ಏಷ್ಯಾ ಕಪ್ 2022: ಭಾರತದ ಸಂಭಾವ್ಯ ಸ್ಕ್ವಾಡ್ ಇಲ್ಲಿದೆ

ವೆಸ್ಟ್ ಇಂಡೀಸ್ ವಿರುದ್ಧದ ಐದು ಟಿ20 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಈಗಾಗಲೇ 2-1ರಿಂದ ಮುನ್ನಡೆ ಸಾಧಿಸಿದ್ದು, ಸರಣಿ ಗೆಲುವಿನ ವಿಶ್ವಾಸದಲ್ಲಿದೆ. ಇದಾದ ಬಳಿಕ ಶಿಖರ್ ಧವನ್ ನಾಯಕತ್ವದಲ್ಲಿ ಭಾರತ, ಜಿಂಬಾಬ್ವೆ ವಿರುದ್ಧ ಏಕದಿನ ಸರಣಿ ಆಡಲಿದೆ. ಆದ್ರೆ ಇದಕ್ಕೂ ಮೊದಲೇ ಏಷ್ಯಾಕಪ್‌ಗಾಗಿ ತಂಡವನ್ನ ಅಂತಿಮಗೊಳಿಸುವ ಸಾಧ್ಯತೆಯಿದೆ.
ಬಿಸಿಸಿಐ ಹಿರಿಯ ಆಟಗಾರರ ಆಯ್ಕೆ ಸಮಿತಿಯು ಜಿಂಬಾಬ್ವೆ ಪ್ರವಾಸ ಕೈಗೊಳ್ಳುವ ಮೊದಲೇ ತಂಡವನ್ನ ಫೈನಲ್ ಮಾಡುವ ಸಾಧ್ಯತೆಯಿದೆ. ನಾಲ್ಕು ವರ್ಷಗಳ ಬಳಿಕ ನಡೆಯಲಿರುವ ಏಷ್ಯಾಕಪ್ ಆಗಸ್ಟ್ 27 ರಿಂದ ಯುಎಇನಲ್ಲಿ ಆರಂಭವಾಗಲಿದೆ. ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್ ಟೂರ್ನಿಯನ್ನು ಲಂಕಾ ಆಯೋಜಿಸಲು ವಿಫಲಗೊಂಡ ಕಾರಣ ಮೆಗಾ ಟೂರ್ನಿಗೆ ಯುಎಇಗೆ ಶಿಫ್ಟ್ ಆಗಿದೆ.
ಈಗಾಗಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಪ್ರಬಲ ತಂಡವನ್ನ ಘೋಷಣೆ ಮಾಡಿದ್ದು, ಭಾರತದ ಸಂಭಾವ್ಯ ಸ್ಕ್ವಾಡ್ ಅನ್ನು ಮುಂದೆ ತಿಳಿಯಿರಿ.

ಒಟ್ಟು ಆರು ತಂಡಗಳ ನಡುವೆ ಏಷ್ಯಾಕಪ್‌ಗಾಗಿ ಪೈಪೋಟಿ
ಒಟ್ಟು 6 ತಂಡಗಳು ಭಾಗವಹಿಸಲಿರುವ ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಈಗಾಗಲೇ ಅರ್ಹತೆ ಪಡೆದಿದ್ದು, ಆರನೇ ಸ್ಥಾನಕ್ಕಾಗಿ ಅರ್ಹತಾ ಸುತ್ತಿನಲ್ಲಿ ಹಾಂಕಾಂಗ್, ಸಿಂಗಾಪುರ, ಕುವೈತ್ ಮತ್ತು ಯುಎಇ ತಂಡಗಳು ಪೈಪೋಟಿ ನಡೆಸಲಿವೆ.
ಅಕ್ಟೋಬರ್ ನವೆಂಬರ್‌ನಲ್ಲಿ ಅವಧಿಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಏಷ್ಯಾಕಪ್ ನಡೆಯುತ್ತಿರುವುದರಿಂದ ಇದೊಂದು ಮಿನಿ ವಿಶ್ವಕಪ್ ಎಂಬಂತೆ ಬಿಂಬಿತವಾಗಿದೆ. ಇದಕ್ಕೆ ಕಾರಣ ಟಿ20 ಫಾರ್ಮೆಟ್‌ನಲ್ಲಿ ಟೂರ್ನಮೆಂಟ್ ನಡೆಯುತ್ತಿದೆ.

ಟೀಂ ಇಂಡಿಯಾ ಸಂಭಾವ್ಯ ಏಷ್ಯಾಕಪ್ ಸ್ಕ್ವಾಡ್
ಬ್ಯಾಟ್ಸ್‌ಮನ್‌ಗಳು: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್
ವಿಕೆಟ್ ಕೀಪರ್ಸ್: ರಿಷಭ್ ಪಂತ್, ಇಶಾನ್ ಕಿಶನ್, ದಿನೇಶ್ ಕಾರ್ತಿಕ್
ಆಲ್‌ರೌಂಡರ್ಸ್: ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ,
ಬೌಲರ್ಸ್: ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್
ಸ್ಪಿನ್ನರ್ಸ್: ಯುಜವೇಂದ್ರ ಚಹಾಲ್ , ರವಿ ಬಿಷ್ಣೋಯಿ
IND vs WI 3ನೇ ಟಿ20: ರೋಹಿತ್ ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಹೊರನಡೆದದ್ದೇಕೆ? ಮುಂದಿನ ಪಂದ್ಯ ಆಡ್ತಾರಾ, ಇಲ್ವಾ?
Asia Cup 2022: 25 ದಿನ ಮುಂಚಿತವಾಗಿಯೇ ಏಷ್ಯಾಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ!

ವಿಶ್ವಕಪ್‌ಗೂ ಮೊದಲೇ ತಂಡವನ್ನ ಸೆಟ್ ಮಾಡುವ ಪ್ರಯತ್ನ
ಏಷ್ಯಾಕಪ್‌ನಲ್ಲಿ ಆಡಿದ ತಂಡವನ್ನೇ ಮುಂದಿನ ದಿನಗಳಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ಟೂರ್ನಮೆಂಟ್‌ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಆರು ಟಿ20 ಪಂದ್ಯಗಳು ಸಹ ಅದೇ ಗುಂಪಿನ ಆಟಗಾರರನ್ನು ಒಳಗೊಂಡಿರುತ್ತವೆ. ವಿಶ್ವಕಪ್‌ಗೆ ಮೊದಲು, ಆಯ್ಕೆದಾರರು ತಂಡ ನಿರ್ವಹಣೆಗೆ ಸೂಕ್ತ ಸಂಖ್ಯೆಯ ಆಟಗಳನ್ನು ಕೆಲಸ ಮಾಡಲು ಪ್ರಯತ್ನಿಸುತ್ತಾರೆ. ಹೀಗಾಗಿ ಏಷ್ಯಾಕಪ್‌ನಲ್ಲಿ ಆಡಿದ ತಂಡವೇ ಬಹುತೇಕ ವಿಶ್ವಕಪ್‌ನಲ್ಲೂ ಆಡಲಿದೆ.
IND vs WI 3ನೇ ಟಿ20: ರೋಹಿತ್ ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಹೊರನಡೆದದ್ದೇಕೆ? ಮುಂದಿನ ಪಂದ್ಯ ಆಡ್ತಾರಾ, ಇಲ್ವಾ?

ಏಷ್ಯಾಕಪ್ 2022ರ ವೇಳಾಪಟ್ಟಿ
ಆಗಸ್ಟ್ 27ರಂದು ಮೊದಲ ಪಂದ್ಯದಲ್ಲಿ ಗ್ರೂಪ್ ಬಿ ತಂಡಗಳಾದ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡವು ಮುಖಾಮುಖಿಯಾಗಲಿದ್ದು, ದುಬೈ ಉದ್ಘಾಟನಾ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ಅಖಾಡಕ್ಕಿಳಿಯುತ್ತಿದ್ದು, ಗ್ರೂಪ್ ಎನಲ್ಲಿ ಉಭಯ ತಂಡಗಳು ಕಾದಾಟ ನಡೆಸಲಿವೆ. ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾತ್ರ ರಾತ್ರಿ 7.30ಕ್ಕೆ ನಡೆಯಲಿದೆ.
ಏಷ್ಯಾಕಪ್ 2022ರ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿದೆ.
27 ಆಗಸ್ಟ್: ಶ್ರೀಲಂಕಾ ವರ್ಸಸ್ ಅಫ್ಘಾನಿಸ್ತಾನ (ದುಬೈ)
28 ಆಗಸ್ಟ್: ಭಾರತ ವರ್ಸಸ್ ಪಾಕಿಸ್ತಾನ (ದುಬೈ)
30 ಆಗಸ್ಟ್: ಬಾಂಗ್ಲಾದೇಶ ವರ್ಸಸ್ ಅಫ್ಘಾನಿಸ್ತಾನ (ದುಬೈ)
31 ಆಗಸ್ಟ್: ಭಾರತ ವರ್ಸಸ್ ಕ್ವಾಲಿಫೈಯರ್ (ದುಬೈ)
1 ಸೆಪ್ಟೆಂಬರ್: ಶ್ರೀಲಂಕಾ ವರ್ಸಸ್ ಬಾಂಗ್ಲಾದೇಶ (ದುಬೈ)
2 ಸೆಪ್ಟೆಂಬರ್: ಪಾಕಿಸ್ತಾನ ವರ್ಸಸ್ ಕ್ವಾಲಿಫೈಯರ್ (ಶಾರ್ಜಾ)
3 ಸೆಪ್ಟೆಂಬರ್: B1 vs B2 (ಶಾರ್ಜಾ)
4 ಸೆಪ್ಟೆಂಬರ್: A1 vs A2 (ದುಬೈ)
6 ಸೆಪ್ಟೆಂಬರ್: A1 vs B1 (ದುಬೈ)
7 ಸೆಪ್ಟೆಂಬರ್: A2 vs B2 (ದುಬೈ)
8 ಸೆಪ್ಟೆಂಬರ್: A1 vs B2 (ದುಬೈ)
9 ಸೆಪ್ಟೆಂಬರ್: B1 vs A2 (ದುಬೈ)
11 ಸೆಪ್ಟೆಂಬರ್: ಫೈನಲ್ (ದುಬೈ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications