ಏಷ್ಯಾ ಕಪ್: ಟಿ20ಯಲ್ಲಿ ಅಬ್ಬರಿಸಿದ್ರೂ ಭಾರತದ ಈ ಕ್ರಿಕೆಟಿಗ ಆಡುವ ಬಳಗದಲ್ಲಿ ಬೇಡ ಎಂದ ಮಾಜಿ ಕ್ರಿಕೆಟಿಗ

ಭಾನುವಾರ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಭಾರತ ಈ ಭಾರಿಯ ಏಷ್ಯಾ ಕಪ್ ಟೂರ್ನಿಯ ಅಭಿಯಾನವನ್ನು ಆರಂಭಿಸಲು ಸಜ್ಜಾಗಿದೆ. ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿರುವ ಭಾರತ ತಂಡ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವೆನಿಸಿಕೊಂಡಿದೆ. ಇನ್ನು ಈ ಬಾರಿ ಭಾರತ ತಂಡದ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲು ಸಾಕಷ್ಟು ಪೈಪೋಟಿ ಎದುರಾಗಿದೆ. ಚುಟುಕು ಕ್ರಿಕೆಟ್‌ಗೆ ಹೇಳಿ ಮಾಡಿಸಿದಂತಿರುವ ಆಟಗಾರ ಪಡೆಯೇ ಇದ್ದು ಇದರಲ್ಲಿ ಆಡುವ ಬಳಗದಲ್ಲಿ ಯಾವೆಲ್ಲಾ ಆಟಗಾರರು ಕಾಣಿಸಿಕೊಳ್ಳಬಹುದು? ಯಾರಿಗೆ ಬೆಂಚ್ ಕಾಯಬೇಕಾಗಬಹುದು ಎಂಬುದು ಕುತೂಹಲ ಮೂಡಿಸಿದೆ.
ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಸಬಾ ಕರೀಮ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಾರಿಯ ಏಷ್ಯಾ ಕಪ್‌ನಲ್ಲಿ ಕಣಕ್ಕಿಳಿಯಬೇಕಾದ ಭಾರತದ ಆಡುವ ಬಳಗವನ್ನು ಸಬಾ ಕರೀಮ್ ಹೆಸರಿಸಿದ್ದಾರೆ. ಈ ತಂಡದಲ್ಲಿ ಇತ್ತೀಚಿನ ದಿನಗಳಲ್ಲಿ ಚುಟುಕು ಮಾದರಿಯಲ್ಲಿ ಅಮೋಘ ಪ್ರದರ್ಶನ ನೀಡಿ ಮಿಂಚುಹರಿಸಿದ ಒಬ್ಬ ಆಟಗಾರನ್ನು ಹೊರಗಿಟ್ಟು ಸಬಾ ಕರೀಮ್ ಅಚ್ಚರಿ ಮೂಡಿಸಿದ್ದಾರೆ. ಯಾರು ಆ ಆಟಗಾರ? ಯಾವ ಕಾರಣಕ್ಕಾಗಿ ಸಬಾ ಕರೀಮ್ ಈ ಮಾತು ಹೇಳಿದ್ದಾರೆ? ಮುಂದೆ ಓದಿ..

ಬಹುತೇಕ ಸ್ಥಾನಗಳು ಖಚಿತ
ಈ ಬಾರಿಯ ಏಷ್ಯಾ ಕಪ್‌ನಲ್ಲಿ ಕಣಕ್ಕಿಳಿಯುವ ಭಾರತದ ಆಡುವ ಬಳಗದಲ್ಲಿ ಬಹುತೇಕ ಸ್ಥಾನಗಳು ಈಗಾಗಲೇ ಖಚಿತವಾಗಿದೆ. ವಿರಾಟ್ ಕೊಹ್ಲಿ ಕೆಎಲ್ ರಾಹುಲ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದು ರೋಹಿತ್ ಶರ್ಮಾ ಜೊತೆಗೆ ಅಗ್ರ ಮೂರು ತಂಡಗಳನ್ನು ಖಚಿತಪಡಿಸಿಕೊಂಡಿದ್ದಾರೆ. ಇನ್ನು ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಕೂಡ ಕೂಡ ಕಣಕ್ಕಿಳಿಯುವುದು ಸ್ಪಷ್ಟವಾಗಿದ್ದು ಮಧ್ಯಮ ಕ್ರಮಾಂಕದಲ್ಲಿ ಒಂದು ಸ್ಥಾನ ಮಾತ್ರವೇ ಉಳಿದುಕೊಂಡಿದೆ.

ಡಿಕೆ ಪಂತ್ ಮಧ್ಯೆ ಒಬ್ಬರಿಗೆ ಮಾತ್ರ ಸ್ಥಾನ?
ಇದೀಗ ಬ್ಯಾಟಿಂಗ್ ವಿಭಾಗದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಒಂದು ಸ್ಥಾನ ಮಾತ್ರವೇ ಉಳಿದುಕೊಂಡಿದ್ದು ರಿಷಭ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ಇಬ್ಬರಲ್ಲಿ ಒಬ್ಬರಿಗೆ ಮಾತ್ರವೇ ಅವಕಾಶ ನೀಡಲಾಗುತ್ತದೆಯಾ ಎಂಬುದು ಕುತೂಹಲ ಮೂಡಿಸಿದೆ. ಈ ವಿಚಾರವಾಗಿ ಸಬಾ ಕರೀಮ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ದಿನೇಶ್ ಕಾರ್ತಿಕ್ ಬದಲಾಗಿ ರಿಷಬ್ ಪಂತ್ ಅವರನ್ನು ಕಣಕ್ಕಿಳಿಸಲು ಬಯಸುವುದಾಗಿ ಹೇಳಿದ್ದಾರೆ. ಯುವ ಆಟಗಾರನ ಮೇಲೆ ಭರವಸೆ ವ್ಯಕ್ತಪಡಿಸಿರುವ ಸಬಾ ಕರೀಮ್ ಏಷ್ಯಾ ಕಪ್ ಟೂರ್ನಿಯಲ್ಲಿ ಮಿಂಚುಹರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಬಾ ಕರೀಮ್ ಹೆಸರಿಸಿದ ಭಾರತದ ಪ್ಲೇಯಿಂಗ್ XI
ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ರವೀಂದ್ರ ಜಡೇಜಾ, ಯುಜ್ವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್.

ಭಾರತದ ಸಂಪೂರ್ಣ ಸ್ಕ್ವಾಡ್
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್,
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications