For Quick Alerts
ALLOW NOTIFICATIONS  
For Daily Alerts
 

DK, ಪಂತ್ ಮಧ್ಯೆ ಕಣಕ್ಕಿಳಿಯುವವರು ಯಾರು?: ಭಿನ್ನ ಅಭಿಪ್ರಾಯ ನೀಡಿದ ಉತ್ತಪ್ಪ, ಪೂಜಾರ!

Asia cup 2022: Robin Uthappa choose Dinesh Karthik ahead of Rishabh Pant in Indias T20 setup

ಏಷ್ಯಾ ಕಪ್‌ನ ಸೂಪರ್ 4 ಹಂತದಲ್ಲಿ ಪಾಕಿಸ್ತಾನದ ವಿರುದ್ಧ ಸೋಲು ಅನುಭವಿಸಿದ ಭಾರತ ತಂಡದ ಕಾಂಬಿನೇಶನ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ. ಅದರಲ್ಲೂ ವಿಕೆಟ್ ಕೀಪರ್ ಬ್ಯಾಟರ್ ವಿಚಾರವಾಗಿ ತಂಡದ ಮ್ಯಾನೇಜ್‌ಮೆಂಟ್‌ಗೂ ಸಾಕಷ್ಟು ಗೊಂದಲಗಳು ಇರುವುದು ಸ್ಪಷ್ಟವಾಗಿದೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್‌ ಅವರನ್ನು ತಂಡದಿಂದ ಹೊರಗಿಟ್ಟು ರಿಷಭ್ ಪಂತ್‌ಗೆ ಅವಕಾಶ ನೀಡಿದಾಗಲೇ ಸಾಕಷ್ಟು ಚರ್ಚೆಗಳು ನಡೆಯಿತು. ಆದರೆ ಪಂತ್ ಪಾಕ್ ವಿರುದ್ಧ ನೀಡಿದ ಪ್ರದರ್ಶನ ಸಾಕಷ್ಟು ಟೀಕೆಗೆ ಗುರಿಯಾಗಿದೆ.

ಈ ಸಂದರ್ಭದಲ್ಲಿ ಹಿರಿಯ ಆಟಗಾರ ರಾಬಿನ್ ಉತ್ತಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಹಾಗೂ ರಿಷಭ್ ಪಂತ್ ಮಧ್ಯೆ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ತನ್ನ ಪ್ರಕಾರ ಯಾರು ಉತ್ತಮ ಆಯ್ಕೆ ಎಂದು ವಿವರಿಸಿದ್ದಾರೆ. ಇದಕ್ಕೆ ಕಾರಣವನ್ನು ಕೂಡ ನೀಡಿದ್ದಾರೆ ಕನ್ನಡಿಗ ರಾಬಿನ್ ಉತ್ತಪ್ಪ. ಇದೇ ಸಂದರ್ಭದಲ್ಲಿ ಹಿರಿಯ ಕ್ರಿಕೆಟಿಗ ಚೇತೇಶ್ವರ್ ಪೂಜಾರ ಕೂಡ ಪ್ರತಿಕ್ರಿಯೆ ನೀಡಿದ್ದು ಭಿನ್ನ ಹೇಳಿಕೆ ನೀಡಿದ್ದಾರೆ.

ಪದೇ ಪದೆ ಬದಲಾವಣೆ ಬೇಡ ಎಂದ ಉತ್ತಪ್ಪ

ಪದೇ ಪದೆ ಬದಲಾವಣೆ ಬೇಡ ಎಂದ ಉತ್ತಪ್ಪ

ಇಎಸ್‌ಪಿಎನ್ ಕ್ರಿಕ್ ಇನ್ಫೋದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಚರ್ಚೆಯ ವಿಚಾರವಾಗಿ ಮಾತನಾಡಿದ ಚೇತೇಶ್ವರ್ ಪೂಜಾರ "ರಿಷಭ್ ಪಂತ್‌ಗೆ ಬೆಭಲವಾಗಿ ನಿಲ್ಲಬೇಕು ಎಂದು ಯೋಚಿಸಿದ್ದರೆ ನನ್ನ ಪ್ರಕಾರ ಅವರತು ಪಂತ್‌ಗೆ ಅವಕಾಶ ನೀಡುವುದನ್ನು ಮುಂದುವರಿಸಬೇಕು. ಪ್ರತಿ ಪಂದ್ಯಕ್ಕೂ ನೀವು ತಂಡದಲ್ಲಿ ಬದಲಾವಣೆ ಮಾಡುವುದು ಸಾಧ್ಯವಿಲ್ಲ. ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ನೀಡಬೇಕು ಎಂಬುದಾಗಿದ್ದರೆ ಪಾಕಿಸ್ತಾನದ ವಿರುದ್ಧವೇ ಆವಕಾಶ ನೀಡಬೇಕಾಗಿತ್ತು. ಹಾಗಾಗಿ ರಿಷಭ್ ಪಂತ್‌ಗೇ ಮುಂದಿನ ಪಂದ್ಯದಲ್ಲಿಯೂ ಅವಕಾಶ ದೊರೆಯಲಿದೆ ಎಂದು ಭಾವಿಸುತ್ತೇನೆ" ಎಂದಿದ್ದಾರೆ ಚೇತೇಶ್ವರ್ ಪೂಜಾರ.

DK ಬೆಸ್ಟ್ ಎಂದ ರಾಬಿನ್ ಉತ್ತಪ್ಪ

DK ಬೆಸ್ಟ್ ಎಂದ ರಾಬಿನ್ ಉತ್ತಪ್ಪ

ಇನ್ನು ಇದೇ ವಿಚಾರವಾಗಿ ಮಾತನಾಡಿದ ರಾಬಿನ್ ಉತ್ತಪ್ಪ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರಾಬಿನ್ ಉತ್ತಪ್ಪ ತಮ್ಮ ಪ್ರಕಾರ ಭಾರತ ತಂಡ ವಿಕೆಟ್ ಕೀಪರ್ ಬ್ಯಾಟರ್ ಆಗಿ ರಿಷಭ್ ಪಂತ್ ಅವರ ಬದಲಿಗೆ ದಿನೇಶ್ ಕಾರ್ತಿಕ್ ಅವರನ್ನು ಆಡಿಸಬೇಕು ಎಂದಿದ್ದಾರೆ. ದಿನೇಶ್ ಕಾರ್ತಿಕ್ ಫಿನಿಷರ್ ಆಗಿ ಕರ್ತವ್ಯವನ್ನು ನಿಭಾಯಿಸುವ ಕಾರಣ ಅವರ ಅಗತ್ಯ ತಂಡಕ್ಕೆ ಹೆಚ್ಚಿನ ಪ್ರಮಾಣದಲ್ಲಿದೆ ಎಂದಿದ್ದಾರೆ ಉತ್ತಪ್ಪ. ರಿಷಬ್ ಪಂತ್ ಅಗ್ರ ನಾಲ್ಕರ ಕ್ರಮಾಂಕದಲ್ಲಿ ಕಣಕ್ಕಿಳಿದರೆ ಮಾತ್ರವೇ ಯಶಸ್ಸು ಸಾಧಿಸುತ್ತಾರೆ ಎಂದಿದ್ದಾರೆ ರಾಬಿನ್ ಉತ್ತಪ್ಪ.

ಮೊದಲ ನಾಲ್ಕು ಕ್ರಮಾಂಕದಲ್ಲಿ ಅವಕಾಶವಿದ್ದರೆ ಮಾತ್ರ ಪಂತ್‌ಗೆ ಸ್ಥಾನ ನೀಡಿ

ಮೊದಲ ನಾಲ್ಕು ಕ್ರಮಾಂಕದಲ್ಲಿ ಅವಕಾಶವಿದ್ದರೆ ಮಾತ್ರ ಪಂತ್‌ಗೆ ಸ್ಥಾನ ನೀಡಿ

"ನನ್ನ ಪ್ರಕಾರ ದಿನೇಶ್ ಕಾರ್ತಿಕ್ ಫಿನಿಷರ್ ಆಗಿ ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳಬೇಕು. ಆ ಸ್ಥಾನವನ್ನು ಅವರಿಗೇ ನೀಡಬೇಕು. ರಿಷಬ್ ಪಂತ್ ಟಿ20 ಮಾದರಿಯಲ್ಲಿ ಅಗ್ರ ನಾಲ್ಕರ ಕ್ರಮಾಂಕದಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿದ್ದಾರೆ. ಅದನ್ನು ಪರಿಗಣಿಸಬೇಕು. ಆದರೆ ಸದ್ಯ ಅಗ್ರ ನಾಲ್ಕರ ಸ್ಥಾನವನ್ನು ಸ್ಥಳಾವಕಾಶವಿಲ್ಲ. ಪಂತ್ ತಮ್ಮ ಪ್ರದರ್ಶನದಲ್ಲಿ ಪ್ರಗತಿ ಸಾಧಿಸಬೇಕು ಎಂದು ನಾವೂ ಬಯಸುತ್ತೇವೆ. ಆದರೆ ಅವರಿಗೆ ಸೂಕ್ತವಾದ ಕ್ರಮಾಂಕವನ್ನು ನೀಡಬೇಕು. ಆತನಿಗೆ ಹಿನ್ನಡೆಯಾಗುವ ಕ್ರಮಾಂಕದಲ್ಲಿ ಅವಕಾಶ ನೀಡುವುದು ಸೂಕ್ತವಲ್ಲ" ಎಂದಿದ್ದಾರೆ ರಾಬಿನ್ ಉತ್ತಪ್ಪ.

ಮುಂದುವರಿದು ಮಾತನಾಡಿದ ರಾಬಿನ್ ಉತ್ತಪ್ಪ, "ರಿಷಬ್ ಪಂತ್ ಆಡಲೇಬೇಕು ಎಂದಿದ್ದರೆ ಅವರಿಗೆ ನಾಲ್ಕನೇ ಕ್ರಮಾಂಕದಲ್ಲಿ ಅವಕಾಶ ನೀಡಿ. ಈ ಸಂದರ್ಭದಲ್ಲಿ ಅವರು ಅಗ್ರ ನಾಲ್ಕರಲ್ಲಿ ಅವಕಾಶ ಪಡೆಯಲು ಸಾಧ್ಯವಿದೆಯೇ? ಇಲ್ಲ. ಹಾಗಾಗಿ ನಾನು ಕೆಳಗಿನ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಅವರನ್ನೇ ಆಡಿಸಲು ಬಯಸುತ್ತೇನೆ" ಎಂದಿದ್ದಾರೆ.

ಕುತೂಹಲ ಮೂಡಿಸಿದೆ ಲಂಕಾ ವಿರುದ್ಧದ ಸ್ಕ್ವಾಡ್

ಕುತೂಹಲ ಮೂಡಿಸಿದೆ ಲಂಕಾ ವಿರುದ್ಧದ ಸ್ಕ್ವಾಡ್

ಇನ್ನು ಮಂಗಳವಾರ ಭಾರತ ಶ್ರೀಲಂಕಾ ತಂಡದ ವಿರುದ್ಧ ಸೂಪರ್ 4 ಹಂತದ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಪಾಕಿಸ್ತಾನದ ವಿರುದ್ಧ ಸೋಲು ಅನುಭವಿಸಿರುವ ಭಾರತ ಹಿನ್ನಡೆಯಲ್ಲಿದ್ದು ಈ ಪಂದ್ಯವನ್ನು ಗೆಲ್ಲುವ ಒತ್ತಡದಲ್ಲಿದೆ. ಸಾಮರ್ಥ್ಯದಲ್ಲಿ ಶ್ರೀಲಂಕಾ ಪಡೆಗಿಂತ ಸಾಕಷ್ಟು ಬಲಿಷ್ಠವಾಗಿ ಕಾಣಿಸುವ ಭಾರತ ತಂಡಕ್ಕೆ ಬೌಲಿಂಗ್ ಪ್ರದರ್ಶನ ತಲೆನೋವು ತಂದಿಟ್ಟಿದೆ. ಇನ್ನು ಈ ಪಂದ್ಯದಲ್ಲಿ ಭಾರತದ ಆಡುವ ಬಳಗದಲ್ಲಿ ಯಾವೆಲ್ಲಾ ಬದಲಾವಣೆ ಮಾಡಬಹುದು ಎಂಬುದು ಕುತೂಹಲ ಮೂಡಿಸಿದೆ.
ಭಾರತ ಸಂಪೂರ್ಣ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯ್, ಯುಜುವೇಂದ್ರ ಚಾಹಲ್, ಅರ್ಷ್‌ದೀಪ್ ಸಿಂಗ್, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್ , ಆವೇಶ್ ಖಾನ್

Story first published: Tuesday, September 6, 2022, 14:15 [IST]
Other articles published on Sep 6, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+