Asia Cup 2022 Super 4 : ಪೂರ್ಣ ವೇಳಾಪಟ್ಟಿ, ಟಿವಿ ಸಮಯ; ಸೆ. 4ರಂದು ಭಾರತ vs ಪಾಕಿಸ್ತಾನ?

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಅಫ್ಘಾನಿಸ್ತಾನದ ನಂತರ ಏಷ್ಯಾ ಕಪ್ 2022ರ ಸೂಪರ್ 4 ಹಂತದಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಿದ ಎರಡನೇ ತಂಡವಾಗಿದೆ. ಭಾರತವು ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಐದು ವಿಕೆಟ್‌ಗಳ ಜಯವನ್ನು ಸಾಧಿಸಿದ ನಂತರ, ಎರಡನೇ ಪಂದ್ಯದಲ್ಲಿ ಹಾಂಗ್‌ಕಾಂಗ್ ಅನ್ನು 40 ರನ್‌ಗಳಿಂದ ಸೋಲಿಸಿತು. ಈ ಮೂಲಕ ಅಜೇಯ ದಾಖಲೆಯೊಂದಿಗೆ ಸೂಪರ್ 4 ಪ್ರವೇಶಿಸಿತು.
ಗುರುವಾರ (ಸೆಪ್ಟೆಂಬರ್ 1) ನಡೆಯಲಿರುವ ಶ್ರೀಲಂಕಾ vs ಬಾಂಗ್ಲಾದೇಶ ಪಂದ್ಯವು ಬಿ ಗುಂಪಿನಿಂದ ಸೂಪರ್ 4 ಹಂತ ಎರಡನೇ ತಂಡವನ್ನು ನಿರ್ಧರಿಸುತ್ತದೆ. ಇನ್ನು ಎ ಗುಂಪಿನಲ್ಲಿ ಪಾಕಿಸ್ತಾನವು ಶುಕ್ರವಾರ (ಸೆಪ್ಟೆಂಬರ್ 2) ಹಾಂಗ್‌ಕಾಂಗ್ ಅನ್ನು ಎದುರಿಸಲಿದ್ದು, ಸೂಪರ್ 4 ಸ್ಥಾನಕ್ಕಾಗಿ ಪೈಪೋಟಿ ನಡೆಸಲಿವೆ. ಶನಿವಾರ (ಸೆಪ್ಟೆಂಬರ್ 3)ರಿಂದ ಸೂಪರ್ 4 ಹಂತವು ಪ್ರಾರಂಭವಾಗುತ್ತದೆ.
ಶುಕ್ರವಾರ ಹಾಂಗ್‌ಕಾಂಗ್ ತಂಡವನ್ನು ಸೋಲಿಸುವಲ್ಲಿ ಪಾಕಿಸ್ತಾನ ಯಶಸ್ವಿಯಾದರೆ, ಭಾನುವಾರ (ಸೆಪ್ಟೆಂಬರ್ 4) ಸೂಪರ್ 4ನಲ್ಲಿ ಮತ್ತೊಮ್ಮೆ ಭಾರತವನ್ನು ಎದುರಿಸಲಿದೆ.

ಏಷ್ಯಾ ಕಪ್ ಸೂಪರ್ 4 ಮಾದರಿ
ಗುಂಪು ಹಂತಗಳಲ್ಲಿ 6 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪು ಎ ಮತ್ತು ಗುಂಪ ಬಿ. ಗ್ರೂಪ್ ಎ: ಭಾರತ, ಪಾಕಿಸ್ತಾನ ಮತ್ತು ಹಾಂಗ್‌ಕಾಂಗ್ ಹೊಂದಿದ್ದರೆ, ಬಿ ಗುಂಪು: ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳನ್ನು ಹೊಂದಿದೆ.
ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು- A1, A2, B1, B2 - ಸೂಪರ್ 4ಗೆ ಮುನ್ನಡೆಯುತ್ತವೆ ಮತ್ತು ರೌಂಡ್ ರಾಬಿನ್ ಮಾದರಿಯಲ್ಲಿ ಪರಸ್ಪರರ ವಿರುದ್ಧ ಆಡುತ್ತವೆ. ಮೊದಲ ಎರಡು ತಂಡಗಳು ಸೆಪ್ಟೆಂಬರ್ 11ರಂದು ದುಬೈನಲ್ಲಿ ನಡೆಯಲಿರುವ ಫೈನಲ್‌ಗೆ ಪ್ರವೇಶ ಪಡೆಯಲಿವೆ.

ಏಷ್ಯಾ ಕಪ್ 2022 ಸೂಪರ್ 4- ಅರ್ಹ ತಂಡಗಳು
ಏಷ್ಯಾ ಕಪ್ 2022ರಲ್ಲಿ ಈಗ ಗುಂಪು ಹಂತದ ಪಂದ್ಯಗಳು ನಡೆಯುತ್ತಿವೆ. ಎರಡೂ ಗುಂಪಿನಲ್ಲಿ ಹೆಚ್ಚು ಅಂಕ ಪಡೆದ ತಲಾ ಅಗ್ರ ಎರಡು ತಂಡಗಳು ಸೂಪರ್ 4 ತಲುಪಲಿವೆ. ಈಗಾಗಲೇ ಭಾರತ ಮತ್ತು ಅಫ್ಘಾನಿಸ್ತಾನ ಕ್ರಮವಾಗಿ ಎ ಮತ್ತು ಬಿ ಗುಂಪಿನಿಂದ ಸೂಪರ್ 4ಗೆ ಅರ್ಹತೆ ಪಡೆದಿವೆ.
ಸೆಪ್ಟೆಂಬರ್ 1: ಶ್ರೀಲಂಕಾ vs ಬಾಂಗ್ಲಾದೇಶ: ವಿಜೇತರು ಸೂಪರ್ 4ಕ್ಕೆ ಲಗ್ಗೆ
ಸೆಪ್ಟೆಂಬರ್ 2: ಪಾಕಿಸ್ತಾನ ವಿರುದ್ಧ ಹಾಂಗ್‌ಕಾಂಗ್: ವಿಜೇತರು ಸೂಪರ್ 4ಕ್ಕೆ ಲಗ್ಗೆ

ಭಾನುವಾರ ಭಾರತ vs ಪಾಕಿಸ್ತಾನ?
ಏಷ್ಯಾ ಕಪ್ 2022ರಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯ ಮೊದಲ ಸುತ್ತಿನ ಪಂದ್ಯವು ಆಗಸ್ಟ್ 28ರಂದು ದುಬೈನಲ್ಲಿ ನಡೆಯಿತು. ಆ ಪಂದ್ಯವನ್ನು ಭಾರತ 5 ವಿಕೆಟ್‌ಗಳಿಂದ ಗೆದ್ದಿತ್ತು. ಪಾಕಿಸ್ತಾನವು ಸೂಪರ್ 4ಗೆ ಪ್ರವೇಶಿಸಲು ಸೆಪ್ಟೆಂಬರ್ 2ರಂದು ಹಾಂಗ್‌ಕಾಂಗ್ ಅನ್ನು ಸೋಲಿಸಬೇಕಾಗಿದೆ. ಹಾಂಗ್‌ಕಾಂಗ್ ಸೋಲಿಸಿದರೆ, ಪಾಕಿಸ್ತಾನವು A2 ಆಗಿ ಸೂಪರ್ 4 ಅನ್ನು ಪ್ರವೇಶಿಸುತ್ತದೆ ಮತ್ತು ಸೆಪ್ಟೆಂಬರ್ 4ರಂದು ದುಬೈನಲ್ಲಿ ಭಾರತವನ್ನು (A1) ಸೂಪರ್ 4 ಎದುರಿಸಬಹುದು.

ಸೂಪರ್ 4ರ ವೇಳಾಪಟ್ಟಿ
B1 v B2: ಅಫ್ಘಾನಿಸ್ತಾನ vs ಶ್ರೀಲಂಕಾ/ಬಾಂಗ್ಲಾದೇಶ: 3 ಸೆಪ್ಟೆಂಬರ್, ಶಾರ್ಜಾ
A1 v A2: ಭಾರತ ವಿರುದ್ಧ ಪಾಕಿಸ್ತಾನ/ಹಾಂಗ್‌ಕಾಂಗ್: 4 ಸೆಪ್ಟೆಂಬರ್, ದುಬೈ
A1 v B1: ಭಾರತ vs ಅಫ್ಘಾನಿಸ್ತಾನ: 6 ಸೆಪ್ಟೆಂಬರ್, ದುಬೈ
A2 v B2: ಪಾಕಿಸ್ತಾನ/ಹಾಂಗ್‌ಕಾಂಗ್ ವಿರುದ್ಧ ಶ್ರೀಲಂಕಾ/ಬಾಂಗ್ಲಾದೇಶ: 7 ಸೆಪ್ಟೆಂಬರ್, ದುಬೈ
A1 v B2: ಭಾರತ vs ಶ್ರೀಲಂಕಾ/ಬಾಂಗ್ಲಾದೇಶ: 8 ಸೆಪ್ಟೆಂಬರ್, ದುಬೈ
ಏಷ್ಯಾ ಕಪ್ 2022ರ ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಪ್ರಾರಂಭವಾಗಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications