ಎಂತಹ ಮನೋಹರ ದೃಶ್ಯ: ವಿರಾಟ್ ಕೊಹ್ಲಿ ಶತಕದ ಬಗ್ಗೆ ಎ ಬಿ ಡಿವಿಲಿಯರ್ಸ್ ಹೇಳಿದ್ದೇನು?
1021 ದಿನಗಳ ನಂತರ ವಿರಾಟ್ ಕೊಹ್ಲಿ ಶತಕದ ಬರ ನೀಗಿಸಿಕೊಂಡಿದ್ದಾರೆ. ತಮ್ಮ ವಿರುದ್ಧದ ಎಲ್ಲಾ ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ಅಫ್ಘಾನಿಸ್ತಾನದ ವಿರುದ್ಧ ನಡೆದ ಏಷ್ಯಾಕಪ್ ಸೂಪರ್ 4 ಹಂತದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ತಮ್ಮ 71 ನೇ ಶತಕ ಪೂರೈಸಿದ್ದಾರೆ.
ಶತಕ ಗಳಿಸುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವಿರಾಟ್ ಕೊಹ್ಲಿ ಆಟದ ಬಗ್ಗೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಹಲವು ದಿಗ್ಗಜ ಆಟಗಾರರು ಕೊಹ್ಲಿ ಶತಕ ಗಳಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಮಿಸ್ಟರ್ 360 ಎ ಬಿ ಡಿವಿಲಿಯರ್ಸ್ ಕೂಡ ವಿರಾಟ್ ಕೊಹ್ಲಿ ಶತಕದ ಕುರಿತು ಟ್ವೀಟ್ ಮಾಡಿದ್ದು ಭಾರಿ ವೈರಲ್ ಆಗಿದೆ.
ಎಬಿಡಿ ಮತ್ತು ವಿರಾಟ್ ಕೊಹ್ಲಿ ನಡುವೆ ಗಾಢವಾದ ಸ್ನೇಹವಿದೆ. ಇಬ್ಬರೂ ಆಟಗಾರರು ದೀರ್ಘಕಾಲ ಐಪಿಎಲ್‌ನಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡಿದ್ದಾರೆ. ಎಬಿಡಿ ಸದ್ಯ ನಿವೃತ್ತಿ ಘೋಷಿಸಿದ್ದರು ವಿರಾಟ್ ಕೊಹ್ಲಿ ಜೊತೆ ಸ್ನೇಹ ಉಳಿಸಿಕೊಂಡಿದ್ದಾರೆ. ಬಹುಕಾಲದ ನಂತರ ಗೆಳೆಯನ ಶತಕ ಗಳಿಸಿದ್ದನ್ನು ನೋಡಿರುವ ಎ ಬಿ ಡಿವಿಲಿಯರ್ಸ್ ಸಂತೋಷಗೊಂಡಿದ್ದಾರೆ. ಟ್ವೀಟ್ ಮುಖಾಂತರ ಗೆಳೆಯನಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಪಂದ್ಯದ ಮುನ್ನಾದಿನ ಎಬಿಡಿ ಜೊತೆ ಮಾತನಾಡಿದ್ದ ಕೊಹ್ಲಿ
ಅಫ್ಘಾನಿಸ್ತಾನ ಪಂದ್ಯಕ್ಕೆ ಹಿಂದಿನ ದಿನ ವಿರಾಟ್ ಕೊಹ್ಲಿ ಎ ಬಿ ಡಿವಿಲಿಯರ್ಸ್ ಜೊತೆ ಮಾತನಾಡಿರುವ ವಿಚಾರ ಬಹಿರಂಗವಾಗಿದೆ. ಈ ಕುರಿತು ತಮ್ಮ ಟ್ವೀಟ್‌ನಲ್ಲಿ ಎಬಿಡಿ ಬರೆದುಕೊಂಡಿದ್ದಾರೆ. "ನಿನ್ನೆ ಅವರ ಜೊತೆ ಮಾತನಾಡಿದಾಗ ಏನೋ ನಡೆಯುತ್ತಿರುವುದು ಗೊತ್ತಾಯಿತು, ಚೆನ್ನಾಗಿ ಆಡಿದೆ ಗೆಳೆಯ" ಎಂದು ವಿರಾಟ್ ಕೊಹ್ಲಿಗೆ ಶುಭಾಶಯ ತಿಳಿಸಿದ್ದಾರೆ.
ಮತ್ತೊಂದು ಟ್ವೀಟ್ ಮಾಡಿರುವ ಎಬಿ ಡಿವಿಲಿರ್ಸ್ ವಿರಾಟ್ ಕೊಹ್ಲಿ ಶತಕ ಗಳಿಸಿದ ಸಂದರ್ಭವನ್ನು ಎಂತ ಮನೋಹರ ದೃಶ್ಯ ಎಂದು ಬಣ್ಣಿಸಿದ್ದಾರೆ.
ವಿರಾಟ್ ಕೊಹ್ಲಿ ಶತಕ, ಸುರೇಶ್ ರೈನಾ ಸಂತಸ
ವಿರಾಟ್ ಕೊಹ್ಲಿ ಶತಕ ಗಳಿಸಿದ ನಂತರ ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟರ್ ಸುರೇಶ್ ರೈನಾ ಸಂತಸ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಮೊದಲನೇ ಟಿ 20 ಶತಕ ಗಳಿಸಿದ್ದಾರೆ. ನೀವು ಶತಕ ಗಳಿಸಿದ್ದು ಸಂತಸ ತಂದಿದೆ. ಅದ್ಭುತವಾದ ಇನ್ನಿಂಗ್ಸ್‌ಗೆ ಮನಃಪೂರ್ವಕ ಗೌರವ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಸುರೇಶ್ ರೈನಾ ಮಾತ್ರವಲ್ಲದೆ, ಲಕ್ಷಾಂತರ ಅಭಿಮಾನಿಗಳು ವಿರಾಟ್ ಕೊಹ್ಲಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಶತಕ ಗಳಿಸುತ್ತಿದ್ದಂತೆ ಟ್ವಿಟರ್ ನಲ್ಲಿ ಕ್ರಿಕೆಟಿಗರು, ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.
ಮತ್ತಷ್ಟು ಶತಕ ಬರಲಿವೆ ಎಂದ ಯೂಸುಫ್ ಪಠಾಣ್
ವಿರಾಟ್ ಕೊಹ್ಲಿ ಶತಕದ ಕುರಿತು ಟ್ವೀಟ್ ಮಾಡಿರುವ ಸ್ಪಿನ್ನರ್ ಅಮಿತ್ ಮಿಶ್ರಾ, "ಉದ್ವೇಗ, ಒತ್ತಡ ಅಥವಾ ಅದು ಏನೇ ಇರಲಿ, ಅದು ವಿರಾಟ್ ಕೊಹ್ಲಿಯ ಮುಖದಲ್ಲಿ ಸಂಪೂರ್ಣವಾಗಿ ಕಾಣೆಯಾಗಿದೆ ಮತ್ತು ಆದ್ದರಿಂದ ಅವರು ತುಂಬಾ ಮುಕ್ತವಾಗಿ ಮತ್ತು ಆತ್ಮವಿಶ್ವಾಸದಿಂದ ಆಡುತ್ತಿದ್ದಾರೆ. ಮೈದಾನದ ಎಲ್ಲೆಡೆ ಸ್ಕೋರಿಂಗ್ ಸಾಗುತ್ತದೆ." ಎಂದು ಹೇಳಿದ್ದಾರೆ.
"1021 ದಿನಗಳ ನಂತರ ವಿರಾಟ್ ಕೊಹ್ಲಿ ಶತಕ ಗಳಿಸಿದ್ದಾರೆ. ಭಾರತ ಕ್ರಿಕೆಟ್ ಮತ್ತು ವಿರಾಟ್ ಕೊಹ್ಲಿಗೆ ಇದು ಉತ್ತಮ ದಿನ, ಮತ್ತಷ್ಟು ಶತಕಗಳು ಬರಲಿವೆ" ಎಂದು ಯೂಸುಫ್ ಪಠಾಣ್ ಟ್ವೀಟ್ ಮಾಡಿದ್ದಾರೆ.
ಕಿಂಗ್ ಈಸ್ ಬ್ಯಾಕ್ ಆರ್ ಸಿಬಿ
ಮಾಜಿ ಆಟಗಾರ ಹರ್ಭಜನ್ ಸಿಂಗ್ ವಿರಾಟ್ ಕೊಹ್ಲಿ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರೆ. ಪಾಕಿಸ್ತಾನದ ವೇಗದ ಬೌಲರ್ ಹಸನ್ ಅಲಿ ಗ್ರೇಟ್ ಈಸ್ ಬ್ಯಾಕ್ ಎಂದು ಟ್ವೀಟ್ ಮಾಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ಎಲ್ಲಾ ಐಪಿಎಲ್ ಫ್ರಾಂಚೈಸಿಗಳು ವಿರಾಟ್ ಕೊಹ್ಲಿಗೆ ಅಭಿನಂದನೆ ಸಲ್ಲಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications