Asia Cup 2022: ಅಫ್ಘಾನ್ ವಿರುದ್ಧ ಸೂಪರ್ 4ನಲ್ಲಿ ಗೆದ್ದು ಸೇಡು ತೀರಿಸಿಕೊಂಡ ಶ್ರೀಲಂಕಾ!

ಇಂದು ( ಸೆಪ್ಟೆಂಬರ್ 3 ) ಶಾರ್ಜಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಬಾರಿಯ ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಚೊಚ್ಚಲ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಶ್ರೀಲಂಕಾ 4 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿದೆ. ಹೀಗೆ ಈ ಗೆಲುವಿನ ಮೂಲಕ ಶ್ರೀಲಂಕಾ ಅಫ್ಘಾನಿಸ್ತಾನದ ವಿರುದ್ಧದ ಗ್ರೂಪ್ ಹಂತದ ಪಂದ್ಯದಲ್ಲಿ ಹೀನಾಯವಾಗಿ ಸೋತು ಮುಖಭಂಗ ಅನುಭವಿಸಿದ್ದರ ಪ್ರತೀಕಾರ ತೀರಿಸಿಕೊಂಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಶ್ರೀಲಂಕಾ ತಂಡದ ನಾಯಕ ದಾಸನ್ ಶನಕ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಅಫ್ಘಾನಿಸ್ತಾನವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ ರಹ್ಮನುಲ್ಲ ಗುರ್ಬಜ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿ ಶ್ರೀಲಂಕಾ ತಂಡಕ್ಕೆ ಗೆಲ್ಲಲು 176 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು. ಇತ್ತ ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡ 19.1 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 179 ರನ್ ಕಲೆ ಹಾಕಿ 4 ವಿಕೆಟ್‍ಗಳ ಜಯ ಸಾಧಿಸಿದೆ.

ಅಫ್ಘಾನಿಸ್ತಾನ ಇನ್ನಿಂಗ್ಸ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಆಫ್ಘಾನಿಸ್ತಾನ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಹಜರತುಲ್ಲಾ ಝಝೈ 13 ರನ್ ಕಲೆಹಾಕಿ ಔಟಾದರೆ ಮತ್ತೋರ್ವ ಆರಂಭಿಕ ಆಟಗಾರ ರಹ್ಮನುಲ್ಲ ಗುರ್ಬಜ್ 45 ಎಸೆತಗಳಲ್ಲಿ 4 ಫೋರ್ ಮತ್ತು 6 ಸಿಕ್ಸರ್ ಸಹಿತ 84 ರನ್ ಚಚ್ಚಿದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಬ್ರಾಹಿಂ ಜದ್ರಾನ್ 40 ರನ್ ಗಳಿಸಿದರೆ, ನಜಿಬುಲ್ಲಾ ಜದ್ರಾನ್ 17, ನಾಯಕ ಮೊಹಮ್ಮದ್ ನಬಿ 1, ರಶೀದ್ ಖಾನ್ 9 ರನ್ ಕಲೆ ಹಾಕಿದರು ಹಾಗೂ ಕರೀಮ್ ಜಾನತ್ ಯಾವುದೇ ರನ್ ಗಳಿಸದೆ ಅಜೇಯರಾಗಿ ಉಳಿದರು.
ಶ್ರೀಲಂಕಾ ತಂಡದ ಪರ ದಿಲ್ಶಾನ್ ಮದುಶಂಕ 2 ವಿಕೆಟ್ ಪಡೆದರೆ ಮಹೀಶ್ ತೀಕ್ಷ್ಣಣ ಹಾಗೂ ಅಸಿತಾ ಫರ್ನಾಂಡೊ ತಲಾ ಒಂದೊಂದು ವಿಕೆಟ್ ಪಡೆದರು.

ಶ್ರೀಲಂಕಾ ಇನ್ನಿಂಗ್ಸ್
ಅಫ್ಘಾನಿಸ್ತಾನ ನೀಡಿದ್ದ ಸವಾಲಿನ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಪತುಮ್ ನಿಸ್ಸಾಂಕ ಮತ್ತು ಕುಸಾಲ್ ಮೆಂಡಿಸ್ 62 ರನ್‌ಗಳ ಜತೆಯಾಟವನ್ನಾಡುವ ಮೂಲಕ ಉತ್ತಮ ಆರಂಭವನ್ನು ಕಟ್ಟಿಕೊಟ್ಟರು. ಪತುಮ್ ನಿಸ್ಸಾಂಕ 35 ರನ್ ಗಳಿಸಿದರೆ, ಕುಸಾಲ್ ಮೆಂಡಿಸ್ 36 ರನ್ ಕಲೆಹಾಕಿದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಚರಿತ್ ಅಸಲಂಕ 8 ರನ್ ಗಳಿಸಿದರೆ, ಧನುಷ್ಕ ಗುಣತಿಲಕ 33 ರನ್ ಗಳಿಸಿ ಉತ್ತಮ ಆಟವನ್ನಾಡಿದರು, ನಾಯಕ ದಸುನ್ ಶನಕ 10 ರನ್ ಗಳಿಸಿ ಔಟ್ ಆದರು. ಭಾನುಕಾ ರಾಜಪಕ್ಸೆ 14 ಎಸೆತಗಳಲ್ಲಿ 31 ರನ್ ಚಚ್ಚಿದರು, ವನಿಂದು ಹಸರಂಗ ಅಜೇಯ 16 ರನ್ ಹಾಗೂ ಚಾಮಿಕಾ ಕರುಣರತ್ನೆ ಅಜೇಯ 5 ರನ್ ಕಲೆಹಾಕಿದರು.
ಅಫ್ಘಾನಿಸ್ತಾನದ ಪರ ಮುಜೀಬ್ ಉರ್ ರಹಮಾನ್ ಹಾಗೂ ನವೀನ್ ಉಲ್ ಹಕ್ ತಲಾ ಎರಡು ವಿಕೆಟ್ ಪಡೆದರು ಹಾಗೂ ರಶೀದ್ ಖಾನ್ ಮತ್ತು ನಾಯಕ ಮೊಹಮ್ಮದ್ ನಬಿ ತಲಾ ಒಂದೊಂದು ವಿಕೆಟ್ ಕಬಳಿಸಿದರು.

ಆಡುವ ಬಳಗ
ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನ, ಮಹೇಶ್ ತೀಕ್ಷಣ, ಅಸಿತ ಫೆರ್ನಾಂಡೋ, ದಿಲ್ಶನ್ ಮಧುಶಂಕ
ಬೆಂಚ್: ದಿನೇಶ್ ಬಂಡಂವ ಡಿ, ಧನನರ ಜೆಫ್ ಡಿ ಪ್ರವೀಣ್ ಜಯವಿಕ್ರಮ, ನುವಾನಿಡು ಫೆರ್ನಾಂಡೋ, ಪ್ರಮೋದ್ ಮದುಶನ್, ಮತೀಶ ಪತಿರಣ, ನುವಾನ್ ತುಷಾರ
ಅಫ್ಘಾನಿಸ್ತಾನ ಆಡುವ ಬಳಗ: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ನಜೀಬುಲ್ಲಾ ಝದ್ರಾನ್, ಕರೀಂ ಜನತ್, ಸಮೀವುಲ್ಲಾ ಶಿನ್ವಾರಿ, ರಶೀದ್ ಖಾನ್, ನವೀನ್-ಉಲ್-ಹಕ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಖಿ, ಫಝಲ್ಹಕ್ ಫಾರೂಖಿ,
ಬೆಂಚ್: ಹಶ್ಮತಲ್ಲಾ ಶಾಹಿದಿ, ಅಫ್ಸಿರ್ ಜಾಝಾ, ಫರೀದ್ ಅಹ್ಮದ್ ಮಲಿಕ್, ಒತ್ಮಾನ್ ಘನಿ, ನೂರ್ ಅಹ್ಮದ್, ಅಜ್ಮತುಲ್ಲಾ ಮಿರ್ಜಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications