Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asia cup 2022: ಪಾಕಿಸ್ತಾನ vs ಹಾಂಕಾಂಗ್ ಡೂ or ಡೈ ಪಂದ್ಯ, ಸೂಪರ್ 4 ಪ್ರವೇಶಕ್ಕೆ ಇಂದು ಹೋರಾಟ

Pakistan vs Hongkong

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯಲಿರುವ ಪಾಕಿಸ್ತಾನ ಮತ್ತು ಹಾಂಕಾಂಗ್ ನಡುವಿನ ಪಂದ್ಯವು ಅತ್ಯಂತ ಕುತೂಹಲವನ್ನ ಮೂಡಿಸಿದ್ದು, ಗ್ರೂಪ್ ಎ ನಲ್ಲಿ ಭಾರತದ ಬಳಿಕ ಸೂಪರ್‌ 4 ಹಂತಕ್ಕೆ ಯಾರು ಪ್ರವೇಶಿಸಲಿದ್ದಾರೆ ಎಂಬುದು ನಿರ್ಧಾರವಾಗಲಿದೆ.

ಪಾಕಿಸ್ತಾನ ಮತ್ತು ಹಾಂಕಾಂಗ್ ತಂಡಗಳು ಈಗಾಗಲೇ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಸೋಲನ್ನ ಅನುಭವಿಸಿರುವ ಕಾರಣ ಸೂಪರ್ 4 ಹಂತ ಪ್ರವೇಶಿಸಲು ಇಂದು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿವೆ.

ಪಾಕಿಸ್ತಾನ ಭಾರತದ ಎದುರು ನಡೆದ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಸೋಲನ್ನ ಕಾಣುವ ಮೂಲಕ ಮುಖಭಂಗ ಅನುಭವಿಸಿತು. ಇನ್ನು ಹಾಂಕಾಂಗ್ ಟೀಂ ಇಂಡಿಯಾ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಿತಾದ್ರೂ, 193ರನ್‌ಗಳ ಗುರಿಯನ್ನ ಬೆನ್ನತ್ತುವಲ್ಲಿ ವಿಫಲಗೊಂಡಿತು. ಪರಿಣಾಮ ಭಾರತ 40ರನ್‌ಗಳಿಂದ ಪಂದ್ಯ ಗೆದ್ದು ಮುಂದಿನ ಹಂತ ಪ್ರವೇಶಿಸಿದೆ.

ಹಾಂಕಾಂಗ್‌ಗೆ ಹೋಲಿಸಿದ್ರೆ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡವು ಬಲಿಷ್ಟವಾಗಿದೆ. ಈ ಪಂದ್ಯದಲ್ಲಿ ಹಾಂಕಾಂಗ್ ಎದುರು ಪಾಕ್ ಗೆದ್ದಿದ್ದೇ ಆದಲ್ಲಿ ಭಾನುವಾರ(ಸೆ.4) ಭಾರತ-ಪಾಕಿಸ್ತಾನ ಮತ್ತೊಂದು ರೋಚಕ ಕಾದಾಟವನ್ನ ಅಭಿಮಾನಿಗಳು ವೀಕ್ಷಿಸಬಹುದಾಗಿದೆ. ಅದಕ್ಕೂ ಮೊದಲು ಇಂದಿನ ಪಂದ್ಯದಲ್ಲಿ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ ಇಲೆವೆನ್‌ ಅನ್ನು ಈ ಕೆಳಗೆ ತಿಳಿಯಿರಿ.

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ ಇಲೆವೆನ್

ಪಾಕಿಸ್ತಾನ:
ಬಾಬರ್ ಆಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಶಾದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ನಸೀಮ್ ಶಾ/ಮೊಹಮ್ಮದ್ ಹಸ್ನೇನ್, ಹ್ಯಾರಿಸ್ ರೌಫ್, ಶಾನವಾಜ್ ದಹಾನಿ

ಹಾಂಕಾಂಗ್:
ನಿಜಾಕತ್ ಖಾನ್ (ನಾಯಕ), ಯಾಸಿಮ್ ಮುರ್ತಾಜಾ, ಬಾಬರ್ ಹಯಾತ್, ಕಿಂಚಿತ್ ಶಾ, ಐಜಾಜ್ ಖಾನ್, ಜೀಶನ್ ಅಲಿ, ಸ್ಕಾಟ್ ಮೆಕೆಚ್ನಿ (ವಿಕೆಟ್ ಕೀಪರ್), ಹರೂನ್ ಅರ್ಷದ್, ಎಹ್ಸಾನ್ ಖಾನ್, ಮೊಹಮ್ಮದ್ ಗಜನ್ಫರ್, ಆಯುಷ್ ಶುಕ್ಲಾ

Story first published: Friday, September 2, 2022, 9:51 [IST]
Other articles published on Sep 2, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+