Asia Cup 2022: ಈ ಇಬ್ಬರು ವಿಕೆಟ್ ಕೀಪರ್-ಬ್ಯಾಟರ್‌ಗಳು ಆಡುವ 11ರಲ್ಲಿರುತ್ತಾರೆ; ಕಿರಣ್ ಮೋರೆ

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಸೋಮವಾರ, ಆಗಸ್ಟ್ 8ರಂದು ಏಷ್ಯಾ ಕಪ್ ಟೂರ್ನಿಗೆ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದ್ದು, ಇಬ್ಬರು ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಭಾರತ ತಂಡಕ್ಕೆ ಮರಳಿದ್ದಾರೆ.
ಏಷ್ಯಾ ಕಪ್ 2022 ದುಬೈ ಮತ್ತು ಶಾರ್ಜಾದಲ್ಲಿ ಆಗಸ್ಟ್ 27ರಿಂದ ಸೆಪ್ಟೆಂಬರ್ 11ರವರೆಗೆ ನಡೆಯಲಿದ್ದು, ಇದೇ ವೇಳೆ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಬೆನ್ನುನೋವಿನ ಕಾರಣದಿಂದ ಹೊರಗುಳಿದಿದ್ದರೆ, ಪಕ್ಕೆಲುಬು ನೋವಿನ ಕಾರಣ ಹರ್ಷಲ್ ಪಟೇಲ್ ಭಾರತ ತಂಡದಲ್ಲಿ ಸ್ಥಾನ ಪಡೆದಿಲ್ಲ.
ಆದಾಗ್ಯೂ, ಏಷ್ಯಾದ ಪ್ರಮುಖ ಪಂದ್ಯಾವಳಿಗೆ ಹೋಗುವಾಗ ಪ್ರಸ್ತುತ ಭಾರತೀಯ ಬ್ಯಾಟಿಂಗ್ ಲೈನ್-ಅಪ್‌ನ ಆಯ್ಕೆಯು ಪ್ರಮುಖ ವಿಷಯವಾಗಿದ್ದು, ಪೂರ್ಣ ಸಮಯದ ಬ್ಯಾಟಿಂಗ್ ಸ್ಥಾನಗಳಲ್ಲಿ ಸ್ಟಾರ್ ಆಟಗಾರರು ಕಾಣಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ ಮತ್ತು ಈಗ ತಂಡಕ್ಕೆ ಮರಳುತ್ತಿರುವ ಕೆಎಲ್ ರಾಹುಲ್ ಅವರಂತಹವರ ನಡುವೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಸ್ಪರ್ಧೆ ಏರ್ಪಟ್ಟಿದೆ.

ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಇಬ್ಬರೂ ಆಡುತ್ತಾರೆ
ಇನ್ನು ಭಾರತದ ಮಾಜಿ ಕ್ರಿಕೆಟಿಗ ಕಿರಣ್ ಮೋರೆ ಅವರು ಏಷ್ಯಾ ಕಪ್ ಟೂರ್ನಿಗೆ ಭಾರತ ತಂಡದ ಆಯ್ಕೆಯ ವಿಷಯವನ್ನು ತೆಗೆದುಕೊಂಡಿದ್ದು, "ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರು ಆರಂಭಿಕ ಇಲೆವೆನ್‌ನಲ್ಲಿ ಆಡಲು ಸಾಧ್ಯವಾಗಿರದಿದ್ದರೆ ತಂಡದಲ್ಲಿ ಆಯ್ಕೆ ಮಾಡಲು ಚಿಂತಿಸುತ್ತಿರಲಿಲ್ಲ," ಎಂದು ಹೇಳಿದರು.
"ನನ್ನ ಆಡುವ 11ರ ಬಳಗದಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್‌ಗಳಾದ ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಇಬ್ಬರೂ ಆಡುತ್ತಾರೆ. ದಿನೇಶ್ ಕಾರ್ತಿಕ್ ಬೆಂಚ್ ಕಾಯಿಸುವ ಆಲೋಚನೆಯಾಗಿದ್ದರೆ, ನಾನು ಅವರನ್ನು ಪ್ರವಾಸಕ್ಕೆ ಕರೆದೊಯ್ಯುವುದಿಲ್ಲ. ಅವರು ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ, ಅವರಿಗೆ ಸ್ಪೆಷಲಿಸ್ಟ್ ಫಿನಿಶರ್‌ನ ಪಾತ್ರವನ್ನು ನೀಡಲಾಗಿದೆ," ಎಂದು ಕಿರಣ್ ಮೋರೆ ತಿಳಿಸಿದರು.
"ರಿಷಭ್ ಪಂತ್ ಆ ಪಾತ್ರದಲ್ಲಿ ಹೆಚ್ಚು ರನ್ ಮಾಡಿಲ್ಲ ಮತ್ತು ಅವರು ಸ್ವಲ್ಪ ಕಷ್ಟಪಟ್ಟಿದ್ದಾರೆ. ಆದರೆ ಅವರು ಸೂಪರ್ ಆಟಗಾರ ಮತ್ತು ನಾನು ಖಂಡಿತವಾಗಿಯೂ ಅವರನ್ನು ನನ್ನ ತಂಡದಲ್ಲಿ ಆಡಿಸುತ್ತೇನೆ. ನಾನು ಬಹುಶಃ ದೀಪಕ್ ಹೂಡಾ ಅವರನ್ನು ತಂಡದಿಂದ ಹೊರಗಿಟ್ಟು ಈ ಇಬ್ಬರಿಗೆ ಅವಕಾಶ ನೀಡುತ್ತೇನೆ. ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ದಿನೇಶ್ ಕಾರ್ತಿಕ್ ಮತ್ತು ರವೀಂದ್ರ ಜಡೇಜಾ ಮಧ್ಯಮ ಕ್ರಮಾಂಕದಲ್ಲಿರುತ್ತಾರೆ," ಎಂದರು.

ಆಗಸ್ಟ್ 28 ರಂದು ಭಾರತ ಮತ್ತು ಪಾಕಿಸ್ತಾನ ಪಂದ್ಯ
ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರಮುಖ ಘರ್ಷಣೆ ಆಗಸ್ಟ್ 28 ರಂದು (ಭಾನುವಾರ) ನಡೆಯಲಿದೆ. ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ 2022ರಲ್ಲಿ ಆಶಾದಾಯಕವಾಗಿ ಮುನ್ನಡೆಯಲು ಎರಡು ತಂಡಗಳು ಸಾಮರ್ಥ್ಯ ಪ್ರದರ್ಶಿಸಲಿವೆ. ಭಾರತ-ಪಾಕಿಸ್ತಾನ ಪಂದ್ಯವನ್ನಾಡುವ ಮೊದಲು ಅನೇಕ ಅಭಿಮಾನಿಗಳು ಎರಡು ತಂಡಗಳು ಹೇಗಿರಲಿವೆ ಎನ್ನುವ ಕುತೂಹಲ ಮನೆಮಾಡಿದೆ. ಭಾರತ ಮತ್ತು ಪಾಕಿಸ್ತಾನದ ಪಂದ್ಯವನ್ನು ಈ ಎರಡು ದೇಶಗಳ ಕ್ರೀಡಾಭಿಮಾನಿಗಳು ಮಾತ್ರವಲ್ಲದೇ ವಿಶ್ವದಾದ್ಯಂತ ಕಾತರತೆ ಮೂಡಿಸಿದೆ.
ಭಾರತ ಮತ್ತು ಪಾಕಿಸ್ತಾನ ತಂಡಗಳು ಸೂಪರ್ 4 ಘರ್ಷಣೆಯಲ್ಲಿ ಎ ಗುಂಪಿನಲ್ಲಿ ನಂ. 1 ಮತ್ತು 2 ಸ್ಥಾನಗಳನ್ನು ಗಳಿಸಿದರೆ, ಸೆಪ್ಟೆಂಬರ್ 4ರಂದು ಮತ್ತೆ ಹಣಾಹಣಿ ನೋಡಬಹುದು. ನಂತರ ಮತ್ತೆ ಉಭಯ ತಂಡಗಳು ಫೈನಲ್‌ಗೆ ಬಂದರೆ ಸೆಪ್ಟೆಂಬರ್ 11ರಂದು ಮತ್ತೆ ಮುಖಾಮುಖಿಯಾಗಲಿವೆ.

ಏಷ್ಯಾ ಕಪ್ 2022ಗೆ ಭಾರತದ ಪೂರ್ಣ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಬ್ಯಾಕ್ ಅಪ್: ಶ್ರೇಯಸ್ ಅಯ್ಯರ್, ದೀಪಕ್ ಚಾಹರ್, ಅಕ್ಷರ್ ಪಟೇಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications