Asia Cup 2022: ಪಾಕಿಸ್ತಾನ vs ಶ್ರೀಲಂಕಾ ಟಾಸ್ ವರದಿ; ಆಡುವ 11ರ ಬಳಗ & ಲೈವ್ ಸ್ಕೋರ್

ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯಲಿರುವ 2022ರ ಏಷ್ಯಾ ಕಪ್ ಸೂಪರ್ 4ರ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಸೆಣಸಲಿವೆ. ಉಭಯ ತಂಡಗಳ ನಡುವೆ ಭಾನುವಾರ ನಡೆಯಲಿರುವ ಫೈನಲ್‌ಗೂ ಮುನ್ನ ಈ ಹಣಾಹಣಿ ಅಭ್ಯಾಸ ಪಂದ್ಯದಂತೆ ನಡೆಯಲಿದೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಶ್ರೀಲಂಕಾ ನಾಯಕ ದಸುನ್ ಶನಕ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡರು. ಹೀಗಾಗಿ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್‌ಗೆ ಇಳಿಯಲಿದೆ.
ಎರಡೂ ತಂಡಗಳು ಭಾರತ ಮತ್ತು ಅಫ್ಘಾನಿಸ್ತಾನವನ್ನು ಸೂಪರ್ 4ರ ಹಂತದಲ್ಲಿ ಸೋಲಿಸಿ ಟೂರ್ನಿಯ ಫೈನಲ್ ಪಂದ್ಯಕ್ಕೆ ದಾರಿ ಮಾಡಿಕೊಂಡಿವೆ. ಕೆಲವು ಪಂದ್ಯಗಳಲ್ಲಿ ಫಾರ್ಮ್‌ನಿಂದ ಹೊರಗುಳಿದ ನಂತರ, ಪಾಕಿಸ್ತಾನದ ನಾಯಕ ಬಾಬರ್ ಅಜಂ ಇಂದಿನ ಪಂದ್ಯದಲ್ಲಿ ತಮ್ಮನ್ನು ತಾವು ಪ್ರದರ್ಶಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಇತ್ತಂಡಗಳಲ್ಲಿ ಯಾವ ತಂಡ ತಮ್ಮ ಉತ್ತಮ ಪ್ರದರ್ಶನ ಮುಂದಿಡುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.
ಶುಕ್ರವಾರದ ಪಂದ್ಯವು ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳಿಗೆ ಸೂಪರ್ 4ರ ಕೊನೆಯ ಪಂದ್ಯವು ಅನೌಪಚಾರಿಕ ಪಂದ್ಯವಾಗಿದ್ದು, ಎರಡು ತಂಡಗಳು ಫೈನಲ್‌ಗೂ ಮುನ್ನ ತಮ್ಮ ಆಟಗಾರರ ಪ್ರದರ್ಶನ ಸುಧಾರಿಸಲು ಎದುರು ನೋಡುತ್ತಿವೆ. ಸೆಪ್ಟೆಂಬರ್ 11ರಂದು ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ 2022 ಏಷ್ಯಾ ಕಪ್ ಫೈನಲ್ ಪಂದ್ಯ ನಡೆಯಲಿದೆ.
ಪಾಕಿಸ್ತಾನದ ಆಡುವ ಹನ್ನೊಂದರ ಬಳಗ
ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಬಾಬರ್ ಅಜಂ(ನಾಯಕ), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಉಸ್ಮಾನ್ ಖಾದಿರ್, ಹ್ಯಾರಿಸ್ ರೌಫ್, ಮೊಹಮ್ಮದ್ ಹಸನೈನ್, ಹಸನ್ ಅಲಿ
ಶ್ರೀಲಂಕಾದ ಆಡುವ ಹನ್ನೊಂದರ ಬಳಗ
ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಪ್ರಮೋದ್ ಮದುಶನ್, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications