Sri Lanka Vs Pakistan: ಈ ತಪ್ಪು ಮಾಡಿದರೆ ಪಾಕಿಸ್ತಾನಕ್ಕೆ ಫೈನಲ್‌ನಲ್ಲಿ ಸೋಲು ಖಚಿತ: ಗೌತಮ್ ಗಂಭೀರ್
ಏಷ್ಯಾಕಪ್ 2022 ಟೂರ್ನಿಯ ಅಂತಿಮ ಪಂದ್ಯ ಭಾನುವಾರ ನಡೆಯಲಿದೆ. ಶ್ರೀಲಂಕಾ ಮತ್ತು ಪಾಕಿಸ್ತಾನ ಪ್ರತಿಷ್ಠಿತ ಕಪ್ ಗೆಲ್ಲಲು ದುಬೈ ಕ್ರೀಡಾಂಗಣದಲ್ಲಿ ಭಾನುವಾರ ಪೈಪೋಟಿ ನಡೆಸಲಿವೆ.
ಶ್ರೀಲಂಕಾ ತಂಡ ಏಷ್ಯಾಕಪ್ 2022ರಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಫೈನಲ್ ಪ್ರವೇಶಿಸಿದೆ. ಗುಂಪು ಹಂತದ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಸೋಲನ್ನಪ್ಪಿದ ಬಳಿಕ, ನಂತರದ ಎಲ್ಲಾ ಪಂದ್ಯಗಳಲ್ಲೂ ಶ್ರೀಲಂಕಾ ಜಯಗಳಿಸಿದೆ. ಬಲಿಷ್ಠ ಭಾರತ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದ ಶ್ರೀಲಂಕಾ, ಫೈನಲ್‌ಗೂ ಮುನ್ನ ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ.
ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿರುವ ಪಾಕಿಸ್ತಾನ ಈಗ ಫೈನಲ್‌ನಲ್ಲಿ ಗೆಲ್ಲಲೇಬೇಕೆಂದು ತಂತ್ರಗಳನ್ನು ರೂಪಿಸುತ್ತಿದೆ. ಕಳೆದ ಪಂದ್ಯದಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಂಡು ಕಪ್ ಗೆಲ್ಲುವತ್ತ ಗಮನ ಹರಿಸುತ್ತಿದೆ. 2014ರ ಏಷ್ಯಾಕಪ್ ಟೂರ್ನಿಯಲ್ಲಿ ಶ್ರೀಲಂಕಾ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಕಪ್ ಗೆದ್ದಿತ್ತು, 2014ರ ನಂತರ ಇದೇ ಮೊದಲ ಬಾರಿಗೆ ಉಭಯ ತಂಡಗಳು ಫೈನಲ್‌ಗೆ ಪ್ರವೇಶ ಪಡೆದಿವೆ.

ಪಾಕ್ ಗೆಲುವಿಗೆ ಗೌತಮ್ ಗಂಭೀರ್ ಸಲಹೆ
ಸೆಪ್ಟೆಂಬರ್ 11, ಭಾನುವಾರ ದುಬೈನಲ್ಲಿ ಶ್ರೀಲಂಕಾ ವಿರುದ್ಧದ ಏಷ್ಯಾ ಕಪ್ 2022 ರ ಫೈನಲ್‌ನಲ್ಲಿ ಪಾಕಿಸ್ತಾನವು ತನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ನಾಲ್ಕು ವೇಗಿಗಳನ್ನು ಆಡಿಸಬೇಕು ಗೌತಮ್ ಗಂಭೀರ್ ಸಲಹೆ ನೀಡಿದ್ದಾರೆ.
ಪಾಕಿಸ್ತಾನ ಇದುವರೆಗಿನ ಎಲ್ಲಾ ಐದು ಪಂದ್ಯಗಳಲ್ಲಿ ಮೂರು ವೇಗಿಗಳನ್ನು ಆಡಿದ್ದಾರೆ, ಮೊಹಮ್ಮದ್ ನವಾಜ್ ಮತ್ತು ಶಾದಾಬ್ ಖಾನ್ ಸ್ಪಿನ್-ಬೌಲಿಂಗ್ ಆಲ್-ರೌಂಡರ್‌ಗಳಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಅಂತಿಮ ಸೂಪರ್ 4 ಪಂದ್ಯದಲ್ಲಿ ಶದಾಬ್ ಖಾನ್ ವಿಶ್ರಾಂತಿ ಪಡೆದಿದ್ದರು, ಆದ ಲೆಗ್ ಸ್ಪಿನ್ನರ್ ಉಸ್ಮಾನ್ ಖಾದಿರ್ ಅವಕಾಶ ಪಡೆದಿದ್ದರು.
ಏಷ್ಯಾ ಕಪ್ ಫೈನಲ್: ಟ್ರೋಫಿಗಾಗಿ ಸೆಣೆಸಾಡಲು ಸಜ್ಜಾದ ಶ್ರೀಲಂಕಾ ಹಾಗೂ ಪಾಕಿಸ್ತಾನ

ವೇಗದ ಬೌಲರ್ ಪಾಕಿಸ್ತಾನದ ಪ್ರಮುಖ ಅಸ್ತ್ರ
ಪಾಕಿಸ್ತಾನಕ್ಕೆ ಮುಖ್ಯ ಅಸ್ತ್ರ ಅವರ ವೇಗದ ಬೌಲಿಂಗ್ ಎಂದು ಅಭಿಪ್ರಾಯಪಟ್ಟಿರುವ ಗೌತಮ್ ಗಂಭೀರ್, ಫೈನಲ್‌ನಲ್ಲಿ ಪಾಕಿಸ್ತಾನದ ಬೌಲರ್‌ಗಳು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೇಳಿದ್ದಾರೆ.
ಮೂರು ವೇಗದ ಬೌಲರ್‌ಗಳ ಬದಲಾಗಿ ಪಾಕಿಸ್ತಾನ ನಾಲ್ವರು ವೇಗಿಗಳನ್ನು ಕಣಕ್ಕಿಳಿಸಿದರೆ ಉತ್ತಮ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. ಮೂವರು ವೇಗದ ಬೌಲರ್ ಗಳು ಪವರ್‌ಪ್ಲೇಯ ಆರು ಓವರ್ ಮಾಡುತ್ತಾರೆ ಮತ್ತೊಬ್ಬ ವೇಗದ ಬೌಲರ್ ಇದ್ದರೆ ತಂಡಕ್ಕೆ ಮಧ್ಯಮ ಓವರ್ ಗಳಲ್ಲಿ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.

150 ರನ್ ಗಳಿಸಿದರು ಡಿಫೆಂಡ್ ಮಾಡಬಹುದು
ಪಾಕಿಸ್ತಾನಕ್ಕೆ ಬ್ಯಾಟಿಂಗ್‌ಗಿಂತ ಬೌಲಿಂಗ್ ಪ್ರಾಬಲ್ಯ ಹೆಚ್ಚಾಗಿದೆ. ಅವರ ಬ್ಯಾಟರ್ ಗಳು 150 ರನ್ ಗಳಿಸಿದರು, ಅದನ್ನು ಡಿಫೆಂಡ್ ಮಾಡಿಕೊಳ್ಳುವಂತ ಬೌಲಿಂಗ್ ಸಾಮರ್ಥ್ಯ ಪಾಕಿಸ್ತಾನಕ್ಕೆ ಇದೆ, ಆದ್ದರಿಂದಲೇ ಪಾಕಿಸ್ತಾನ ನಾಲ್ವರು ವೇಗಿಗಳನ್ನು ಆಡಿಸುವುದು ಉತ್ತಮ ಎಂದು ಹೇಳಿದ್ದಾರೆ.
"ನಿಮ್ಮಲ್ಲಿ ನಾಲ್ವರು ವೇಗದ ಬೌಲರ್‌ಗಳು ಇದ್ದಾಗ ಪವರ್‌ಪ್ಲೇ ವೇಗದ ಬೌಲಿಂಗ್ ನಂತರವೂ, 20 ಓವರ್‌ಗಳಲ್ಲಿ 16 ಓವರ್‌ಗಳು ವೇಗದ ಬೌಲಿಂಗ್ ಇರುತ್ತದೆ ಎಂದು ನಿಮಗೆ ತಿಳಿದಿದೆ. ಟಿ20 ಕ್ರಿಕೆಟ್‌ನಲ್ಲಿ ಪ್ರತಿ ತಂಡವು ಬ್ಯಾಟಿಂಗ್ ಮೇಲೆ ಗಮನ ನೀಡುತ್ತದೆ. ಆದರೆ ಪಾಕಿಸ್ತಾನವು ಬೌಲಿಂಗ್‌ನಿಂದ ಗೆಲ್ಲಬಲ್ಲ ತಂಡವಾಗಿದೆ. ಅವರ ಬ್ಯಾಟಿಂಗ್ 150 ಸ್ಕೋರ್ ಮಾಡಬಹುದು ಆದರೆ ಅದನ್ನು ರಕ್ಷಿಸಲು ಉತ್ತಮ ಬೌಲಿಂಗ್ ಹೊಂದಿರಬೇಕು." ಎಂದು ಹೇಳಿದ್ದಾರೆ.

ಟಿ20 ವಿಶ್ವಕಪ್‌ನಲ್ಲೂ ಹೆಚ್ಚುವರಿ ಬೌಲರ್ ಬೇಕು
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಯಶಸ್ಸಿಗೆ ಹೆಚ್ಚುವರಿ ವೇಗಿ ಪ್ರಮುಖರಾಗಬಹುದು ಎಂದು ಗಂಭೀರ್ ಹೇಳಿದರು.
"ಪಾಕಿಸ್ತಾನವು ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದರೆ, ಅವರು ನಾಲ್ಕು ವೇಗದ ಬೌಲರ್‌ಗಳೊಂದಿಗೆ ಹೋಗಬೇಕಾಗುತ್ತದೆ. ಸ್ಪಿನ್ ವಿಭಾಗದಲ್ಲಿ ಶಾದಾಬ್ ಖಾನ್ ಮತ್ತು ಮೊಹಮ್ಮದ್ ನವಾಜ್ ಅವರ ಮೇಲೆ ನಂಬಿಕೆ ಇಡಬೇಕಾಗುತ್ತದೆ. ಅವರು ಉತ್ತಮ ಪ್ರದರ್ಶನ ನೀಡುತ್ತಾರೆ" ಎಂದು ಹೇಳಿದ್ದಾರೆ.
ಫೈನಲ್ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ಅವರು, ನಾಲ್ವರು ವೇಗಿಗಳನ್ನು ಉಪಯೋಗಿಸಿದರೆ ಪಾಕಿಸ್ತಾನ ಗೆಲ್ಲುತ್ತದೆ, ಒಂದು ವೇಳೆ ಪಾಕಿಸ್ತಾನ ಏನಾದರೂ ಮೂರು ವೇಗದ ಬೌಲರ್ ಜೊತೆ ಫೈನಲ್‌ನಲ್ಲಿ ಆಡಿದರೆ ಖಂಡಿತವಾಗಿಯೂ ಶ್ರೀಲಂಕಾ ಗೆಲ್ಲುತ್ತದೆ ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications