For Quick Alerts
ALLOW NOTIFICATIONS  
For Daily Alerts
 

Asia Cup 2022 Final: PAK vs SL ಫ್ಯಾಂಟಸಿ ಡ್ರೀಮ್ ಟೀಂ, ಪಂದ್ಯದ ಮುನ್ನೋಟ, ಸಂಭಾವ್ಯ ತಂಡಗಳು

Asia Cup 2022 Final: PAK vs SL Fantasy Dream Team, Match Preview, Prediction Teams

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು (ಭಾನುವಾರ, ಸೆಪ್ಟೆಂಬರ್ 11) ಸಂಜೆ ನಡೆಯಲಿರುವ 2022ರ ಏಷ್ಯಾ ಕಪ್‌ನ ಫೈನಲ್‌ನಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಟ್ರೋಫಿಗಾಗಿ ಸೆಣಸಲಿವೆ.

ಏಷ್ಯಾ ಕಪ್‌ ಪಂದ್ಯಾವಳಿ ಆರಂಭವಾದಾಗ ಮತ್ತು ಅದಕ್ಕೂ ಮುನ್ನ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಸೂಪರ್ 4ರ ಹಂತದಲ್ಲಿ ಭಾರತ ತಂಡ ಹೊರಬಿದ್ದಿದ್ದರಿಂದ ಹಲವರ ಊಹೆ ತಪ್ಪಾಗಿ ಹೋಗಿದೆ.

ಇನ್ನು ಈ ಫೈನಲ್ ಪಂದ್ಯಕ್ಕೆ ಬರುವುದಾದರೆ ಶ್ರೀಲಂಕಾ ತಂಡ ಸೂಪರ್ 4ರ ಹಂತದಲ್ಲಿ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಆದರೆ ಪಾಕಿಸ್ತಾನವು ಕೇವಲ ಒಂದು ಪಂದ್ಯವನ್ನು ಮಾತ್ರ ಸೋತಿದ್ದು, ದಸುನ್ ಶನಕ ನಾಯಕತ್ವದ ಶ್ರೀಲಂಕಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಸೋಲು ಕಂಡಿತು. ಅದು ಫೈನಲ್ ಘರ್ಷಣೆಗೆ ಸಾಕಷ್ಟು ಅಭ್ಯಾಸ ಪಂದ್ಯದಂತೆ ಕಂಡುಬಂತು.

ಪಂದ್ಯಾವಳಿಯಲ್ಲಿ ಟಾಸ್ ನಿರ್ಣಾಯಕ ಪಾತ್ರ ವಹಿಸಿದೆ

ಪಂದ್ಯಾವಳಿಯಲ್ಲಿ ಟಾಸ್ ನಿರ್ಣಾಯಕ ಪಾತ್ರ ವಹಿಸಿದೆ

ಆದಾಗ್ಯೂ, ಶುಕ್ರವಾರದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ನಸೀಮ್ ಶಾಗೆ ವಿಶ್ರಾಂತಿ ನೀಡಿತ್ತು ಮತ್ತು ಅವರು ಬಾಬರ್ ಅಜಂ ನಾಯಕತ್ವದ ತಂಡಕ್ಕೆ ಫೈನಲ್ ಕದನದಲ್ಲಿ ಮರಳುತ್ತಾರೆ ಎಂಬುದು ಪ್ರಮುಖ ವಿಷಯವಾಗಿದೆ.

ಈ ಬಾರಿಯ ಏಷ್ಯಾ ಕಪ್‌ನಲ್ಲೂ ಟಾಸ್ ನಿರ್ಣಾಯಕ ಪಾತ್ರ ವಹಿಸಿದೆ ಮತ್ತು ಶ್ರೀಲಂಕಾ ನಡೆಸುತ್ತಿರುವ ಟೂರ್ನಿಯಲ್ಲಿ ಚೇಸಿಂಗ್ ಮಾಡಿದಾಗ ಎಲ್ಲಾ ಪಂದ್ಯಗಳನ್ನು ಗೆದ್ದಿದೆ. ಈ ಆವೃತ್ತಿಯಲ್ಲಿ ಅವರ ಏಕೈಕ ಸೋಲು ಅಫ್ಘಾನಿಸ್ತಾನ ವಿರುದ್ಧದ ಗುಂಪು ಹಂತದಲ್ಲಿ ಮತ್ತು ಶ್ರೀಲಂಕಾ ಮೊದಲು ಬ್ಯಾಟ್ ಮಾಡಿದಾಗ ಮಾತ್ರ.

ಸೂಪರ್ 4 ಹಂತದ ಹಣಾಹಣಿಯಲ್ಲಿ ಶ್ರೀಲಂಕಾ ವಿರುದ್ಧ ಸೋತ ಪಾಕ್

ಸೂಪರ್ 4 ಹಂತದ ಹಣಾಹಣಿಯಲ್ಲಿ ಶ್ರೀಲಂಕಾ ವಿರುದ್ಧ ಸೋತ ಪಾಕ್

ಈ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಕ್ರಮವಾಗಿ ಭಾರತ ಮತ್ತು ಅಫ್ಘಾನಿಸ್ತಾನ ವಿರುದ್ಧ ಸೋಲುಗಳೊಂದಿಗೆ ಕೆಟ್ಟದಾಗಿ ಟೂರ್ನಿ ಪ್ರಾರಂಭಿಸಿದವು. ಶ್ರೀಲಂಕಾ ಅಫ್ಘಾನ್ ವಿರುದ್ಧ ಸೋತರೆ, ಪಾಕಿಸ್ತಾನ ವಿರುದ್ಧ ಸಾಂಪ್ರದಾಯಿಕ ಎದುರಾಳಿ ಭಾರತೀಯರ ವಿರುದ್ಧ ಸೋಲಿನ ರುಚಿ ಕಂಡಿತು. ಆದರೆ ಈ ಸೋಲುಗಳು ಸೂಪರ್ 4 ಹಂತದಲ್ಲಿ ಎರಡು ತಂಡಗಳಿಗೆ ಅದ್ಭುತಗಳನ್ನು ಕಂಬ್ಯಾಕ್ ಮಾಡಲು ಕಾರಣವಾಯಿತು.

ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಈಗಾಗಲೇ ತಮ್ಮ ಕೊನೆಯ ಸೂಪರ್ 4 ಹಂತದ ಹಣಾಹಣಿಯಲ್ಲಿ ಶ್ರೀಲಂಕಾ ವಿರುದ್ಧ ಸೋತಿದೆ. ಅವರು ಪಂದ್ಯಾವಳಿಯಲ್ಲಿ ನೀರಸವಾಗಿ ಕಾಣುತ್ತಿದ್ದರು ಮತ್ತು ಮೆನ್ ಇನ್ ಗ್ರೀನ್‌ನಿಂದ ಉತ್ತಮ ಪ್ರಯತ್ನವನ್ನು ಫೈನಲ್‌ನಲ್ಲಿ ಅವರ ಅಭಿಮಾನಿಗಳು ನಿರೀಕ್ಷಿಸುತ್ತಾರೆ.

ಏಷ್ಯಾ ಕಪ್ ಫೈನಲ್ ಪಂದ್ಯದ ವಿವರಗಳು

ಏಷ್ಯಾ ಕಪ್ ಫೈನಲ್ ಪಂದ್ಯದ ವಿವರಗಳು

ಶ್ರೀಲಂಕಾ ವಿರುದ್ಧ ಪಾಕಿಸ್ತಾನ, ಏಷ್ಯಾ ಕಪ್ ಫೈನಲ್ ಪಂದ್ಯ ಯಾವಾಗ?
ಶ್ರೀಲಂಕಾ vs ಪಾಕಿಸ್ತಾನ, ಏಷ್ಯಾ ಕಪ್ ಫೈನಲ್ ಪಂದ್ಯವು ಭಾನುವಾರ, ಸೆಪ್ಟೆಂಬರ್ 11 ರಂದು ನಡೆಯಲಿದೆ.

ಶ್ರೀಲಂಕಾ ವಿರುದ್ಧ ಪಾಕಿಸ್ತಾನ, ಏಷ್ಯಾ ಕಪ್ ಫೈನಲ್ ಎಲ್ಲಿ ನಡೆಯಲಿದೆ?
ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವೆ ಏಷ್ಯಾ ಕಪ್ ಫೈನಲ್ ಪಂದ್ಯ ನಡೆಯಲಿದೆ.

ಶ್ರೀಲಂಕಾ vs ಪಾಕಿಸ್ತಾನ, ಏಷ್ಯಾಕಪ್ ಫೈನಲ್ ಯಾವಾಗ ಆರಂಭವಾಗಲಿದೆ?
ಶ್ರೀಲಂಕಾ vs ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಫೈನಲ್ ಪಂದ್ಯವು ಭಾರತೀಯ ಕಾಲಮಾನ 7:30 PMಕ್ಕೆ ಪ್ರಾರಂಭವಾಗಲಿದೆ.

ಶ್ರೀಲಂಕಾ ವಿರುದ್ಧ ಪಾಕಿಸ್ತಾನ, ಏಷ್ಯಾ ಕಪ್ ಫೈನಲ್ ಅನ್ನು ಯಾವ ಚಾನಲ್‌ಗಳು ಪ್ರಸಾರ ಮಾಡುತ್ತವೆ?
ಶ್ರೀಲಂಕಾ ವಿರುದ್ಧ ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಫೈನಲ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ಶ್ರೀಲಂಕಾ ವಿರುದ್ಧ ಪಾಕಿಸ್ತಾನ, ಏಷ್ಯಾ ಕಪ್ ಫೈನಲ್ ಸ್ಟ್ರೀಮಿಂಗ್‌ಗೆ ಎಲ್ಲಿ ಲಭ್ಯವಿರುತ್ತದೆ?
ಶ್ರೀಲಂಕಾ vs ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಫೈನಲ್ ಪಂದ್ಯ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ.

SL vs PAK ಏಷ್ಯಾ ಕಪ್ 2022 ಫೈನಲ್‌ಗಾಗಿ ಫ್ಯಾಂಟಸಿ ಡ್ರೀಮ್ ತಂಡ

SL vs PAK ಏಷ್ಯಾ ಕಪ್ 2022 ಫೈನಲ್‌ಗಾಗಿ ಫ್ಯಾಂಟಸಿ ಡ್ರೀಮ್ ತಂಡ

ವಿಕೆಟ್ ಕೀಪರ್ಸ್; ಕುಸಾಲ್ ಮೆಂಡಿಸ್, ಮೊಹಮ್ಮದ್ ರಿಜ್ವಾನ್ (ನಾಯಕ)

ಬ್ಯಾಟ್ಸ್‌ಮನ್‌ಗಳು: ಭಾನುಕಾ ರಾಜಪಕ್ಸೆ, ಆಸಿಫ್ ಅಲಿ, ಮೊಹಮ್ಮದ್ ನವಾಜ್, ದಾಸುನ್ ಶನಕ,

ಆಲ್‌ರೌಂಡರ್ಸ್: ಶಾದಾಬ್ ಖಾನ್, ಮೊಹಮ್ಮದ್ ನವಾಜ್ (ಉಪನಾಯಕ),

ಬೌಲರ್ಸ್: ನಸೀಮ್ ಶಾ, ದಿಲ್ಶನ್ ಮಧುಶಂಕ, ವನಿಂದು ಹಸರಂಗ

ಶ್ರೀಲಂಕಾ vs ಪಾಕಿಸ್ತಾನ ತಂಡಗಳ ಸಂಭಾವ್ಯ ಆಡುವ 11ರ ಬಳಗ

ಶ್ರೀಲಂಕಾ vs ಪಾಕಿಸ್ತಾನ ತಂಡಗಳ ಸಂಭಾವ್ಯ ಆಡುವ 11ರ ಬಳಗ

ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಚರಿತ್ ಅಸಲಂಕಾ/ಧನಂಜಯ ಡಿ ಸಿಲ್ವ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ಪ್ರಮೋದ್ ಮದುಶನ್/ಅಸಿತಾ ಫೆರ್ನಾಂಡೊ, ದಿಲ್ಶನ್ ಮದುಶನ್

ಪಾಕಿಸ್ತಾನ: ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಬಾಬರ್ ಅಜಂ(ನಾಯಕ), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಆಸಿಫ್ ಅಲಿ, ಖುಷ್ದಿಲ್ ಶಾ, ಹಾರಿಸ್ ರೌಫ್, ನಸೀಮ್ ಶಾ, ಮೊಹಮ್ಮದ್ ಹಸ್ನೇನ್

Story first published: Sunday, September 11, 2022, 16:27 [IST]
Other articles published on Sep 11, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+