Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯಾಕಪ್ 2022: ಪಾಕಿಸ್ತಾನಕ್ಕೆ ಮತ್ತೊಂದು ಆಘಾತ, ಶಾಹೀನ್ ಅಫ್ರಿದಿ ಬಳಿಕ ಮತ್ತೊಬ್ಬ ಬೌಲರ್‌ಗೆ ಇಂಜ್ಯುರಿ!

Mohammad wasim

ಈಗಾಗಲೇ ತನ್ನ ಪ್ರಮುಖ ಬೌಲರ್ ಶಾಹೀನ್ ಅಫ್ರಿದಿ ಇಂಜ್ಯುರಿಯಿಂದಾಗಿ ಹಿನ್ನಡೆ ಅನುಭವಿಸಿರುವ ಪಾಕಿಸ್ತಾನ, ಭಾನುವಾರ(ಆ.28) ನಡೆಯಲಿರುವ ಭಾರತದ ವಿರುದ್ಧದ ಪಂದ್ಯಕ್ಕೂ ಮೊದಲು ಮತ್ತೊಬ್ಬ ಬೌಲರ್‌ ತಂಡದಿಂದ ಹೊರಬೀಳುವ ಚಿಂತೆಗೆ ಒಳಗಾಗಿದೆ.

ಮೊಣಕಾಲು ಗಾಯದಿಂದಾಗಿ ಈಗಾಗಲೇ ಶಾಹೀನ್ ಶಾ ಅಫ್ರಿದಿ ಏಷ್ಯಾಕಪ್ ಟೂರ್ನಿಯಿಂದ ಹೊರಗುಳಿದಿದ್ದು, ಮತ್ತೊಮ್ಮೆ ವೇಗದ ಬೌಲರ್ ಮೊಹಮ್ಮದ್ ವಾಸಿಂ ಗಾಯಗೊಂಡಿದ್ದು, ಅಭ್ಯಾಸ ಶಿಬಿರದಿಂದ ಹೊರಗುಳಿದಿದ್ದಾರೆ.

ಇತ್ತೀಚೆಗಷ್ಟೇ 21ನೇ ವರ್ಷಕ್ಕೆ ಕಾಲಿಟ್ಟ ಮೊಹಮ್ಮದ್ ವಾಸಿಂ ಬೆನ್ನು ನೋವಿಗೆ ತುತ್ತಾಗಿದ್ದು, ಅಭ್ಯಾಸವನ್ನ ಈಗಾಗಲೇ ಮೊಟಕುಗೊಳಿಸಿದ್ದಾರೆ. ದುಬೈನಲ್ಲಿ ನಡೆಯಲಿರುವ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಸ್ಕ್ವಾಡ್‌ನಲ್ಲಿರುವ ವಾಸಿಂ ಆರಂಭದಲ್ಲಿ ಅಭ್ಯಾಸ ಮಾಡಿದ್ರು ಸಹ, ನಂತರ ನೋವಿನಿಂದಾಗಿ ತಂಡದಿಂದ ಹೊರನಡೆದರು. ಬೆನ್ನು ನೋವಿನ ತೀವ್ರತೆ ಹಾಗೂ ಕಾರಣ ಇನ್ನೂ ತಿಳಿದುಬಂದಿಲ್ಲ. ಆದ್ರೆ ವಾಸಿಂ ಎಂಆರ್ಐ ಸ್ಕ್ಯಾನ್‌ಗೆ ಒಳಗಾಗಲಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಬಂದಿದೆ ಎಂದು ಕ್ರಿಕ್‌ಇನ್ಫೋ ವರದಿ ಮಾಡಿದೆ.

ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಟಿ20 ವಿಶ್ವಕಪ್ ನಡೆಯಲಿರುವುದರಿಂದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್(ಪಿಸಿಬಿ) ಹೆಚ್ಚಿನ ರಿಸ್ಕ್‌ ತೆಗೆದುಕೊಳ್ಳಲು ಸಿದ್ದವಿಲ್ಲ. ಹೀಗಾಗಿ ಈ ಗಾಯವು ದೀರ್ಘ ಕಾಲ ಉಳಿಯದಂತೆ ಎಚ್ಚರವಹಿಸಲು ವಾಸಿಂ ಅನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಿದೆ.

ಏಷ್ಯಾಕಪ್ ಬಳಿಕ ಪಾಕಿಸ್ತಾನ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಏಳು ಟಿ20 ಪಂದ್ಯಗಳ ಸರಣಿಯನ್ನ ಆಡಲಿದೆ. ಇದಾದ ಬಳಿಕ ನ್ಯೂಜಿಲೆಂಡ್ ವಿರುದ್ಧ ಟ್ರೈ ಸೀರಿಸ್‌ನಲ್ಲಿ ಭಾಗಿಯಾಗಲಿದೆ.

ಮೊಹಮ್ಮದ್ ವಾಸಿಂ ಇದುವರೆಗೂ ಪಾಕಿಸ್ತಾನ ಪರ 11 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾಗಿಯಾಗಿದ್ದು, 15.88ರ ಸರಾಸರಿಯಲ್ಲಿ 17 ವಿಕೆಟ್ ಪಡೆದಿದ್ದಾರೆ. ಕಳೆದ ಜುಲೈನಲ್ಲಷ್ಟೇ ವೆಸ್ಟ್ ಇಂಡೀಸ್ ವಿರುದ್ಧ ಪದಾರ್ಪಣೆ ಮಾಡಿದ ವಾಸಿಂ ಆಸ್ಟ್ರೇಲಿಯಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದರು. ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಐದು ವಿಕೆಟ್ ಪಡೆದಿದ್ದರು.

ಏಷ್ಯಾಕಪ್ ಟೂರ್ನಿಯಲ್ಲಿ ಅಫ್ರಿದಿ ಅನುಪಸ್ಥಿತಿಯಲ್ಲಿ ತಂಡದ ಮ್ಯಾನೇಜ್‌ಮೆಂಟ್ ಈಗಾಗಲೇ ಹೆಣಗಾಡುತ್ತಿರುವ ಕಾರಣ ವಾಸಿಂ ಗಾಯವು ಕಳವಳಕಾರಿಯಾಗಿದೆ. ಗಾಯದ ಹೊರತಾಗಿಯೂ, ಅಫ್ರಿದಿ ಅವರು ಪಾಕ್ ತಂಡದೊಂದಿಗೆ ದುಬೈಗೆ ತೆರಳಿರುವುದು ಅನೇಕ ಚರ್ಚೆಗೆ ಕಾರಣವಾಗಿದೆ. ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಒತ್ತಾಯದ ಮೇರೆಗೆ ಶಾಹೀನ್ ಅಫ್ರಿದಿ ಪಾಕ್ ತಂಡದೊಂದಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಪಿಸಿಬಿ ತಿಳಿಸಿದೆ.

Story first published: Friday, August 26, 2022, 9:52 [IST]
Other articles published on Aug 26, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+