Asia Cup 2022 Super 4: ಭಾರತ vs ಪಾಕಿಸ್ತಾನ ಮಹಾ ಘರ್ಷಣೆಯ ಸಂಭಾವ್ಯ ತಂಡಗಳು

ಹಾಂಗ್‌ಕಾಂಗ್ ಅನ್ನು 155 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದ ನಂತರ ಪಾಕಿಸ್ತಾನ ತಂಡವು ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಏಷ್ಯಾ ಕಪ್ 2022ರ ಸೂಪರ್ 4ಗೆ ಅರ್ಹತೆ ಪಡೆದಿದ್ದು, ಭಾನುವಾರ ನಡೆಯಲಿರುವ ಮತ್ತೊಂದು ಮಹಾ ಘರ್ಷಣೆಗೆ ಕ್ರೀಡಾಲೋಕ ಸಾಕ್ಷಿಯಾಗಲಿದೆ.
ಮೆನ್ ಇನ್ ಗ್ರೀನ್ ಪಾಕಿಸ್ತಾನ ಪುರುಷರ ತಂಡ ತಮ್ಮ ಮೊದಲ ಪಂದ್ಯವನ್ನು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ವಿರುದ್ಧ ಸೋತಿದ್ದರು. ಆದರೆ ಸೂಪರ್ 4 ಹಂತ ತಲುಪಲು ಹಾಂಗ್‌ಕಾಂಗ್ ವಿರುದ್ಧ ಬಲವಾದ ಪುನರಾಗಮನ ಮಾಡಿ ಗೆದ್ದರು.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ (ಸೆಪ್ಟೆಂಬರ್ 4) ನಡೆಯಲಿರುವ ಸೂಪರ್ 4ರ ಮೊದಲ ಹಣಾಹಣಿಯಲ್ಲಿ ಅವರು ಇದೀಗ ಮತ್ತೊಮ್ಮೆ ಭಾರತವನ್ನು ಎದುರಿಸಲಿದ್ದಾರೆ ಮತ್ತು ಬಹು ನಿರೀಕ್ಷಿತ ಘರ್ಷಣೆಯಲ್ಲಿ ತಮ್ಮ ನೆಚ್ಚಿನ ತಂಡಗಳನ್ನು ವೀಕ್ಷಿಸುವ ಸಂತೋಷವು ಅಭಿಮಾನಿಗಳಿಗೆ ಮರಳಲಿದೆ.

ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತದ ಸಂಭಾವ್ಯ 11 ನಿರೀಕ್ಷೆ
ಮೊಣಕಾಲಿನ ಗಾಯದಿಂದಾಗಿ ತಮ್ಮ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ರವೀಂದ್ರ ಜಡೇಜಾ 2022ರ ಏಷ್ಯಾ ಕಪ್‌ನಲ್ಲಿ ಇನ್ನು ಮುಂದೆ ಭಾಗವಹಿಸಲು ಸಾಧ್ಯವಿಲ್ಲ ಎಂದು ತಿಳಿದಾಗ ರೋಹಿತ್ ಶರ್ಮಾ ನಾಯಕತ್ವದ ಭಾರತಕ್ಕೆ ಭಾರಿ ಹೊಡೆತ ಬಿದ್ದಿದೆ. ಅವರ ಸ್ಥಾನಕ್ಕೆ ಅಕ್ಷರ್ ಪಟೇಲ್ ಆಯ್ಕೆಯಾಗಿದ್ದಾರೆ.
ಇಬ್ಬರೂ ಕ್ರಿಕೆಟಿಗರು ಒಂದೇ ರೀತಿಯ ಕೌಶಲಗಳನ್ನು ಹೊಂದಿರುವುದರಿಂದ ಭಾರತ ತಂಡಕ್ಕೆ ಅಷ್ಟೊಂದು ಹಿನ್ನಡೆಯಾಗುವುದಿಲ್ಲ. ರವೀಂದ್ರ ಜಡೇಜಾ ಅವರ ಹೊರಗುಳಿಯುವಿಕೆಯು ರಿಷಭ್ ಪಂತ್‌ಗೆ ಖಂಡಿತವಾಗಿಯೂ ಅವಕಾಶ ಸಿಗಲಿದೆ. ರಿಷಭ್ ಪಂತ್ ಪಾಕಿಸ್ತಾನದ ವಿರುದ್ಧ ಕೊನೆಯ ಪಂದ್ಯವನ್ನು ಆಡಿರಲಿಲ್ಲ, ಏಕೆಂದರೆ ಪಂತ್‌ಗಿಂತ ದಿನೇಶ್ ಕಾರ್ತಿಕ್‌ಗೆ ವಿಕೆಟ್‌ಕೀಪರ್‌ಗೆ ಆದ್ಯತೆ ನೀಡಲಾಯಿತು.

ರಿಷಭ್ ಪಂತ್‌ಗೆ ಅವಕಾಶ ಸಾಧ್ಯತೆ
ಪಾಕಿಸ್ತಾನ ವಿರುದ್ಧ ಸೂಪರ್ 4 ಪಂದ್ಯದಲ್ಲಿ ಭಾರತ ಇನ್ನೂ ದಿನೇಶ್ ಕಾರ್ತಿಕ್ ಜೊತೆ ಅಂಟಿಕೊಳ್ಳಬಹುದು. ಇದೇ ವೇಳೆ ರಿಷಭ್ ಪಂತ್ ಭಾರತ ತಂಡದ ಆಡುವ 11ರ ಬಳಗದಲ್ಲಿ ಆಡದಿರಬಹುದು. ಏಕೆಂದರೆ ಭಾರತವು ಪಾಕಿಸ್ತಾನದ ವಿರುದ್ಧ ಕೇವಲ 5 ಪೂರ್ಣ ಬೌಲರ್‌ಗಳೊಂದಿಗೆ ಹೋಗಲು ಸಾಧ್ಯವಿಲ್ಲ.
ಇನ್ನು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ದೀಪಕ್ ಹೂಡಾ ಅವರನ್ನು ಸೇರಿಸಿಕೊಳ್ಳಬಹುದು. ಏಕೆಂದರೆ ಅವರು ಚೆನ್ನಾಗಿ ಬೌಲಿಂಗ್ ಮಾಡಬಹುದು ಅಥವಾ ತಂಡದಲ್ಲಿ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡುತ್ತಾರೆ. ಇನ್ನು ವೇಗಿ ಅವೇಶ್ ಖಾನ್ ಇಲ್ಲಿಯವರೆಗೆ ಉತ್ತಮ ಪ್ರದರ್ಶನವನ್ನು ನೀಡಿಲ್ಲ. ಆದರೆ ಭಾರತವು ಅವರೊಂದಿಗೆ ಬ್ಯಾಕಪ್ ವೇಗಿಗಳನ್ನು ಹೊಂದಿಲ್ಲದ ಕಾರಣ ಪಾಕಿಸ್ತಾನದ ವಿರುದ್ಧ ಅವರನ್ನು ಮತ್ತೆ ಆಡಿಸಬಹುದು.

ಭಾರತ ವಿರುದ್ಧ ಪಾಕಿಸ್ತಾನದ 11 ಸಂಭಾವ್ಯ ತಂಡ
ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡಕ್ಕೆ ಸಂಬಂಧಿಸಿದಂತೆ ಅವರು ಒಂದು ದಿನ ಮೊದಲು ಹಾಂಗ್‌ಕಾಂಗ್ ತಂಡವನ್ನು ಸೋಲಿಸಿದ ಅದೇ ತಂಡವನ್ನು ಆಡಿಸಬಹುದು. ಅವರು ವಿಜೇತ ಸಂಯೋಜನೆಯನ್ನು ಬದಲಾವಣೆ ಮಾಡಲು ಇಷ್ಟಪಡುವುದಿಲ್ಲ. ಬ್ಯಾಟ್ಸ್‌ಮನ್‌ಗಳು ಫಾರ್ಮ್ ಕಂಡುಕೊಳ್ಳುವುದರೊಂದಿಗೆ, ಸೆಪ್ಟೆಂಬರ್ 4ರಂದು ಭಾರತ ವಿರುದ್ಧ ಉತ್ತಮ ಪ್ರದರ್ಶನವನ್ನು ಪಾಕಿಸ್ತಾನವು ಮುಂದುವರಿಸಲು ಎದುರು ನೋಡುತ್ತಿದೆ.

ಭಾರತ ಮತ್ತು ಪಾಕಿಸ್ತಾನದ 11 ಸಂಭಾವ್ಯ ತಂಡಗಳು
ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ದೀಪಕ್ ಹೂಡಾ/ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್
ಪಾಕಿಸ್ತಾನ ಸಂಭಾವ್ಯ ತಂಡ: ಮೊಹಮ್ಮದ್ ರಿಜ್ವಾನ್ (ವಿಕೆಟ್), ಬಾಬರ್ ಅಜಂ (ನಾಯಕ), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಶ್ದಿಲ್ ಶಾ, ಶಾದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಹ್ಯಾರಿಸ್ ರೌಫ್, ನಸೀಮ್ ಶಾ, ಶಾನವಾಜ್ ದಹಾನಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications