Asia Cup 2022: ಅಫ್ಘಾನ್ ದಾಳಿಗೆ ತತ್ತರಿಸಿದ ಶ್ರೀಲಂಕಾ; ಅಫ್ಘಾನಿಸ್ತಾನಕ್ಕೆ ಸುಲಭ ಗುರಿ

ಇಂದಿನಿಂದ ( ಆಗಸ್ಟ್ 27 ) ಬಹುನಿರೀಕ್ಷಿತ ಹದಿನೈದನೆಯ ಆವೃತ್ತಿಯ ಏಷ್ಯಾಕಪ್ ಟೂರ್ನಿ ಆರಂಭಗೊಂಡಿದ್ದು, ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಥಮ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ತಂಡದ ನಾಯಕ ಮೊಹಮ್ಮದ್ ನಬಿ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಶ್ರೀಲಂಕಾ ತಂಡದ ಆಟಗಾರರನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಆಫ್ಘಾನಿಸ್ತಾನ ಬೌಲರ್‌ಗಳ ದಾಳಿಗೆ ಸರಿಯಾದ ಉತ್ತರ ನೀಡಲಾಗದೇ ಹೀನಾಯ ಬ್ಯಾಟಿಂಗ್ ಪ್ರದರ್ಶಿಸಿದೆ.
ಶ್ರೀಲಂಕಾದ ಪರ ಭಾನುಕಾ ರಾಜಪಕ್ಸೆ ಮತ್ತು ಚಾಮಿಕ ಕರುಣಾರತ್ನೆ ಹೊರತುಪಡಿಸಿ ಉಳಿದ ಯಾವುದೇ ಬ್ಯಾಟ್ಸ್‌ಮನ್ ಕೂಡ ಇಪ್ಪತ್ತು ರನ್ ಗಡಿದಾಟುವಲ್ಲಿ ಯಶಸ್ವಿಯಾಗಲಿಲ್ಲ. ಹೀಗಾಗಿ ಅಫ್ಘಾನಿಸ್ತಾನದ ಬೌಲಿಂಗ್ ಎದುರು ಮಂಕಾದ ಶ್ರೀಲಂಕಾ 19.4 ಓವರ್‌ಗಳಲ್ಲಿ 105 ರನ್‌ಗಳಿಗೆ ಆಲ್ ಔಟ್ ಆಗಿದೆ. ಈ ಮೂಲಕ ಅಫ್ಘಾನಿಸ್ತಾನ ತಂಡಕ್ಕೆ ಗೆಲ್ಲಲು 106 ರನ್‌ಗಳ ಸುಲಭ ಗುರಿಯನ್ನು ನೀಡಿದೆ.
ಶ್ರೀಲಂಕಾ ಇನ್ನಿಂಗ್ಸ್:
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಫಾಜಲ್ ಹಕ್ ಫಾರೂಕಿ ಎಸೆದ ಮೊದಲ ಓವರ್‌ನಲ್ಲೇ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಮೊದಲ ಓವರ್‌ನ ಐದನೇ ಎಸೆತದಲ್ಲಿ ಕುಸಲ್ ಮೆಂಡಿಸ್ 2 ರನ್ ಕಲೆಹಾಕಿ ಔಟ್ ಆದರೆ, ಆರನೇ ಎಸೆತದಲ್ಲಿ ಚರಿತ ಅಸಲಂಕಾ ಗೋಲ್ಡನ್ ಡಕೌಟ್ ಆದರು. ಇನ್ನುಳಿದಂತೆ ಆರಂಭಿಕ ಆಟಗಾರ ಪಾತುಮ್ ನಿಸ್ಸಾಂಕ 3, ಧನುಷ್ಕಾ ಗುಣತಿಲಕ 17, ಭಾನುಕ ರಾಜಪಕ್ಸೆ 38, ವನಿಂದು ಹಸರಂಗ 2, ನಾಯಕ ದಾಸುನ್ ಶನಕ ಗೋಲ್ಡನ್ ಡಕ್ ಔಟ್, ಚಾಮಿಕ ಕರುಣಾರತ್ನೆ 31, ಮಹೀಶ್ ತೀಕ್ಷಣ ಡೈಮಂಡ್ ಡಕ್ ಔಟ್, ಮತೀಶ ಪತಿರಾಣಾ 5 ರನ್ ಮತ್ತು ದಿಲ್ಶಾನ್ ಮಧುಶಂಕ ಅಜೇಯ 1 ರನ್ ಕಲೆಹಾಕಿದರು.
ಹೀಗೆ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ಅಫ್ಘಾನಿಸ್ತಾನದ ಬೌಲಿಂಗ್ ವಿರುದ್ಧ ಸರಿಯಾಗಿ ಪ್ರದರ್ಶನ ನೀಡಲಾಗದೆ ಮಂಕಾದರು.
ಅಫ್ಘಾನಿಸ್ತಾನದ ಪರ ಫಜಲ್ ಹಕ್ ಫರೂಕಿ 3 ವಿಕೆಟ್ ಪಡೆದರೆ, ನಾಯಕ ಮೊಹಮ್ಮದ್ ನಬಿ ಹಾಗೂ ಮುಜೀಬ್ ಉರ್ ರೆಹಮಾನ್ ತಲಾ ಎರಡೆರಡು ವಿಕೆಟ್ ಪಡೆದರು ಮತ್ತು ಇನ್ನುಳಿದಂತೆ ನವೀನ್ ಉಲ್ ಹಕ್ 1 ವಿಕೆಟ್ ಕಬಳಿಸಿದರು.
ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಪಂದ್ಯದ ಆಡುವ ಬಳಗ
ಶ್ರೀಲಂಕಾ ಆಡುವ ಬಳಗ: ದನುಷ್ಕ ಗುಣತಿಲಕ, ಪಾತುಂ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕ, ಭಾನುಕ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನ, ಮಹೇಶ್ ತೀಕ್ಷಣ, ದಿಲ್ಶನ್ ಮಧುಶಂಕ, ಮಥೀಶ ಪತಿರಾನಾ
ಬೆಂಚ್: ಧನಂಜಯ ಡಿ ಸಿಲ್ವಾಂದರ್, ಡಿ ಸಿಲ್ವಾಂದರ್, ಡಿ ಸಿಲ್ವಾಂದರ್, ಡಿ. ಅಶೇನ್ ಬಂಡಾರ, ಪ್ರವೀಣ್ ಜಯವಿಕ್ರಮ, ನುವಾನಿಡು ಫೆರ್ನಾಂಡೋ, ಪ್ರಮೋದ್ ಮದುಶನ್, ನುವಾನ್ ತುಷಾರ
ಅಫ್ಘಾನಿಸ್ತಾನ ಆಡುವ ಬಳಗ: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (wk), ಇಬ್ರಾಹಿಂ ಝದ್ರಾನ್, ಕರೀಮ್ ಜನತ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (c), ರಶೀದ್ ಖಾನ್, ಅಜ್ಮತುಲ್ಲಾ ಒಮರ್ಝೈ, ನವೀನ್-ಉಲ್-ಹಕ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಖಿ
ಬೆಂಚ್ : ನೊಹ್ಮದ್, ಶಿಹ್ಮದ್ ನೊಹ್ಮದ್, ಶಿಹ್ಮತ್ವಾ, ಅಫ್ಸರ್ ಝಜೈ, ಫರೀದ್ ಅಹ್ಮದ್ ಮಲಿಕ್, ಉಸ್ಮಾನ್ ಘನಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications