
ಏಷ್ಯಾಕಪ್‌ಗಾಗಿ ಆರು ತಂಡಗಳ ಮೆಗಾ ಸ್ಪರ್ಧೆ
ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆಯುವ ಈ ಸರಣಿಯಲ್ಲಿ ಒಟ್ಟು 6 ತಂಡಗಳು ಸ್ಪರ್ಧಿಸಲಿವೆ. ಪ್ರತಿ ಗುಂಪಿಗೆ 3 ತಂಡಗಳಂತೆ 2 ಗುಂಪುಗಳಲ್ಲಿ ಪಂದ್ಯಾವಳಿ ನಡೆಯಲಿದೆ. ಇದರಲ್ಲಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳು ಎ ಕೆಟಗರಿಯಲ್ಲಿ ಸೇರ್ಪಡೆಗೊಂಡಿವೆ.
ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಪಾಕಿಸ್ತಾನ 10 ವಿಕೆಟ್‌ಗಳಿಂದ ಸೋಲಿಸಿತ್ತು. ಇದಾದ ಬಳಿಕ ಸೇಡು ತೀರಿಸಿಕೊಂಡು ಪಾಕಿಸ್ತಾನವನ್ನ ಸೋಲಿಸುವುದರ ಜೊತೆಗೆ ಟ್ರೋಫಿ ಗೆಲ್ಲುವ ಗುರಿಯೊಂದಿಗೆ ಭಾರತ ಏಷ್ಯಾಕಪ್ ಪ್ರವೇಶಿಸಲಿದೆ.
ಅಭಿಮಾನಿಗಳನ್ನ ಚಿಯರ್ ಅಪ್ ಮಾಡಲು ಪ್ರೊಮೊ ಬಿಡುಗಡೆ
ಈ ಸರಣಿಗಾಗಿ ಅಭಿಮಾನಿಗಳಲ್ಲಿ ಆತ್ಮವಿಶ್ವಾಸ ತುಂಬಲು ಬಿಸಿಸಿಐ ಹೊಸ ವಿಡಿಯೋ ಬಿಡುಗಡೆ ಮಾಡಿದೆ. ನಾವು 7 ಬಾರಿ ಏಷ್ಯಾ ಕಪ್ ಗೆದ್ದಿದ್ದೇವೆ. ನಾವು ನಂ.1 ತಂಡವಾಗಿ ಭಾರತಕ್ಕೆ ಬರುತ್ತಿದ್ದೇವೆ. ನಾವು ಹಲವಾರು ಸಾಧನೆಗಳನ್ನು ಮಾಡಿದ್ದೇವೆ. ಆದರೆ 140 ಕೋಟಿ ಜನರು ಇಂಡಿಯಾ.. ಇಂಡಿಯಾ.. ಎಂದು ಕೂಗು ಹಾಕುತ್ತಿರುವುದು ದೊಡ್ಡ ವಿಷಯ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಆದ್ದರಿಂದ ಈ ವೈಭವವನ್ನ ಪ್ರಪಂಚದಾದ್ಯಂತ ಸಾಗಿಸಬೇಕು. ಅದಕ್ಕಾಗಿ ಮೊದಲು ಏಷ್ಯಾಕಪ್ ಗೆಲ್ಲಬೇಕು. ನಾವು ಗೆಲ್ಲುತ್ತೇವೆ ಎಂದು ರೋಹಿತ್ ಶರ್ಮಾ ಹೆಮ್ಮೆಯಿಂದ ಹೇಳಿದ್ದಾರೆ. ಈ ವಿಡಿಯೋ ಇಂಟರ್ನೆಟ್‌ನಲ್ಲಿ ವೇಗವಾಗಿ ವೈರಲ್ ಆಗಿದೆ.
ಈ ಟೂರ್ನಿಯ ಗ್ರೂಪ್ ಹಂತದಲ್ಲಿ ಆಗಸ್ಟ್ 28ರಂದು ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಹಿಂದಿನ ಎರಡು ಟೂರ್ನಮೆಂಟ್ 2016ರಲ್ಲಿ ಟಿ20 ಫಾರ್ಮೆಟ್ ಹಾಗೂ 2018ರಲ್ಲಿ ಏಕದಿನ ಫಾರ್ಮೆಟ್‌ನಲ್ಲಿ ನಡೆದ ಏಷ್ಯಾಕಪ್ ಅನ್ನು ಭಾರತ ತಂಡ ಗೆದ್ದಿತ್ತು. ಈ ಟೂರ್ನಿಯಲ್ಲಿ ಯಶಸ್ವಿ ತಂಡವೂ ಟೀಂ ಇಂಡಿಯಾವೇ ಎಂಬುದು ಗಮನಾರ್ಹ.
1984 ರಿಂದ ಈ ಪಂದ್ಯಾವಳಿಯನ್ನು ಆಯೋಜಿಸುತ್ತಿರುವಾಗ, ಇದುವರೆಗೆ ಭಾರತ ತಂಡ ಏಳು ಬಾರಿ ಟ್ರೋಫಿ ಗೆದ್ದಿದೆ. ಶ್ರೀಲಂಕಾ ಐದು ಬಾರಿ ಗೆದ್ದರೆ, ಪಾಕಿಸ್ತಾನ ಎರಡು ಬಾರಿ ಮಾತ್ರ ಗೆದ್ದಿದೆ. ಈ ಬಾರಿ ಯಾರು ಗೆಲ್ಲುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಏಷ್ಯಾಕಪ್ 2022ರ ವೇಳಾಪಟ್ಟಿ
ಏಷ್ಯಾಕಪ್ 2022: ದಿನಾಂಕ, ಮುಖಾಮುಖಿ, ಆತಿಥ್ಯ ಸ್ಥಳ
27 ಆಗಸ್ಟ್: ಶ್ರೀಲಂಕಾ ವರ್ಸಸ್ ಅಫ್ಘಾನಿಸ್ತಾನ (ದುಬೈ)
28 ಆಗಸ್ಟ್: ಭಾರತ ವರ್ಸಸ್ ಪಾಕಿಸ್ತಾನ (ದುಬೈ)
30 ಆಗಸ್ಟ್: ಬಾಂಗ್ಲಾದೇಶ ವರ್ಸಸ್ ಅಫ್ಘಾನಿಸ್ತಾನ (ದುಬೈ)
31 ಆಗಸ್ಟ್: ಭಾರತ ವರ್ಸಸ್ ಕ್ವಾಲಿಫೈಯರ್ (ದುಬೈ)
1 ಸೆಪ್ಟೆಂಬರ್: ಶ್ರೀಲಂಕಾ ವರ್ಸಸ್ ಬಾಂಗ್ಲಾದೇಶ (ದುಬೈ)
2 ಸೆಪ್ಟೆಂಬರ್: ಪಾಕಿಸ್ತಾನ ವರ್ಸಸ್ ಕ್ವಾಲಿಫೈಯರ್ (ಶಾರ್ಜಾ)
3 ಸೆಪ್ಟೆಂಬರ್: B1 vs B2 (ಶಾರ್ಜಾ)
4 ಸೆಪ್ಟೆಂಬರ್: A1 vs A2 (ದುಬೈ)
6 ಸೆಪ್ಟೆಂಬರ್: A1 vs B1 (ದುಬೈ)
7 ಸೆಪ್ಟೆಂಬರ್: A2 vs B2 (ದುಬೈ)
8 ಸೆಪ್ಟೆಂಬರ್: A1 vs B2 (ದುಬೈ)
9 ಸೆಪ್ಟೆಂಬರ್: B1 vs A2 (ದುಬೈ)
11 ಸೆಪ್ಟೆಂಬರ್: ಫೈನಲ್ (ದುಬೈ)


Click it and Unblock the Notifications
