
ಆಗಸ್ಟ್ 27ರಿಂದ ಏಷ್ಯಾ ಕಪ್ ಟೂರ್ನಿ ಆರಂಭ
ನಾಲ್ಕು ವರ್ಷಗಳಿಂದ ಕಾಯುತ್ತಿದ್ದ ಏಷ್ಯಾ ಕಪ್ 2022 ಟೂರ್ನಿ ಬಹುತೇಕ ಸನಿಹಗೊಂಡಿದೆ. ಈ ಮೆಗಾ ಟೂರ್ನಮೆಂಟ್ ಆಗಸ್ಟ್ 27 ರಿಂದ ಯುಎಇನಲ್ಲಿ ಆರಂಭವಾಗಲಿದೆ. ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್ ಟೂರ್ನಿಯನ್ನು ಲಂಕಾ ಆಯೋಜಿಸಲು ವಿಫಲಗೊಂಡ ಕಾರಣ ಮೆಗಾ ಟೂರ್ನಿಗೆ ಯುಎಇಗೆ ಶಿಫ್ಟ್ ಆಗಿದೆ.
ಒಟ್ಟು 6 ತಂಡಗಳು ಭಾಗವಹಿಸಲಿರುವ ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಈಗಾಗಲೇ ಅರ್ಹತೆ ಪಡೆದಿದ್ದು, ಆರನೇ ಸ್ಥಾನಕ್ಕಾಗಿ ಅರ್ಹತಾ ಸುತ್ತಿನಲ್ಲಿ ಹಾಂಕಾಂಗ್, ಸಿಂಗಾಪುರ, ಕುವೈತ್ ಮತ್ತು ಯುಎಇ ತಂಡಗಳು ಪೈಪೋಟಿ ನಡೆಸಲಿವೆ. ಪೂರ್ವ ನಿಗದಿತ ವೇಳಾಪಟ್ಟಿಯಂತೆ, ಈ ಪಂದ್ಯಾವಳಿಯನ್ನು ಶ್ರೀಲಂಕಾದಲ್ಲಿ ನಡೆಸಬೇಕಾಗಿತ್ತು ಆದರೆ ಅಲ್ಲಿನ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಯಿಂದಾಗಿ, ಅದನ್ನು ಮರುಭೂಮಿ ದೇಶವಾದ ಯುಎಇಗೆ ಸ್ಥಳಾಂತರಿಸಲಾಯಿತು.

ಟಿ20 ಫಾರ್ಮೆಟ್‌ನಲ್ಲಿ ನಡೆಯಲಿರುವ ಏಷ್ಯಾದ ಬೃಹತ್ ಟೂರ್ನಿ
ಈ ಬಾರಿಯ ಏಷ್ಯಾಕಪ್ ಟೂರ್ನಿ ಟಿ20 ಫಾರ್ಮೆಟ್‌ನಲ್ಲಿ ನಡೆಯುತ್ತಿದೆ. ಇದಕ್ಕೆ ಕಾರಣ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಆಗಿದೆ. ವಿಶ್ವಕಪ್ ಸಮೀಪ ಇರುವುದರಿಂದ ಚುಟುಕು ಫಾರ್ಮೆಟ್‌ನಲ್ಲಿ ಟೂರ್ನಿ ನಡೆಯಲಿದೆ.
ಈ ಹಿಂದಿನ ಎರಡು ಟೂರ್ನಮೆಂಟ್ 2016ರಲ್ಲಿ ಟಿ20 ಫಾರ್ಮೆಟ್ ಹಾಗೂ 2018ರಲ್ಲಿ ಏಕದಿನ ಫಾರ್ಮೆಟ್‌ನಲ್ಲಿ ನಡೆದ ಏಷ್ಯಾಕಪ್ ಅನ್ನು ಭಾರತ ತಂಡ ಗೆದ್ದಿತ್ತು. ಈ ಟೂರ್ನಿಯಲ್ಲಿ ಯಶಸ್ವಿ ತಂಡವೂ ಟೀಂ ಇಂಡಿಯಾವೇ ಎಂಬುದು ಗಮನಾರ್ಹ.

ಮೊದಲ ಪಂದ್ಯವನ್ನಾಡಲಿರುವ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ
ಆಗಸ್ಟ್ 27ರಂದು ಮೊದಲ ಪಂದ್ಯದಲ್ಲಿ ಗ್ರೂಪ್ ಬಿ ತಂಡಗಳಾದ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡವು ಮುಖಾಮುಖಿಯಾಗಲಿದ್ದು, ದುಬೈ ಉದ್ಘಾಟನಾ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಉಭಯ ತಂಡಗಳು ಹೆಚ್ಚು ಯುವ ಆಟಗಾರರನ್ನ ಹೊಂದಿದ್ದು, ಗೆಲುವಿನ ಶುಭಾರಂಭ ಮಾಡುವ ಯೋಜನೆ ಹೊಂದಿವೆ.ಸ
ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ಅಖಾಡಕ್ಕಿಳಿಯುತ್ತಿದ್ದು, ಗ್ರೂಪ್ ಎನಲ್ಲಿ ಉಭಯ ತಂಡಗಳು ಕಾದಾಟ ನಡೆಸಲಿವೆ. ಭಾನುವಾರ ನಡೆಯಲಿರುವ ಈ ಪಂದ್ಯವನ್ನ ನೋಡಲು ಇಡೀ ಕ್ರಿಕೆಟ್ ಅಭಿಮಾನಿಗಳು ಕಾತುರಾಗಿದ್ದಾರೆ.
ಸೂಪರ್ 4 ಮತ್ತು ಫೈನಲ್ ಜೊತೆಗೆ ಸಂಪೂರ್ಣ ವೇಳಾಪಟ್ಟಿ
ಲೀಗ್ ಹಂತದಲ್ಲಿ ತಲಾ ಎರಡು ಪಂದ್ಯಗಳನ್ನ ಆಡಲಿರುವ ಪ್ರತಿ ತಂಡಗಳು ಕ್ವಾಲಿಫೈ ಆಗಿ ನಂತರದಲ್ಲಿ ಸೂಪರ್ 4 ಆಟದಲ್ಲಿ ಭಾಗಿಯಾಗಲಿದೆ. ಇದಾದ ಬಳಿಕ ಸೆಪ್ಟೆಂಬರ್ 11ರಂದು ದುಬೈನಲ್ಲಿಯೇ ಫೈನಲ್ ಪಂದ್ಯ ಆಡಲಿವೆ. ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಆರಂಭಗೊಳ್ಳಲಿದ್ದು, ಅಭಿಮಾನಿಗಳಿಗೆ ಪಂದ್ಯ ವೀಕ್ಷಿಸಲು ಅನುಕೂಲವಾಗಿದೆ.
ಫೈನಲ್ ಸೇರಿದಂತೆ ಒಟ್ಟು 13 ಪಂದ್ಯಗಳಿಗೆ ದುಬೈ ಸಾಕ್ಷಿಯಾಗಲಿದ್ದು, ವೇಳಾಪಟ್ಟಿ ಈ ಕೆಳಗಿದೆ.
ಏಷ್ಯಾಕಪ್ 2022: ದಿನಾಂಕ, ಮುಖಾಮುಖಿ, ಆತಿಥ್ಯ ಸ್ಥಳ
27 ಆಗಸ್ಟ್: ಶ್ರೀಲಂಕಾ ವರ್ಸಸ್ ಅಫ್ಘಾನಿಸ್ತಾನ (ದುಬೈ)
28 ಆಗಸ್ಟ್: ಭಾರತ ವರ್ಸಸ್ ಪಾಕಿಸ್ತಾನ (ದುಬೈ)
30 ಆಗಸ್ಟ್: ಬಾಂಗ್ಲಾದೇಶ ವರ್ಸಸ್ ಅಫ್ಘಾನಿಸ್ತಾನ (ದುಬೈ)
31 ಆಗಸ್ಟ್: ಭಾರತ ವರ್ಸಸ್ ಕ್ವಾಲಿಫೈಯರ್ (ದುಬೈ)
1 ಸೆಪ್ಟೆಂಬರ್: ಶ್ರೀಲಂಕಾ ವರ್ಸಸ್ ಬಾಂಗ್ಲಾದೇಶ (ದುಬೈ)
2 ಸೆಪ್ಟೆಂಬರ್: ಪಾಕಿಸ್ತಾನ ವರ್ಸಸ್ ಕ್ವಾಲಿಫೈಯರ್ (ಶಾರ್ಜಾ)
3 ಸೆಪ್ಟೆಂಬರ್: B1 vs B2 (ಶಾರ್ಜಾ)
4 ಸೆಪ್ಟೆಂಬರ್: A1 vs A2 (ದುಬೈ)
6 ಸೆಪ್ಟೆಂಬರ್: A1 vs B1 (ದುಬೈ)
7 ಸೆಪ್ಟೆಂಬರ್: A2 vs B2 (ದುಬೈ)
8 ಸೆಪ್ಟೆಂಬರ್: A1 vs B2 (ದುಬೈ)
9 ಸೆಪ್ಟೆಂಬರ್: B1 vs A2 (ದುಬೈ)
11 ಸೆಪ್ಟೆಂಬರ್: ಫೈನಲ್ (ದುಬೈ)
ಅಕ್ಟೋಬರ್ ನವೆಂಬರ್ ಅವಧಿಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಏಷ್ಯಾಕಪ್ ನಡೆಯುತ್ತಿರುವುದರಿಂದ ಇದೊಂದು ಮಿನಿ ವಿಶ್ವಕಪ್ ಎಂಬಂತೆ ಬಿಂಬಿತವಾಗಿದೆ.


Click it and Unblock the Notifications
