Asia Cup 2022: ಅತಿ ಹೆಚ್ಚು ಶತಕ, ಅರ್ಧಶತಕ ಹಾಗೂ ಡಕೌಟ್ ಆದ ಪ್ಲೇಯರ್ಸ್

ಆಗಸ್ಟ್ 27 ರಿಂದ ಯುಎಇಯಲ್ಲಿ ಏಷ್ಯಾ ಕಪ್ ಆರಂಭವಾಗಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಆಗಸ್ಟ್ 28ರಂದು ಭಾನುವಾರ ಪಾಕಿಸ್ತಾನದ ವಿರುದ್ಧ ಆಡಲಿದೆ. ಏಷ್ಯಾದ ಪವರ್‌ಹೌಸ್‌ಗಳಾದ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳ ಮುಖಾಮುಖಿ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.
ಒಟ್ಟು 6 ತಂಡಗಳು ಭಾಗವಹಿಸಲಿರುವ ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಈಗಾಗಲೇ ಅರ್ಹತೆ ಪಡೆದಿದ್ದು, ಆರನೇ ಸ್ಥಾನಕ್ಕಾಗಿ ಅರ್ಹತಾ ಸುತ್ತಿನಲ್ಲಿ ಹಾಂಕಾಂಗ್, ಸಿಂಗಾಪುರ, ಕುವೈತ್ ಮತ್ತು ಯುಎಇ ತಂಡಗಳು ಪೈಪೋಟಿ ನಡೆಸಲಿವೆ.
ಏಷ್ಯಾಕಪ್ 2016ರಲ್ಲಿ ಮಾತ್ರ ಟಿ20 ಮಾದರಿಯಲ್ಲಿ ನಡೆದಿತ್ತು. ನಂತರ ಈ ಬಾರಿ ಮತ್ತೆ ಚುಟುಕು ಫಾರ್ಮೆಟ್‌ನಲ್ಲಿ ನಡೆಯಲಿದೆ. ಏಷ್ಯಾಕಪ್ ಇತಿಹಾಸವನ್ನ ಮೆಲುಕು ಹಾಕಿದ್ರೆ, ಕೆಲವು ಪ್ರಮುಖ ಬ್ಯಾಟಿಂಗ್ ದಾಖಲೆಗಳು ಈ ಕೆಳಗಿದೆ.

ಅತಿ ಹೆಚ್ಚು ಶತಕಗಳನ್ನ ಸಿಡಿಸಿದ ಬ್ಯಾಟ್ಸ್‌ಮನ್ಸ್
ವಿರಾಟ್ ಕೊಹ್ಲಿ ಏಷ್ಯಾಕಪ್‌ನಲ್ಲಿ ಭಾರತೀಯರ ಪೈಕಿ ಅತಿ ಹೆಚ್ಚು ಮೂರು ಶತಕಗಳನ್ನು ಗಳಿಸಿದ್ದಾರೆ. ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ವಿರಾಟ್ ಮೂರನೇ ಸ್ಥಾನದಲ್ಲಿದ್ದಾರೆ. ಈ ಟೂರ್ನಿಯಲ್ಲಿ ವಿರಾಟ್ 16 ಪಂದ್ಯಗಳಲ್ಲಿ ಮೂರು ಶತಕ ಸೇರಿದಂತೆ 766 ರನ್ ಗಳಿಸಿದ್ದಾರೆ. ಈ ಟೂರ್ನಿಯಲ್ಲಿ 24 ಪಂದ್ಯಗಳಲ್ಲಿ ನಾಲ್ಕು ಶತಕ ಸಿಡಿಸಿರುವ ಪಾಕಿಸ್ತಾನದ ಶೋಯೆಬ್ ಮಲಿಕ್ ಎರಡನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಸನತ್ ಜಯಸೂರ್ಯ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟರ್ ಆಗಿದ್ದು, 25 ಪಂದ್ಯಗಳಲ್ಲಿ 6 ಶತಕಗಳನ್ನು ಹೊಂದಿದ್ದಾರೆ.

ಎರಡು ಶತಕ ಸಿಡಿಸಿರುವ ಬ್ಯಾಟರ್ಸ್
ಏಷ್ಯಾಕಪ್‌ನಲ್ಲಿ ತಲಾ ಎರಡು ಶತಕ ಸಿಡಿಸಿದ ಕ್ರಿಕೆಟಿಗರ ಪಟ್ಟಿಯಲ್ಲಿ ಭಾರತದ ಮೂವರು ಕ್ರಿಕೆಟಿಗರು ಇದ್ದಾರೆ. ಏಷ್ಯಾಕಪ್‌ನಲ್ಲಿ ಶಿಖರ್ ಧವನ್ 13 ಪಂದ್ಯಗಳಲ್ಲಿ ಎರಡು ಶತಕ, ಸಚಿನ್ ತೆಂಡೂಲ್ಕರ್ 23 ಪಂದ್ಯಗಳಲ್ಲಿ ಮತ್ತು ಸುರೇಶ್ ರೈನಾ ತಲಾ 18 ಪಂದ್ಯಗಳಲ್ಲಿ ಎರಡು ಶತಕ ಸಿಡಿಸಿದ್ದಾರೆ. ಇದಲ್ಲದೆ, ಶ್ರೀಲಂಕಾದ ಲಹಿರು ತಿರಿಮಾನೆ, ಪಾಕಿಸ್ತಾನದ ಯೂನಿಸ್ ಖಾನ್ ಮತ್ತು ಶಾಹಿದ್ ಆಫ್ರಿದಿ ಮತ್ತು ಬಾಂಗ್ಲಾದೇಶದ ಮುಶ್ಫಿಕರ್ ರಹೀಮ್ ತಲಾ ಎರಡು ಶತಕಗಳನ್ನು ಹೊಂದಿದ್ದಾರೆ.
ಚಹಾಲ್ ದಾಂಪತ್ಯದಲ್ಲಿ ಬಿರುಕು ವದಂತಿ: 'ಬಹಳ ದ್ವೇಷಪೂರಿತ' ಎಂದು ಸ್ಪಷ್ಟೀಕರಣ ನೀಡಿದ ಧನಶ್ರೀ ವರ್ಮಾ

ಒಂದು ಶತಕ ಸಿಡಿಸಿದ ಬ್ಯಾಟ್ಸ್‌ಮನ್ಸ್
ಏಷ್ಯಾಕಪ್‌ನಲ್ಲಿ ತಲಾ ಶತಕ ಸಿಡಿಸಿರುವ ಭಾರತೀಯರೆಂದರೆ ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ನವಜೋತ್ ಸಿಂಗ್ ಸಿಧು, ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ. ಇದಲ್ಲದೆ, ಏಷ್ಯಾಕಪ್‌ನಲ್ಲಿ ತಲಾ ಒಂದು ಶತಕ ಸಿಡಿಸಿದವರೆಂದರೆ ಪಾಕಿಸ್ತಾನದ ಮೊಯಿನ್-ಉಲ್-ಅತೀಕ್, ಫವಾದ್ ಆಲಂ, ಇಜಾಜ್ ಅಹ್ಮದ್, ಯಾಸಿರ್ ಹಮೀದ್, ಅಹ್ಮದ್ ಶೆಹಜಾದ್, ನಾಸಿರ್ ಜಮ್ಶೆಡ್, ಮೊಹಮ್ಮದ್ ಯೂಸುಫ್, ಮೊಹಮ್ಮದ್ ಹಫೀಜ್, ಉಮರ್ ಅಕ್ಮಲ್, ಬಾಂಗ್ಲಾದೇಶದ ಅನಮುಲ್ ಹಕ್ , ಲಿಟನ್ ದಾಸ್, ಅಲೋಕ್ ಕಪಾಲಿ, ಮೊಹಮ್ಮದ್ ಅಶ್ರಫುಲ್, ಹಾಂಕಾಂಗ್‌ನ ಬಾಬರ್ ಹಯಾತ್, ಶ್ರೀಲಂಕಾದ ಮರ್ವಾನ್ ಅಟಪಟ್ಟು, ಅರ್ಜುನ್ ರಣತುಂಗಾ ಮತ್ತು ಅಫ್ಘಾನಿಸ್ತಾನದ ಮೊಹಮ್ಮದ್ ಶಹಜಾದ್.
Pakistan vs Netherlands: ಕೊನೆಯ ಹಂತದಲ್ಲಿ ಎಡವಿದ ನೆದರ್ಲೆಂಡ್ಸ್: ಪರದಾಡಿ ಗೆದ್ದ ಪಾಕಿಸ್ತಾನ

ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಬ್ಯಾಟರ್ಸ್
ಶ್ರೀಲಂಕಾದ ಕುಮಾರ ಸಂಗಕ್ಕಾರ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು 12 ಅರ್ಧಶತಕಗಳನ್ನು ಗಳಿಸಿದರು. ಭಾರತದ ಪರ ಸಚಿನ್ ತೆಂಡೂಲ್ಕರ್ ಹಾಗೂ ಶ್ರೀಲಂಕಾದ ಸನತ್ ಜಯಸೂರ್ಯ ತಲಾ 9 ಅರ್ಧಶತಕ ಸಿಡಿಸಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಏಷ್ಯಾಕಪ್‌ನಲ್ಲಿ ಎಂಟು ಅರ್ಧಶತಕಗಳನ್ನು ಗಳಿಸಿದ್ದಾರೆ. ಪರಿಣಾಮವಾಗಿ, ಅವರು ಸಚಿನ್ ಮತ್ತು ಜಯಸೂರ್ಯ ಅವರನ್ನು ಮುಟ್ಟಬಹುದು ಮತ್ತು ಮೀರಿಸಬಹುದು.
ಏಷ್ಯಾಕಪ್‌ನಲ್ಲಿ ಅಟಪಟ್ಟು, ಸಿಧು, ರಣತುಂಗ, ಶೋಯೆಬ್ ಮಲಿಕ್ ಮತ್ತು ಮಹೇಲಾ ಜಯವರ್ಧನೆ ತಲಾ 7 ಅರ್ಧಶತಕಗಳನ್ನು ಬಾರಿಸಿದ್ದರು. ಗೌತಮ್ ಗಂಭೀರ್, ಇಂಜಮಾಮ್ ಉಲ್ ಹಕ್, ತಮೀಮ್ ಇಕ್ಬಾಲ್ ಮತ್ತು ಉಮರ್ ಅಕ್ಮಲ್ ತಲಾ 6 ಅರ್ಧ ಶತಕ ಸಿಡಿಸಿದ್ದಾರೆ. ಸೌರವ್ ಗಂಗೂಲಿ, ಶಿಖರ್ ಧವನ್, ಮಿಸ್ಬಾ-ಉಲ್-ಹಕ್, ಯೂನಿಸ್ ಖಾನ್, ವಿರಾಟ್ ಕೊಹ್ಲಿ ಮತ್ತು ಸುರೇಶ್ ರೈನಾ ಏಷ್ಯಾಕಪ್‌ನಲ್ಲಿ ತಲಾ ಐದು ಅರ್ಧಶತಕಗಳನ್ನು ಗಳಿಸಿದರು.
ಇನ್ನು ನಾಸಿರ್ ಜಮ್ಶೆಡ್, ಮೊಹಮ್ಮದ್ ಅಜರುದ್ದೀನ್, ಮೊಹಮ್ಮದ್ ಹಫೀಜ್, ವೀರೇಂದ್ರ ಸೆಹ್ವಾಗ್, ಚಾಮರ ಕಪುಗೆಡೆರಾ, ಮಹೇಂದ್ರ ಸಿಂಗ್ ಧೋನಿ, ಅರವಿಂದ್ ಡಿ ಸಿಲ್ವಾ ಮತ್ತು ಮುಶ್ಫಿಕರ್ ರಹೀಮ್ ಏಷ್ಯಾಕಪ್‌ನಲ್ಲಿ ತಲಾ ನಾಲ್ಕು ಅರ್ಧಶತಕಗಳನ್ನು ಗಳಿಸಿದ್ದಾರೆ.

ಅತಿ ಹೆಚ್ಚು ಡಕೌಟ್ ಆದ ಪ್ಲೇಯರ್ಸ್
ರೋಹಿತ್ ಶರ್ಮಾ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ಡಕೌಟ್ ಆದ ಭಾರತೀಯ ಕ್ರಿಕೆಟರ್ ಆಗಿದ್ದು 2 ಬಾರಿ ಔಟಾದರು. ಆದರೆ, ಬಾಂಗ್ಲಾದೇಶದ ಮಾಜಿ ನಾಯಕ ಮಶ್ರಫೆ ಮೊರ್ತಜಾ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಔಟಾದ ದಾಖಲೆ ಹೊಂದಿದ್ದಾರೆ. ಬಾಂಗ್ಲಾದೇಶದ ರುಬೆಲ್ ಹೊಸೈನ್ ಮತ್ತು ಅಮಿನುಲ್ ಇಸ್ಲಾಂ, ಪಾಕಿಸ್ತಾನದ ಸಲ್ಮಾನ್ ಬಟ್, ಶಾಹಿದ್ ಅಫ್ರಿದಿ ಮತ್ತು ಶ್ರೀಲಂಕಾದ ಮಹೇಲಾ ಜಯವರ್ಧನೆ ಏಷ್ಯಾಕಪ್‌ನಲ್ಲಿ ಮೂರು ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications