Asia Cup 2022: ಆ ಓರ್ವ ಆಟಗಾರನಿಂದಾಗಿ ಪಾಕ್ ವಿರುದ್ಧ ಅವಕಾಶ ಸಿಗದೇ ಬೆಂಚ್ ಕಾಯಲಿದ್ದಾರೆ ಡಿಕೆ!

ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿ ನಾಳೆ ( ಆಗಸ್ಟ್ 27 ) ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭವಾಗುತ್ತಿದ್ದರೂ ಸಹ ಎಲ್ಲರ ಚಿತ್ತ ಎರಡನೇ ದಿನ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹಣಾಹಣಿಯತ್ತ ಇದೆ.
ಇನ್ನು ಈ ಪಂದ್ಯದ ಕುರಿತಾಗಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗಳು ಆರಂಭವಾಗಿದ್ದು, ಪಾಕ್ ವಿರುದ್ಧ ಕಣಕ್ಕಿಳಿಯಲಿರುವ ಭಾರತದ ಆಡುವ ಬಳಗ ಹೇಗಿರಬೇಕು ಮತ್ತು ಯಾವ ಆಟಗಾರರಿಗೆ ಸ್ಥಾನ ನೀಡಿದರೆ ಪಂದ್ಯದಲ್ಲಿ ಉತ್ತಮ ಫಲಿತಾಂಶ ಲಭಿಸಲಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಹಾಗೂ ಹಲವು ಮಾಜಿ ಕ್ರಿಕೆಟಿಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಟೂರ್ನಿಗೆ 15 ಆಟಗಾರರನ್ನೊಳಗೊಂಡ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ಈ ಆಟಗಾರರ ಪೈಕಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಯಾವ ಹನ್ನೊಂದು ಆಟಗಾರರಿಗೆ ಆಡುವ ಅವಕಾಶ ಸಿಗಬಹುದು ಎಂಬ ಪ್ರಶ್ನೆ ಇದೀಗ ಮೂಡಿದೆ.
ಅದರಲ್ಲಿಯೂ ಪ್ರಮುಖವಾಗಿ ದಿನೇಶ್ ಕಾರ್ತಿಕ್ ಅವರಿಗೆ ಆಡುವ ಬಳಗದಲ್ಲಿ ಸ್ಥಾನ ಲಭಿಸಲಿದೆಯಾ ಎಂಬ ಪ್ರಶ್ನೆ ದೊಡ್ಡ ಮಟ್ಟದಲ್ಲಿದ್ದು, ಈ ಓರ್ವ ಆಟಗಾರನ ಕಾರಣದಿಂದಾಗಿ ದಿನೇಶ್ ಕಾರ್ತಿಕ್ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶ ಸಿಗದೇ ಬೆಂಚ್ ಕಾಯುವ ಸಾಧ್ಯತೆಗಳಿವೆ.

ದೀಪಕ್ ಹೂಡಾ ಕಣಕ್ಕಿಳಿದರೆ ಕಾರ್ತಿಕ್ ಬೆಂಚ್ ಕಾಯಲೇಬೇಕು!
ಪಾಕ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಭಾರತದ ಆಡುವ ಬಳಗದಲ್ಲಿ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದು, ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕ, ಸೂರ್ಯಕುಮಾರ್ ಯಾದವ್ ನಾಲ್ಕನೇ ಕ್ರಮಾಂಕ ಮತ್ತು ಐದನೇ ಕ್ರಮಾಂಕದಲ್ಲಿ ರಿಷಭ್ ಪಂತ್ ಕಣಕ್ಕಿಳಿಯುವುದು ಖಚಿತ. ಇನ್ನು ರವೀಂದ್ರ ಜಡೇಜಾ ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆಗಳಿದ್ದು, ಆರನೇ ಕ್ರಮಾಂಕ ಮಾತ್ರ ಸದ್ಯ ಖಾಲಿ ಇದೆ ಎನ್ನಬಹುದು. ಹೀಗಾಗಿ ಈ ಸ್ಥಾನಕ್ಕೆ ದೀಪಕ್ ಹೂಡಾ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಿದ್ದು, ದಿನೇಶ್ ಕಾರ್ತಿಕ್ ಬೆಂಚ್ ಕಾಯುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ.

ಕಾರ್ತಿಕ್ ಬದಲು ದೀಪಕ್ ಹೂಡಾ ಆಯ್ಕೆ ಏಕೆ?
ಇನ್ನು ದಿನೇಶ್ ಕಾರ್ತಿಕ್ ಬದಲು ದೀಪಕ್ ಹೂಡಾಗೆ ಆಡುವ ಅವಕಾಶ ನೀಡುವ ಸಾಧ್ಯತೆಗಳು ಇರುವುದಕ್ಕೆ ಕಾರಣ ಬೌಲಿಂಗ್. ಹೌದು, ದೀಪಕ್ ಹೂಡಾ ಬೌಲಿಂಗ್ ಮಾಡುವ ಕಾರಣ ಅವರನ್ನು ತಂಡದ ಆರನೇ ಬೌಲರ್ ಆಗಿ ಉಪಯೋಗಿಸಲು ಸಾಧ್ಯವಿದೆ. ಒಂದುವೇಳೆ ದೀಪಕ್ ಹೂಡಾ ಅವರ ಬದಲು ದಿನೇಶ್ ಕಾರ್ತಿಕ್ ಅವರಿಗೆ ಸ್ಥಾನ ನೀಡಿದರೆ ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಸೇರಿ ತಂಡದ ಎಲ್ಲಾ ಆಲ್ ರೌಂಡರ್ ಮತ್ತು ಬೌಲರ್‌ಗಳು ತಮ್ಮ ಪಾಲಿನ ಸಂಪೂರ್ಣ 4 ಓವರ್‌ಗಳನ್ನು ಬೌಲಿಂಗ್ ಮಾಡಲೇಬೇಕಾಗುತ್ತದೆ. ದೀಪಕ್ ಹೂಡಾಗೆ ಅವಕಾಶ ನೀಡಿದರೆ ಒತ್ತಡದ ಸಂದರ್ಭಗಳಲ್ಲಿ ಬೌಲಿಂಗ್ ಬದಲಾವಣೆ ಮಾಡಬೇಕಾದಾಗ ಒಂದೆರಡು ಓವರ್ ಬೌಲಿಂಗ್ ಮಾಡಲಿದ್ದಾರೆ. ಹೀಗಾಗಿಯೇ ದಿನೇಶ್ ಕಾರ್ತಿಕ್ ಬದಲು ದೀಪಕ್ ಹೂಡಾಗೆ ಆಡುವ ಬಳಗದಲ್ಲಿ ಅವಕಾಶ ಲಭಿಸುವ ಸಾಧ್ಯತೆಗಳು ಹೆಚ್ಚಿವೆ.

ಟೀಮ್ ಇಂಡಿಯಾ ಸ್ಕ್ವಾಡ್
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್ ಮತ್ತು ಅವೇಶ್ ಖಾನ್.
ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ದೀಪಕ್ ಚಹಾರ್, ಅಕ್ಷರ್ ಪಟೇಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications