Asia Cup 2022: ಈತನೇ ಏಷ್ಯಾ ಕಪ್ ಇತಿಹಾಸದಲ್ಲಿ ಭಾರತದ ಅತ್ಯಂತ ಯಶಸ್ವಿ ಬೌಲರ್

ಭಾರತದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಮಾಜಿ ವೇಗಿ ಇರ್ಫಾನ್ ಪಠಾಣ್ ಅವರನ್ನು ಹಿಂದಿಕ್ಕಿ ಏಷ್ಯಾ ಕಪ್ ಟೂರ್ನಿಯ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
ಸದ್ಯ ನಡೆಯುತ್ತಿರುವ ಏಷ್ಯಾ ಕಪ್ 2022ರಲ್ಲಿ ದುಬೈನಲ್ಲಿ ಹಾಂಕಾಂಗ್ ವಿರುದ್ಧದ ತಮ್ಮ ತಂಡದ ಎ ಗುಂಪಿನ ಪಂದ್ಯದ ಸಮಯದಲ್ಲಿ ರವೀಂದ್ರ ಜಡೇಜಾ ಈ ಸಾಧನೆ ಮಾಡಿದರು. ಒಟ್ಟು 23 ವಿಕೆಟ್ ಪಡೆದು ಏಷ್ಯಾ ಕಪ್‌ನಲ್ಲಿ ಭಾರತದ ಪರ ಅತ್ಯಂತ ಯಶಸ್ವಿ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ರವೀಂದ್ರ ಜಡೇಜಾ ಅವರು 2010ರಲ್ಲಿ ತಮ್ಮ ಮೊದಲ ಏಷ್ಯಾ ಕಪ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದರು, ನಂತರ 2012ರಲ್ಲಿ ಒಂದು ವಿಕೆಟ್ ಮತ್ತು 2014ರ ಟೂರ್ನಿಯ ಆವೃತ್ತಿಯಲ್ಲಿ ಏಳು ವಿಕೆಟ್‌ಗಳನ್ನು ಪಡೆದರು. ನಂತರ 2016ರ ಆವೃತ್ತಿಯ ಪಂದ್ಯಾವಳಿಯಲ್ಲಿ ಜಡೇಜಾ ಮೂರು ವಿಕೆಟ್‌ಗಳನ್ನು ಪಡೆದರು.

2018ರ ಏಷ್ಯಾ ಕಪ್‌ನಲ್ಲಿ ಏಳು ವಿಕೆಟ್‌ಗಳನ್ನು ಪಡೆದ ಜಡೇಜಾ
ನಂತರ 2018ರ ಏಷ್ಯಾ ಕಪ್‌ನಲ್ಲಿ ಏಳು ವಿಕೆಟ್‌ಗಳನ್ನು ಪಡೆದರು. ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್‌ನಲ್ಲಿ ಅವರು ಇದುವರೆಗೆ ಒಂದು ವಿಕೆಟ್ ಪಡೆದಿದ್ದಾರೆ. ಮಾಜಿ ವೇಗಿ ಇರ್ಫಾನ್ ಪಠಾಣ್ ಎಲ್ಲಾ ವಿಕೆಟ್‌ಗಳನ್ನು ಏಕದಿನ ಮಾದರಿಯಲ್ಲಿ ಪಡೆದರೆ, ರವೀಂದ್ರ ಜಡೇಜಾ ಅವರ ವಿಕೆಟ್‌ಗಳು ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಬಂದಿವೆ.
ಏಷ್ಯಾ ಕಪ್ ಇತಿಹಾಸದಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (30), ಲಸಿತ್ ಮಾಲಿಂಗ (29), ಅಜಂತಾ ಮೆಂಡಿಸ್ (26) ಮತ್ತು ಪಾಕಿಸ್ತಾನದ ಸಯೀದ್ ಅಜ್ಮಲ್ (25) ಅತ್ಯಂತ ಯಶಸ್ವಿ ಬೌಲರ್‌ಗಳಾಗಿದ್ದಾರೆ. 2010ರಿಂದ 2022ರವರೆಗೆ ನಡೆದ ಆರು ಏಷ್ಯಾ ಕಪ್ ಟೂರ್ನಿಗಳಲ್ಲಿ ರವೀಂದ್ರ ಜಡೇಜಾ 23 ವಿಕೆಟ್ ಪಡೆದಿದ್ದಾರೆ.

ಅತಿ ಹೆಚ್ಚು ಅರ್ಧ ಶತಕಗಳ ದಾಖಲೆಯನ್ನು ಸರಿಗಟ್ಟಿದ ವಿರಾಟ್ ಕೊಹ್ಲಿ
ಇನ್ನು ಭಾರತ ಮತ್ತು ಹಾಂಕಾಂಗ್ ಪಂದ್ಯದ ವೇಳೆ ಸೂರ್ಯಕುಮಾರ್ ಯಾದವ್ ಅಜೇಯ 68 ರನ್ ಬಾರಿಸಿದರು ಮತ್ತು ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಅರ್ಧ ಶತಕಗಳ ದಾಖಲೆಯನ್ನು ಸರಿಗಟ್ಟಿದರು. 2022ರ ಏಷ್ಯಾ ಕಪ್‌ನ ಎರಡನಡನೇ ಲೀಗ್ ಪಂದ್ಯದಲ್ಲಿ ಭಾರತವು ಬುಧವಾರ ದುರ್ಬಲ ಹಾಂಕಾಂಗ್ ವಿರುದ್ಧ 40 ರನ್‌ಗಳ ಜಯ ಸಾಧಿಸಿತು.
ಕಳೆದ ಭಾನುವಾರ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿದ ನಂತರ, ಈ ವಿಜಯವು ಎ ಗುಂಪಿನಲ್ಲಿ ಮೊದಲ ಸ್ಥಾನ ಗಳಿಸುವ ಮೂಲಕ ಭಾರತ ತಂಡ ಸೂಪರ್ 4 ಹಂತ ತಲುಪಿದೆ.

ಹಾಂಕಾಂಗ್- ಪಾಕಿಸ್ತಾನ ನಡುವಿನ ವಿಜೇತ ತಂಡ ಭಾರತದ ಎದುರಾಳಿ
ಭಾರತದ ಸ್ಫೋಟಕ ಆಟಗಾರ ಸೂರ್ಯಕುಮಾರ್ ಯಾದವ್ ಡೆತ್ ಓವರ್‌ಗಳಲ್ಲಿ ಕೇವಲ 26 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಆರು ಸಿಕ್ಸರ್‌ಗಳನ್ನು ಸಿಡಿಸಿದರೆ, ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ ಮೂರು ಸಿಕ್ಸರ್ ಮತ್ತು ಒಂದು ಬೌಂಡರಿಯೊಂದಿಗೆ ಅಜೇಯ 59 ರನ್ ಗಳಿಸಿ ಭಾರತದ ಬೃಹತ್ 192/2 ಗಳಿಸುವಲ್ಲಿ ನೆರವಾದರು. ಹಾಂಕಾಂಗ್ ತಂಡವು ಬ್ಯಾಟಿಂಗ್ ಪವರ್‌ಪ್ಲೇನಲ್ಲಿ 51-2 ರೊಂದಿಗೆ ಉತ್ತಮ ಸ್ಥಿತಿಯಲ್ಲಿತ್ತು. ಮುಖ್ಯವಾಗಿ ಅಗ್ರ ಸ್ಕೋರರ್ ಬಾಬರ್ ಹಯಾತ್ (41) ಗಳಿಸಿದರು. ಆದರೆ ಭಾರತ ತಂಡ ಕ್ರಿಕೆಟ್ ಶಿಶುವನ್ನು 152/5 ಕಟ್ಟಿಹಾಕಿತು.
ಇನ್ನು ಎ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಹಾಂಕಾಂಗ್ ತಂಡ ಪಾಕಿಸ್ತಾನವನ್ನು ಎದುರಿಸಲಿದ್ದು, ಈ ಪಂದ್ಯದ ವಿಜೇತರು ಭಾನುವಾರ ನಡೆಯಲಿರುವ ಎರಡನೇ ಸೂಪರ್ 4ರಲ್ಲಿ ಭಾರತವನ್ನು ಮತ್ತೊಮ್ಮೆ ಎದುರಲಿದ್ದಾರೆ. ಇದೇ ವೇಳೆ ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧದ ಎರಡೂ ಗುಂಪಿನ ಪಂದ್ಯಗಳನ್ನು ಗೆದ್ದ ನಂತರ ಅಫ್ಘಾನಿಸ್ತಾನವು ಈಗಾಗಲೇ ಬಿ ಗುಂಪಿನಿಂದ ಸೂಪರ್ 4ಗೆ ಅರ್ಹತೆ ಪಡೆದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications