India vs Pakistan Asia Cup 2022: ಪಾಕ್ ವಿರುದ್ಧ ಗೆಲುವಿನ ಬಳಿಕ ಜಡೇಜಾ-ಮಂಜ್ರೇಕರ್ ಮುಖಾಮುಖಿ; ನಡೆದಿದ್ದೇನು?

2022ರ ಏಷ್ಯಾ ಕಪ್ ಎ ಗುಂಪಿನ ಹಣಾಹಣಿಯಲ್ಲಿ ಭಾನುವಾರ ನಡೆದ ರೋಚಕವಾಗಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೇವಲ 17 ಎಸೆತಗಳಲ್ಲಿ ಅಜೇಯ 33 ರನ್ ಗಳಿಸಿ ಭಾರತವನ್ನು ಐದು ವಿಕೆಟ್‌ಗಳಿಂದ ಗೆಲ್ಲಲು ನೆರವಾದರು ಮತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದೇ ವೇಳೆ ಮತ್ತೊಬ್ಬ ಅಲ್‌ರೌಂಡರ್ ರವೀಂದ್ರ ಜಡೇಜಾ ಅವರು 29 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 35 ರನ್ ನೀಡಿದ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ. ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಐದನೇ ವಿಕೆಟ್‌ಗೆ 52 ರನ್‌ಗಳ ಜೊತೆಯಾಟವಾಡಿದರು.

ರವೀಂದ್ರ ಜಡೇಜಾ, ಸಂಜಯ್ ಮಂಜ್ರೇಕರ್ ಮಧ್ಯೆ ಶೀತಲ ಸಮರ
ಪಂದ್ಯದ ನಂತರ, ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಪಂದ್ಯದ ನಂತರದ ಸಮಾರಂಭದ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರು ಮತ್ತು ಅವರು ರವೀಂದ್ರ ಜಡೇಜಾರನ್ನು ಸಂದರ್ಶಿಸಬೇಕಾಯಿತು. ಏಕೆಂದರೆ, ಒಂದಲ್ಲ ಒಂದು ಕಾರಣಕ್ಕೆ ಇಬ್ಬರ ನಡುವೆ ಶೀತಲ ಸಮರ ನಡೆಯುತ್ತಲೇ ಇದೆ. ಜಡೇಜಾ ವಿರುದ್ಧ ಸಂಜಯ್ ಮಂಜ್ರೇಕರ್ ಹೇಳಿಕೆ ನೀಡುತ್ತಲೇ ಇರುತ್ತಾರೆ ಮತ್ತು ಅದಕ್ಕೆ ಪ್ರತಿಯಾಗಿ ರವೀಂದ್ರ ಜಡೇಜಾ ಬ್ಯಾಟ್ ಹಾಗೂ ಮಾತಿನ ಟಾಂಗ್ ಕೊಡುತ್ತಾ ಬಂದಿದ್ದಾರೆ.
ಆದರೆ, ಸಂಜಯ್ ಮಂಜ್ರೇಕರ್ ಅವರು ಎಡಗೈ ಬ್ಯಾಟರ್ ರವೀಂದ್ರ ಜಡೇಜಾ ಅವರನ್ನು ನೀವು ನನ್ನೊಂದಿಗೆ ಮಾತನಾಡುವುದು ಸರಿಯೇ? ಎಂದು ಮೊದಲು ಕೇಳಿದರು.

ಜಡ್ಡು ನೀವು ನನ್ನೊಂದಿಗೆ ಮಾತನಾಡಲು ಅಭ್ಯಂತರ ಇದೆಯೇ
2019ರ ವಿಶ್ವಕಪ್‌ನಲ್ಲಿ ಸಂಜಯ್ ಮಂಜ್ರೇಕರ್ ಅವರು ರವೀಂದ್ರ ಜಡೇಜಾರನ್ನು 'ಬಿಟ್ಸ್ ಅಂಡ್ ಪೀಸ್' ಕ್ರಿಕೆಟಿಗ ಎಂದು ಜರೆದಿದ್ದರು ಮತ್ತು ನಂತರ ಜಡೇಜಾ ಪ್ರತಿಯಾಗಿ ಮಾಜಿ ಭಾರತೀಯ ಕ್ರಿಕೆಟಿಗನನ್ನು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಿದರು, "ಇನ್ನೂ ನಾನು ನೀವು ಆಡಿರುವ ಪಂದ್ಯಗಳಿಗಿಂತ ಎರಡು ಪಟ್ಟು ಆಡಿದ್ದೇನೆ ಮತ್ತು ನಾನು ಇನ್ನೂ ಆಡುತ್ತಿದ್ದೇನೆ. ಸಾಧಿಸಿದವರನ್ನು ಗೌರವಿಸಲು ಕಲಿಯಿರಿ. ನಿಮ್ಮ ಮಾತಿನ ಅತಿಸಾರವನ್ನು ನಾನು ಸಾಕಷ್ಟು ಕೇಳಿದ್ದೇನೆ. ಸಂಜಯ್ ಮಾಂಜ್ರೇಕರ್," ಎಂದು ತಿರುಗೇಟು ನೀಡಿದ್ದರು.
ಭಾರತ ಮತ್ತು ಪಾಕಿಸ್ತಾನ ನಡುವಿನ ಆಟದ ಬಗ್ಗೆ ಮಾತನಾಡುತ್ತಾ, ಸಂಜಯ್ ಮಂಜ್ರೇಕರ್ ಅವರು ರವೀಂದ್ರ ಜಡೇಜಾ ಅವರೊಂದಿಗಿನ ಸಂದರ್ಶನವನ್ನು ಪ್ರಾರಂಭಿಸಿದರು. "ನನ್ನೊಂದಿಗೆ ರವೀಂದ್ರ ಜಡೇಜಾ ಅವರನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ, ಮೊದಲ ಪ್ರಶ್ನೆ, ಜಡ್ಡು ನೀವು ನನ್ನೊಂದಿಗೆ ಮಾತನಾಡಲು ಅಭ್ಯಂತರ ಇದೆಯೇ". ಇದಕ್ಕೆ ಉತ್ತರಿಸಿದ ರವೀಂದ್ರ ಜಡೇಜಾ ನಗುತ್ತಲೇ, 'ಹೌದು, ಹೌದು.. ಖಂಡಿತ' ಎಂದರು

ತನ್ನ ಹೊಡೆತಗಳನ್ನು ಆಡಲಿದ್ದೇನೆ ಎಂದು ಹೇಳಿದ ಹಾರ್ದಿಕ್ ಪಾಂಡ್ಯ
ಆಟದ ಬಗ್ಗೆ ಮಾತನಾಡಿದ ರವೀಂದ್ರ ಜಡೇಜಾ, "ನಾವು ಕೊನೆಯವರೆಗೂ ಆಡಲು ಬಯಸಿದ್ದೇವೆ, ಪಾಕಿಸ್ತಾನ ತಂಡ ಉತ್ತಮ ಬೌಲಿಂಗ್ ದಾಳಿಯನ್ನು ಹೊಂದಿದ್ದಾರೆ. ನಾನು ಆಟವನ್ನು ಮುಗಿಸಬಹುದಿತ್ತು, ಆದರೆ ಹಾರ್ದಿಕ್ ಪಾಂಡ್ಯ ಅದ್ಭುತವಾಗಿ ಆಡಿದರು. ಹಾರ್ದಿಕ್ ಪಾಂಡ್ಯ ತನ್ನ ತಲೆಯಲ್ಲಿ ತುಂಬಾ ಸ್ಪಷ್ಟವಾಗಿದ್ದನು ಮತ್ತು ತನ್ನ ಹೊಡೆತಗಳನ್ನು ಆಡಲಿದ್ದೇನೆ ಎಂದು ಹೇಳಿದನು. ಅವನು ಕೊನೆಯವರೆಗೂ ಇದ್ದು ತಂಡ ಗೆಲ್ಲಿಸಿರುವುದು ನನಗೆ ಸಂತೋಷವಾಗಿದೆ," ಎಂದರು.

ಪಾಕಿಸ್ತಾನ ತಂಡ 19.5 ಓವರ್‌ಗಳಲ್ಲಿ 147ಕ್ಕೆ ಆಲೌಟ್
ಮೊದಲು ಬ್ಯಾಟಿಂಗ್ ಮಾಡಿದ ಎದುರಾಳಿ ಪಾಕಿಸ್ತಾನ ತಂಡ 19.5 ಓವರ್‌ಗಳಲ್ಲಿ 147ಕ್ಕೆ ಆಲೌಟ್ ಆಯಿತು. ಅನುಭವಿ ಸೀಮರ್ ಭುವನೇಶ್ವರ್ ಕುಮಾರ್ ಅವರ ನಾಲ್ಕು ಓವರ್‌ಗಳಲ್ಲಿ 4-26 ಅಂಕಿಗಳೊಂದಿಗೆ ಮರಳಿದರು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಂ ಅವರ ಪ್ರಮುಖ ವಿಕೆಟ್ ಪಡೆದು ಪಂದ್ಯದ ದಿಕ್ಕು ಬದಲಿಸಿದರು. ನಂತರ 148 ರನ್‌ಗಳ ಮೊತ್ತ ಬೆನ್ನತ್ತಿದ ಭಾರತ 19.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿ ಗೆಲುವು ಸಾಧಿಸಿದರು.
ಬುಧವಾರ ನಡೆಯಲಿರುವ ಎ ಗುಂಪಿನ ಮುಂದಿನ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ಟೀಂ ಇಂಡಿಯಾ ಸೆಣಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications