Asia Cup 2022: ಶ್ರೀಲಂಕಾ vs ಅಫ್ಘಾನಿಸ್ತಾನ ಸೂಪರ್ 4: ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ತಂಡಗಳು

ಶನಿವಾರ (ಸೆಪ್ಟೆಂಬರ್ 2) ಶಾರ್ಜಾದಲ್ಲಿ ನಡೆಯಲಿರುವ ಏಷ್ಯಾ ಕಪ್ 2022ರ ಸೂಪರ್ 4ರ ಮೊದಲ ಹಣಾಹಣಿಯಲ್ಲಿ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಪರಸ್ಪರ ಮುಖಾಮುಖಿಯಾಗುತ್ತಿದ್ದು, ವಾರಾಂತ್ಯದಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗಲಿದೆ.
ಈ ಎರಡು ತಂಡಗಳು ಕೊನೆಯ ಬಾರಿಗೆ ಏಷ್ಯಾ ಕಪ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಿದ್ದವು ಮತ್ತು ಆ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಶ್ರೀಲಂಕಾವನ್ನು ಸೋಲಿಸಿತ್ತು. ಅಫ್ಘಾನ್ ಬೌಲರ್‌ಗಳು ಶ್ರೀಲಂಕಾವನ್ನು 20 ಓವರ್‌ಗಳಲ್ಲಿ ಕೇವಲ 105 ರನ್‌ಗಳಿಗೆ ಕಟ್ಟಿಹಾಕಿದರು ಮತ್ತು ಫಜಲ್‌ಹಕ್ ಫಾರೂಕಿ 3 ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್‌ಟೇಕರ್ ಆಗಿ ಮಿಂಚಿದ್ದರು.
ಶಾರ್ಜಾದಲ್ಲಿ ಶನಿವಾರ ರಾತ್ರಿ ಹಿಂದಿನ ಪಂದ್ಯದಂತೆ ಇತಿಹಾಸ ಮರುಕಳಿಸದಂತೆ ದಾಸುನ್ ಶನಕ ನಾಯಕತ್ವದ ಶ್ರೀಲಂಕಾ ತಂಡವು ಆಶಿಸುತ್ತಿದೆ. ರೋಚಕ ಪೈಪೋಟಿಯಲ್ಲಿ ಬಾಂಗ್ಲಾದೇಶದ ವಿರುದ್ಧದ ಅಮೋಘ ಗೆಲುವಿನ ಹಿನ್ನೆಲೆಯಲ್ಲಿ ಶ್ರೀಲಂಕಾ ತಂಡ ಗೆಲುವಿನ ಉತ್ಸಾಹದಲ್ಲಿ ಬರುತ್ತಿದ್ದಾರೆ.

ಅಫ್ಘಾನಿಸ್ತಾನವು ವಿಶ್ವದ ಅತ್ಯುತ್ತಮ ಟಿ20 ತಂಡಗಳಲ್ಲಿ ಒಂದು
ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ದಾಸುನ್ ಶನಕ, ಚಾಮಿಕಾ ಕರುಣರತ್ನೆ, ಕುಸಾಲ್ ಮೆಂಡಿಸ್ ಶ್ರೀಲಂಕಾದ ಪ್ರಮುಖ ಆಟಗಾರರಾಗಿದ್ದಾರೆ. ಅಫ್ಘಾನಿಸ್ತಾನದ ಪರವಾಗಿ ನಾಯಕ ಮೊಹಮ್ಮದ್ ನಬಿ ಅವರು ತಮ್ಮ ಅನುಭವಿ ಟಿ20 ಬೌಲರ್ ರಶೀದ್ ಖಾನ್ ಮತ್ತು ಸೂಪರ್ 4 ಘರ್ಷಣೆಯಲ್ಲಿ ಆರಂಭಿಕರಾದ ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ ಅವರೊಂದಿಗೆ ಶ್ರೀಲಂಕಾಗೆ ಮತ್ತೊಮ್ಮೆ ಸೋಲಿನ ರುಚಿ ತೋರಿಸಲು ಕಾಯುತ್ತಿದ್ದಾರೆ.
ಅಫ್ಘಾನಿಸ್ತಾನವು ವಿಶ್ವದ ಅತ್ಯುತ್ತಮ ಟಿ20 ತಂಡಗಳಲ್ಲಿ ಒಂದಾಗಿದೆ. ಆದರೆ, ಈ ಹಿಂದೆ ಅವರ ಸೋಲಿಗೆ ಅವರ ಬ್ಯಾಟಿಂಗ್ ಕಾರಣವಾಗಿತ್ತು. ಈ ಟೂರ್ನಿಯಲ್ಲಿ ಅಫ್ಘಾನಿಸ್ತಾನದವರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದು, ಆಲ್‌ರೌಂಡ್ ಪ್ರದರ್ಶನ ತೋರಿದರೆ ಶ್ರೀಲಂಕಾ ತಂಡವನ್ನು ಸೋಲಿಸಲು ಸಾಧ್ಯವಾಗುತ್ತದೆ.

ಶ್ರೀಲಂಕಾ vs ಅಫ್ಘಾನಿಸ್ತಾನ ಫ್ಯಾಂಟಸಿ ಡ್ರೀಮ್ ಟೀಂ
ವಿಕೆಟ್ ಕೀಪರ್‌ಗಳು: ಕುಶಾಲ್ ಮೆಂಡಿಸ್, ರಹಮಾನುಲ್ಲಾ ಗುರ್ಬಾಜ್
ಬ್ಯಾಟ್ಸ್‌ಮನ್‌ಗಳು: ಭಾನುಕಾ ರಾಜಪಕ್ಸೆ, ಇಬ್ರಾಹಿಂ ಝದ್ರಾನ್, ನಜಿಬುಲ್ಲಾ ಝದ್ರಾನ್
ಆಲ್‌ರೌಂಡರ್ಸ್: ಮೊಹಮ್ಮದ್ ನಬಿ, ವನಿಂದು ಹಸರಂಗ, ಚಾಮಿಕಾ ಕರುಣಾರತ್ನೆ
ಬೌಲರ್‌ಗಳು: ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ಮಹೀಶ್ ತೀಕ್ಷಣ
ನಾಯಕ: ವನಿಂದು ಹಸರಂಗ
ಉಪನಾಯಕ: ಮುಜೀಬ್ ಉರ್ ರೆಹಮಾನ್

ಶ್ರೀಲಂಕಾ vs ಅಫ್ಘಾನಿಸ್ತಾನ ತಂಡಗಳ ಸಂಭಾವ್ಯ ಆಡುವ 11ರ ಬಳಗ
ಶ್ರೀಲಂಕಾ ತಂಡ: ದನುಷ್ಕ ಗುಣತಿಲಕ, ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕ, ಭಾನುಕ ರಾಜಪಕ್ಸೆ, ದಸುನ್ ಶನಕ (ನಾಯಕ), ಚಮಿಕಾ ಕರುಣಾರತ್ನೆ, ವನಿಂದು ಹಸರಂಗ, ಮಹೀಶ್ ತೀಕ್ಷಣ, ಅಸಿತ ಫೆರ್ನಾಂಡೊ, ದಿಲ್ಶನ್ ಮಧುಶಾಂಕ
ಅಫ್ಘಾನಿಸ್ತಾನ ತಂಡ: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ಕರೀಂ ಜನತ್, ರಶೀದ್ ಖಾನ್, ಅಜ್ಮತುಲ್ಲಾ ಒಮರ್ಝೈ, ನವೀನ್-ಉಲ್-ಹಕ್, ಫ್ಜೀಬಝಾಲ್ ರಹಕ್.

ಭಾನುವಾರದಂದು ಭಾರತ vs ಪಾಕಿಸ್ತಾನ ಹಣಾಹಣಿ
ಇನ್ನು ಹಾಂಗ್‌ಕಾಂಗ್ ಅನ್ನು 155 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದ ನಂತರ ಪಾಕಿಸ್ತಾನ ತಂಡವು ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಏಷ್ಯಾ ಕಪ್ 2022ರ ಸೂಪರ್ 4ಗೆ ಅರ್ಹತೆ ಪಡೆದಿದ್ದು, ಭಾನುವಾರ ನಡೆಯಲಿರುವ ಮತ್ತೊಂದು ಮಹಾ ಘರ್ಷಣೆಗೆ ಕ್ರೀಡಾಲೋಕ ಸಾಕ್ಷಿಯಾಗಲಿದೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ (ಸೆಪ್ಟೆಂಬರ್ 4) ನಡೆಯಲಿರುವ ಸೂಪರ್ 4ರ ಮೊದಲ ಹಣಾಹಣಿಯಲ್ಲಿ ಅವರು ಇದೀಗ ಮತ್ತೊಮ್ಮೆ ಭಾರತವನ್ನು ಎದುರಿಸಲಿದ್ದಾರೆ ಮತ್ತು ಬಹು ನಿರೀಕ್ಷಿತ ಘರ್ಷಣೆಯಲ್ಲಿ ತಮ್ಮ ನೆಚ್ಚಿನ ತಂಡಗಳನ್ನು ವೀಕ್ಷಿಸುವ ಸಂತೋಷವು ಅಭಿಮಾನಿಗಳಿಗೆ ಮರಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications