Asia Cup 2022 Super 4: ಅಫ್ಘಾನ್, ಲಂಕಾ ಮುಖಾಮುಖಿಯಲ್ಲಿ ಬಲಿಷ್ಠ ತಂಡ ಯಾವುದು?

ನಿನ್ನೆಯಷ್ಟೇ ( ಸೆಪ್ಟೆಂಬರ್ 2 ) ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಇಂದಿನಿಂದ ( ಸೆಪ್ಟೆಂಬರ್ 3 ) ಸೂಪರ್ 4 ಸುತ್ತಿನ ಪಂದ್ಯಗಳು ಆರಂಭವಾಗಲಿವೆ. ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಗಳನ್ನು ಪಡೆದುಕೊಂಡ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೂಪರ್ 4 ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದರೆ, ಬಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಗಳನ್ನು ಪಡೆದುಕೊಂಡಿದ್ದ ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಸೂಪರ್ 4 ಸುತ್ತಿಗೆ ಲಗ್ಗೆ ಇಟ್ಟಿವೆ.
ಇನ್ನು ಸೂಪರ್ 4 ಸುತ್ತಿಗೆ ಪ್ರವೇಶ ಪಡೆದುಕೊಂಡಿರುವ ಈ ನಾಲ್ಕೂ ತಂಡಗಳು ತಲಾ 3 ಪಂದ್ಯಗಳಲ್ಲಿ ಸೆಣಸಾಟವನ್ನು ನಡೆಸಲಿದ್ದು, ಈ ಹಂತದಲ್ಲಿ ಒಟ್ಟಾರೆ 6 ಪಂದ್ಯಗಳು ಜರುಗಲಿವೆ. ಈ ಸುತ್ತಿನ ಅಂಕಪಟ್ಟಿಯಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದು ಟಾಪ್ 2 ಸ್ಥಾನಗಳನ್ನು ಪಡೆದುಕೊಳ್ಳಲಿರುವ ತಂಡಗಳು ಫೈನಲ್ ಪಂದ್ಯಕ್ಕೆ ಅರ್ಹತೆಯನ್ನು ಪಡೆದುಕೊಳ್ಳಲಿದ್ದು, ಸುತ್ತಿನ ಪ್ರತಿ ಪಂದ್ಯವೂ ಸಹ ಅತ್ಯಮೂಲ್ಯವಾಗಿರಲಿದೆ.
ಇನ್ನು ಸೂಪರ್ 4 ಸುತ್ತಿನ ಮೊದಲ ಪಂದ್ಯದಲ್ಲಿ ಬಿ ಗುಂಪಿನಿಂದ ಅರ್ಹತೆ ಗಿಟ್ಟಿಸಿಕೊಂಡಿರುವ ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳ ನಡುವಿನ ಪಂದ್ಯ ಇಂದು ( ಸೆಪ್ಟೆಂಬರ್ 3 ) ಸಂಜೆ 7.30ಕ್ಕೆ ಶಾರ್ಜಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ಎರಡೂ ತಂಡಗಳ ನಡುವೆ ಇಲ್ಲಿಯವರೆಗೂ ಒಟ್ಟು ಎಷ್ಟು ಏಷ್ಯಾ ಕಪ್ ಪಂದ್ಯಗಳು ನಡೆದಿವೆ ಹಾಗೂ ಈ ಪೈಕಿ ಯಾವ ತಂಡ ಹೆಚ್ಚು ಪಂದ್ಯಗಳಲ್ಲಿ ಗೆದ್ದು ಬಲಿಷ್ಠ ಎನಿಸಿಕೊಂಡಿದೆ ಎಂಬುದರ ಕುರಿತಾದ ವಿವರ ಕೆಳಕಂಡಂತಿದೆ.

ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ಏಷ್ಯಾಕಪ್ ಮುಖಾಮುಖಿ
ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಏಷ್ಯಾ ಕಪ್ ಇತಿಹಾಸದಲ್ಲಿ ಇಲ್ಲಿಯವರೆಗೂ ಒಟ್ಟು 3 ಬಾರಿ ಮುಖಾಮುಖಿಯಾಗಿವೆ. ಈ 3 ಪಂದ್ಯಗಳ ಪೈಕಿ ಈ ಬಾರಿಯ ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯವು ಕೂಡ ಒಂದಾಗಿದೆ. ಇನ್ನು ಉಭಯ ತಂಡಗಳ ನಡುವೆ ನಡೆದಿರುವ ಈ 3 ಏಷ್ಯಾ ಕಪ್ ಪಂದ್ಯಗಳ ಪೈಕಿ ಅಫ್ಘಾನಿಸ್ತಾನ 2 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ ಶ್ರೀಲಂಕಾ 1 ಪಂದ್ಯದಲ್ಲಿ ಮಾತ್ರ ಗೆದ್ದಿದೆ. ಈ ಮೂಲಕ ಇತ್ತಂಡಗಳ ನಡುವಿನ ಏಷ್ಯಾಕಪ್ ಮುಖಾಮುಖಿಯಲ್ಲಿ ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ ಮುನ್ನಡೆ ಸಾಧಿಸಿದೆ.

ಎಷ್ಟು ಅಂತರದಲ್ಲಿ ಜಯ?
• 2014ರ ಟೂರ್ನಿಯಲ್ಲಿ ನಡೆದಿದ್ದ ಪಂದ್ಯದ ಮೂಲಕ ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಮೊದಲ ಬಾರಿಗೆ ಏಷ್ಯಾ ಕಪ್‌ನಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಶ್ರೀಲಂಕಾ 129 ರನ್‌ಗಳ ಭರ್ಜರಿ ಜಯವನ್ನು ಸಾಧಿಸಿತ್ತು.
• ಮತ್ತೆ ಉಭಯ ತಂಡಗಳು 2018ರ ಏಷ್ಯಾಕಪ್ ಟೂರ್ನಿಯಲ್ಲಿ ಮುಖಾಮುಖಿಯಾಗಿದ್ದವು. ಇತ್ತಂಡಗಳ ನಡುವಿನ ಈ ಎರಡನೇ ಏಷ್ಯಾಕಪ್ ಮುಖಾಮುಖಿಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ 91 ರನ್‌ಗಳ ಅಂತರದಲ್ಲಿ ಗೆದ್ದು ಬೀಗಿತ್ತು.
• ಇನ್ನು ಪ್ರಸ್ತುತ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಆಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳು 27ರ ಆಗಸ್ಟ್ 2022ರಂದು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ 19.4 ಓವರ್‌ಗಳಲ್ಲಿ 105 ರನ್ ಗಳಿಸಿ ಆಲ್ ಔಟ್ ಆಗಿದ್ದ ಶ್ರೀಲಂಕಾ ಅಫ್ಘಾನಿಸ್ತಾನ ತಂಡಕ್ಕೆ 106 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಸುಲಭವಾಗಿ ಬೆನ್ನತ್ತಿದ ಆಫ್ಘಾನಿಸ್ತಾನ 10.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 106 ರನ್ ಕಲೆ ಹಾಕಿ 8 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತು.

ಈ ಬಾರಿಯ ಇತ್ತಂಡಗಳ ಸ್ಕ್ವಾಡ್
ಅಫ್ಘಾನಿಸ್ತಾನ: ಮೊಹಮ್ಮದ್ ನಬಿ (ನಾಯಕ), ನಜಿಬುಲ್ಲಾ ಝದ್ರಾನ್, ಅಫ್ಸರ್ ಝಜೈ, ಅಜ್ಮತುಲ್ಲಾ ಒಮರ್ಝೈ, ಫರೀದ್ ಅಹ್ಮದ್ ಮಲಿಕ್, ಫಝಲ್ಹಕ್ ಫಾರೂಕಿ, ಹಸ್ಮತುಲ್ಲಾ ಶಾಹಿದಿ, ಹಜರತುಲ್ಲಾ ಝಜೈ, ಇಬ್ರಾಹಿಂ ಝದ್ರಾನ್, ಕರೀಮ್ ಜನತ್, ಮುಜೀಬ್ ನವ್ರನ್, ಮುಜೀಬ್ ನವ್ರನ್, ಮುಜೀಬ್, ನವ್ರನ್, ಮುಜೀಬ್, ನವ್ರನ್, ರಹಮಾನುಲ್ಲಾ ಗುರ್ಬಾಜ್, ರಶೀದ್ ಖಾನ್, ಸಮೀವುಲ್ಲಾ ಶಿನ್ವಾರಿ. ಮೀಸಲು ಆಟಗಾರರು: ನಿಜತ್ ಮಸೂದ್, ಖೈಸ್ ಅಹ್ಮದ್, ಶರಫುದ್ದೀನ್ ಅಶ್ರಫ್.
ಶ್ರೀಲಂಕಾ: ದಸುನ್ ಶನಕ (ನಾಯಕ), ದನುಷ್ಕ ಗುಣತಿಲಕ, ಪಾತುಂ ನಿಸ್ಸಂಕ, ಕುಸಲ್ ಮೆಂಡಿಸ್, ಚರಿತ್ ಅಸಲಂಕ, ಭಾನುಕ ರಾಜಪಕ್ಸೆ, ಅಶೇನ್ ಬಂಡಾರ, ಧನಂಜಯ ಡಿ ಸಿಲ್ವ, ವನಿಂದು ಹಸರಂಗ, ಮಹೇಶ್ ತೀಕ್ಷಣ, ಜೆಫ್ರಿ ವಂಡರ್ಸೆ, ಪ್ರವೀಣ್ ಜಯವಿಕ್ರಮ, ಚಾಮಿಕ ಕರುಣಾಡು ಪಾಷಾಣ, ಚಾಮಿಕ ಕರುಣಾಡು ಪಾಷಾಣ, ದ.ಕ. ಫೆರ್ನಾಂಡೊ, ನುವಾನ್ ತುಸಾರ, ದಿನೇಶ್ ಚಾಂಡಿಮಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications