ಅಫ್ಘಾನಿಸ್ತಾನ: ಮೊಹಮ್ಮದ್ ನಬಿ (ನಾಯಕ), ನಜಿಬುಲ್ಲಾ ಝದ್ರಾನ್, ಅಫ್ಸರ್ ಝಜೈ, ಅಜ್ಮತುಲ್ಲಾ ಒಮರ್ಝೈ, ಫರೀದ್ ಅಹ್ಮದ್ ಮಲಿಕ್, ಫಝಲ್ಹಕ್ ಫಾರೂಕಿ, ಹಸ್ಮತುಲ್ಲಾ ಶಾಹಿದಿ, ಹಜರತುಲ್ಲಾ ಝಜೈ, ಇಬ್ರಾಹಿಂ ಝದ್ರಾನ್, ಕರೀಮ್ ಜನತ್, ಮುಜೀಬ್ ನವ್ರನ್, ಮುಜೀಬ್ ನವ್ರನ್, ಮುಜೀಬ್, ನವ್ರನ್, ಮುಜೀಬ್, ನವ್ರನ್, ರಹಮಾನುಲ್ಲಾ ಗುರ್ಬಾಜ್, ರಶೀದ್ ಖಾನ್, ಸಮೀವುಲ್ಲಾ ಶಿನ್ವಾರಿ.
ಮೀಸಲು ಆಟಗಾರರು: ನಿಜತ್ ಮಸೂದ್, ಖೈಸ್ ಅಹ್ಮದ್, ಶರಫುದ್ದೀನ್ ಅಶ್ರಫ್.
ಬಾಂಗ್ಲಾದೇಶ: ಶಕೀಬ್ ಅಲ್ ಹಸನ್ (ನಾಯಕ), ಅನಾಮುಲ್ ಹಕ್, ಮುಶ್ಫಿಕರ್ ರಹೀಮ್, ಅಫೀಫ್ ಹೊಸೈನ್, ಮೊಸದ್ದೆಕ್ ಹೊಸೇನ್, ಮಹ್ಮುದುಲ್ಲಾ, ಮಹೇದಿ ಹಸನ್, ಮೊಹಮ್ಮದ್ ಸೈಫುದ್ದೀನ್, ಮುಸ್ತಾಫಿಜುರ್ ರೆಹಮಾನ್, ನಸುಮ್ ಅಹ್ಮದ್, ಸಬ್ಬಿರ್ ರೆಹಮಾನ್, ಮೆಹಿದಿ ಹಸನ್ ಪರ್ಜ್ ಮಿರಾಜ್, ತಸ್ಬಾನ್ ಮಿರಾಜ್, ಇ. , ಮೊಹಮ್ಮದ್ ನಯಿಮ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications