Asia Cup 2022: ಪಾಕ್‌ಗೆ ರಿಜ್ವಾನ್ ಆಸರೆ; 194 ರನ್ ಚೇಸ್ ಮಾಡಿದರೆ ಹಾಂಗ್‌ಕಾಂಗ್ ಸೂಪರ್ 4ಗೆ

ಇಂದು ( ಸೆಪ್ಟೆಂಬರ್ 2 ) ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಹಾಂಗ್‌ಕಾಂಗ್ ತಂಡಗಳು ಮುಖಾಮುಖಿಯಾಗಿವೆ. ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಹಾಂಗ್‌ಕಾಂಗ್ ನಾಯಕ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಪಾಕಿಸ್ತಾನ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿರುವ ಪಾಕಿಸ್ತಾನ ಮೊಹಮ್ಮದ್ ರಿಜ್ವಾನ್ ಹಾಗೂ ಫಖರ್ ಜಮಾನ್ ಅವರ ಅರ್ಧಶತಕ ಮತ್ತು ಅಂತಿಮ ಓವರ್‌ನಲ್ಲಿ ಖುಷ್‌ದಿಲ್ ಶಾ 4 ಸಿಕ್ಸರ್ ಸಿಡಿಸಿದ ಪರಿಣಾಮ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 193 ರನ್ ಕಲೆಹಾಕಿದ್ದು ಎದುರಾಳಿ ಹಾಂಗ್‌ಕಾಂಗ್ ತಂಡಕ್ಕೆ ಗೆಲ್ಲಲು 194 ರನ್‌ಗಳ ಕಠಿಣ ಗುರಿಯನ್ನು ನೀಡಿದೆ.
ಪಾಕಿಸ್ತಾನ ತಂಡದ ಪರ ಆರಂಭಿಕರಾಗಿ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಹಾಗೂ ನಾಯಕ ಬಾಬರ್ ಅಜಮ್ ಕಣಕ್ಕಿಳಿದರು. ಈ ಪೈಕಿ ಬಾಬರ್ ಅಜಮ್ 9 ರನ್ ಕಲೆಹಾಕಿ ಔಟ್ ಆದರು. ಹೀಗೆ 2.5 ಓವರ್‌ಗಳಲ್ಲಿ 13 ರನ್‌ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡ ಪಾಕಿಸ್ತಾನ ತಂಡಕ್ಕೆ ಮೊಹಮ್ಮದ್ ರಿಜ್ವಾನ್ ಹಾಗೂ ಫಖರ್ ಜಮಾನ್ ಆಸರೆಯಾದರು. ಎರಡನೇ ವಿಕೆಟ್‌ಗೆ ಜತೆಯಾದ ಈ ಜೋಡಿ 116 ರನ್‌ಗಳ ಜತೆಯಾಟವನ್ನಾಡಿತು. ಫಖರ್ ಜಮಾನ್ 53 ರನ್ ಕಲೆಹಾಕಿದರೆ, ಮೊಹಮ್ಮದ್ ರಿಜ್ವಾನ್ 57 ಎಸೆತಗಳಲ್ಲಿ ಅಜೇಯ 78 ರನ್ ಕಲೆಹಾಕಿದರು. ಹಾಗೂ ಅಂತಿಮ ಹಂತದಲ್ಲಿ ಅಬ್ಬರಿಸಿದ ಖುಷ್‌ದಿಲ್ ಶಾ 15 ಎಸೆತಗಳಲ್ಲಿ ಅಜೇಯ 35 ರನ್ ಬಾರಿಸಿದರು. ಅದರಲ್ಲಿಯೂ ಅಂತಿಮ ಓವರ್‌ನಲ್ಲಿ 4 ಸಿಕ್ಸರ್ ಚಚ್ಚಿದ ಖುಷ್‌ದಿಲ್ ಶಾ ಪಾಕ್ ದೊಡ್ಡ ರನ್ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು.
ಉಭಯ ತಂಡಗಳ ಆಡುವ ಬಳಗಗಳು
ಪಾಕಿಸ್ತಾನ ಆಡುವ ಬಳಗ: ಮೊಹಮ್ಮದ್ ರಿಜ್ವಾನ್ ( ವಿಕೆಟ್ ಕೀಪರ್ ), ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಶಾದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಹಾರಿಸ್ ರೌಫ್, ನಸೀಮ್ ಶಾ ಮತ್ತು ಶಾನವಾಜ್ ಧಹನಿ
ಬೆಂಚ್ ಉಸ್ಮಾನ್ ಖಾದಿರ್, ಹಸನ್ ಅಲಿ, ಹಸನ್ ಅಲಿ, ಹಸ್ನಾನ್,
ಹಾಂಗ್ ಕಾಂಗ್ ಆಡುವ ಬಳಗ: ನಿಜಾಕತ್ ಖಾನ್ (ನಾಯಕ), ಯಾಸಿಮ್ ಮುರ್ತಾಜಾ, ಬಾಬರ್ ಹಯಾತ್, ಕಿಂಚಿತ್ ಶಾ, ಐಜಾಜ್ ಖಾನ್, ಜೀಶನ್ ಅಲಿ, ಸ್ಕಾಟ್ ಮೆಕೆಚ್ನಿ (ವಿಕೆಟ್ ಕೀಪರ್), ಹರೂನ್ ಅರ್ಷದ್, ಎಹ್ಸಾನ್ ಖಾನ್, ಆಯುಷ್ ಶುಕ್ಲಾ ಮತ್ತು ಮೊಹಮ್ಮದ್ ಘಜನ್ಫರ್
ಬೆಂಚ್ ವಾಜಿದ್ ಶಾ, ಅಫ್ತಾಬ್ ಹುಸೇನ್, ಅಫ್ತಾಬ್ ಹುಸೇನ್ ತ್ರಿವೇದಿ, ಅತೀಕ್ ಇಕ್ಬಾಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications