
ಕ್ಯಾಚ್‌ಗಳು ಪಂದ್ಯಗಳನ್ನು ಗೆಲ್ಲಿಸುತ್ತವೆ
ಶ್ರೀಲಂಕಾ 23 ರನ್‌ಗಳಿಂದ ಗೆದ್ದ ಏಷ್ಯಾ ಕಪ್ ಪಂದ್ಯಾವಳಿಯಲ್ಲಿನ ಮುಖಾಮುಖಿಯು ಪಾಕಿಸ್ತಾನದ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರಿಗೆ ದುಃಸ್ವಪ್ನವಾಗಿ ಮಾರ್ಪಟ್ಟಿತು. ಪವರ್‌ಪ್ಲೇಯಲ್ಲಿ ಅದ್ಭುತ ಆರಂಭದ ಹೊರತಾಗಿಯೂ, ಶ್ರೀಲಂಕಾ ವಿರುದ್ಧ ಹೋರಾಡಿದ ಬಾಬರ್ ಅಜಂ ನೇತೃತ್ವದ ತಂಡವು ಮಧ್ಯಮ ಓವರ್‌ಗಳಲ್ಲಿ ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ.
ಕ್ರಿಕೆಟ್‌ನಲ್ಲಿ 'ಕ್ಯಾಚ್ ಕೈಚೆಲ್ಲಿದರೆ, ಮ್ಯಾಚ್ ಕೈಚೆಲ್ಲಿದಂತೆ' ಎಂಬ ವ್ಯಾಖ್ಯಾನವಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕ್ಯಾಚ್ ಪಡೆಯುವಾಗ ಪಾಕಿಸ್ತಾನದ ಫೀಲ್ಡಿಂಗ್ ಇನ್ನಿಂಗ್ಸ್‌ನಲ್ಲಿ ತಲೆಗೆ ಪೆಟ್ಟಾದ ಶಾದಾಬ್ ಖಾನ್, ಎರಡು ನಿರ್ಣಾಯಕ ಕ್ಯಾಚ್‌ಗಳನ್ನು ಕೈಬಿಟ್ಟರು. ಅದರಲ್ಲಿ ಒಂದು ಅಂತಿಮವಾಗಿ ಡೆತ್ ಓವರ್‌ನಲ್ಲಿ ಸಿಕ್ಸರ್‌ಗೆ ಹೋಯಿತು. ಟ್ವೀಟ್‌ನಲ್ಲಿ ಅವರು ಹೀಗೆ ಹೇಳಿದ್ದಾರೆ, "ಕ್ಯಾಚ್‌ಗಳು ಪಂದ್ಯಗಳನ್ನು ಗೆಲ್ಲಿಸುತ್ತವೆ. ಕ್ಷಮಿಸಿ, ಈ ಸೋಲಿನ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ನಾನು ನನ್ನ ತಂಡವನ್ನು ನಿರಾಸೆಗೊಳಿಸಿದ್ದೇನೆ," ಎಂದು ಬೇಸರ ವ್ಯಕ್ತಪಡಿಸಿದರು.

ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಮೊಹಮ್ಮದ್ ರಿಜ್ವಾನ್
ಏಷ್ಯಾ ಕಪ್‌ನಲ್ಲಿನ ಅದ್ಭುತ ಪ್ರದರ್ಶನಕ್ಕಾಗಿ ಪಾಕಿಸ್ತಾನದ ಆಲ್‌ರೌಂಡರ್ ನಸೀಮ್ ಶಾ, ಹ್ಯಾರಿಸ್ ರೌಫ್ ಮತ್ತು ಮೊಹಮ್ಮದ್ ನವಾಜ್‌ರನ್ನು ಶ್ಲಾಘಿಸಿದ ಶಾದಾಬ್ ಖಾನ್, ಟೂರ್ನಮೆಂಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಮೊಹಮ್ಮದ್ ರಿಜ್ವಾನ್ ಅವರ ಧೀರ ಪ್ರಯತ್ನವನ್ನು ಹಾಡಿ ಹೊಗಳಿದರು.
"ತಂಡಕ್ಕೆ ಧನಾತ್ಮಕ ಅಂಶಗಳು ಸೇರ್ಪಡೆಯಾಗಿವೆ. ನಸೀಮ್ ಶಾ, ಹ್ಯಾರಿಸ್ ರೌಫ್, ಮೊಹಮ್ಮದ್ ನವಾಜ್ ಅವರ ಸಂಪೂರ್ಣ ಬೌಲಿಂಗ್ ದಾಳಿ ಅದ್ಭುತವಾಗಿದೆ. ಮೊಹಮ್ಮದ್ ರಿಜ್ವಾನ್ ಕಠಿಣವಾಗಿ ಹೋರಾಡಿದರು. ಇಡೀ ತಂಡವು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದೆ. ಶ್ರೀಲಂಕಾಕ್ಕೆ ಅಭಿನಂದನೆಗಳು," ಎಂದು ಶಾದಾಬ್ ಖಾನ್ ತಿಳಿಸಿದರು.
ಓವರ್‌ಥ್ರೋ ತಡೆಯಲು ಯತ್ನಿಸುತ್ತಿದ್ದಾಗ ಜಾರಿಬಿದ್ದರು
ಏಷ್ಯಾ ಕಪ್ ಫೈನಲ್‌ನಲ್ಲಿ ಶಾದಾಬ್ ಖಾನ್ ಓವರ್‌ಥ್ರೋ ತಡೆಯಲು ಯತ್ನಿಸುತ್ತಿದ್ದಾಗ ಜಾರಿಬಿದ್ದರು. ಶಾದಾಬ್ ಅವರ ತಲೆಯ ಬದಿಯಲ್ಲಿ ಚೆಂಡು ಬಡಿದ ಕಾರಣ ಪಾಕಿಸ್ತಾನದ ಫಿಸಿಯೋ ಅವರನ್ನು ಕರೆಯಲಾಯಿತು. ನಂತರ ಆಲ್‌ರೌಂಡರ್‌ಗೆ ತಪಾಸಣೆ ಮಾಡಿದರು. ನಂತರ ಅವರ ಕೋಟಾದ ಓವರ್‌ಗಳನ್ನು ಬೌಲ್ ಮಾಡಲು ಹೋದನು.
ಆದಾಗ್ಯೂ, ಪಾಕಿಸ್ತಾನವು ಟೇಬಲ್ ಅನ್ನು ತಮ್ಮ ಪರವಾಗಿ ತಿರುಗಿಸಿದಾಗ, ಒಂದು ವಿಕೆಟ್ ಪಡೆದ ಶಾದಾಬ್ ಖಾನ್, ಲಾಂಗ್ ಆನ್‌ನಲ್ಲಿ ಭಾನುಕಾ ರಾಜಪಕ್ಸೆ ಅವರ ಮಹತ್ವದ ಕ್ಯಾಚ್ ಅನ್ನು ಕೈಬಿಟ್ಟರು. ಶ್ರೀಲಂಕಾ ಆಟಗಾರ ಗಾಳಿಯಲ್ಲಿ ಚೆಂಡನ್ನು ತೂರಿದರು, ಆದರೆ ಶಾದಾಬ್ ಖಾನ್ ಚೆಂಡಿನ ಪಥವನ್ನು ತಪ್ಪಾಗಿ ನಿರ್ಣಯಿಸಿದರು ಮತ್ತು ಬ್ಯಾಕ್-ಪೆಡ್ಲಿಂಗ್ ಮಾಡುವಾಗ ಕ್ಯಾಚ್ ಹಿಡಿಯಲು ವಿಫಲರಾದರು. ಅದು ಸಿಕ್ಸರ್ ಕೂಡ ಆಯಿತು. ಕ್ಯಾಚ್ ಕೈಚೆಲ್ಲಿದರ ಜೊತೆಗೆ ಸಿಕ್ಸರ್ ಆಗಿದ್ದು, ಶ್ರೀಲಂಕಾ ತಂಡಕ್ಕೆ ನೆರವಾಯಿತು.

ಶಾದಾಬ್ ಖಾನ್ ಮತ್ತು ಆಸಿಫ್ ಅಲಿ ಪರಸ್ಪರ ಡಿಕ್ಕಿ
ಈ ವೇಳೆ ಬೌಂಡರಿ ಲೈನ್ ಬಳಿ ಕ್ಯಾಚ್ ಹಿಡಿಯಲೆತ್ನಿಸಲು ಓಡೋಡಿ ಬಂದ ಶಾದಾಬ್ ಖಾನ್ ಮತ್ತು ಆಸಿಫ್ ಅಲಿ ಪರಸ್ಪರ ಡಿಕ್ಕಿ ಹೊಡೆದರು. ಮೊಹಮ್ಮದ್ ಹಸ್ನೈನ್ ಅವರ 19ನೇ ಓವರ್‌ನಲ್ಲಿ ರಾಜಪಕ್ಸೆ ಅಡ್ಡಲಾಗಿ ಸ್ವೈಪ್ ಮಾಡಿದರು ಮತ್ತು ಡೀಪ್ ಮಿಡ್‌ವಿಕೆಟ್‌ನಲ್ಲಿದ್ದ ಶಾದಾಬ್ ಅವರ ಬಲಕ್ಕೆ ಓಡಿಹೋದರೆ, ಆಸಿಫ್ ಲಾಂಗ್ ಆನ್‌ನಲ್ಲಿ ಅವರ ಎಡಕ್ಕೆ ಓಡಿಹೋದರು. ಆಸಿಫ್ ಕೈಯಿಂದ ಚೆಂಡು ಜಾರಿ ಹೊರಬಿದ್ದು ಬೌಂಡರಿ ಲೈನ್ ಮೇಲೆ ಹೋಗುವ ಮುನ್ನ ಶಾದಾಬ್ ಖಾನ್ ತಲೆ ಆಸಿಫ್ ಮೊಣಕೈಗೆ ಅಪ್ಪಳಿಸಿತು.
ಭಾನುಕಾ ರಾಜಪಕ್ಸೆ 45 ಎಸೆತಗಳಲ್ಲಿ ಔಟಾಗದೆ 71 ರನ್ ಗಳಿಸುವುದರೊಂದಿಗೆ ಶ್ರೀಲಂಕಾ 170/6 ಸ್ಕೋರ್ ಮಾಡಿತು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ 147 ರನ್‌ಗಳಿಗೆ ಆಲೌಟ್ ಆಯಿತು.


Click it and Unblock the Notifications
