ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಹೆಸರು ತಿಳಿಸದೇ ಸಂದೇಶ ನೀಡಿದ ಕೊಹ್ಲಿ: ಇನ್‌ಸ್ಟಾಗ್ರಾಮ್ ಪೋಸ್ಟ್

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಫಾರಮ್‌ಗೆ ಮರಳಿದ್ದಾರೆ. ಏಷ್ಯಾಕಪ್‌ನಲ್ಲಿ ಸತತ ಎರಡು ಅರ್ಧಶತಕ ದಾಖಲಿಸುವ ಮೂಲಕ ಮಿಂಚಿದ್ದಾರೆ. ಆದ್ರೆ ಪಾಕ್ ವಿರುದ್ಧ ಪಂದ್ಯದ ಬಳಿಕ ಸುದ್ದಿಗೋಷ್ಟಿಯಲ್ಲಿ ವಿರಾಟ್ ನೀಡಿದ ಹೇಳಿಕೆಗಳು ಭಾರತೀಯ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ .
ಭಾನುವಾರ ಪಾಕಿಸ್ತಾನ ವಿರುದ್ಧ ಭಾರತ ಸೋತ ನಂತರ ಪತ್ರಿಕಾಗೋಷ್ಠಿಯಲ್ಲಿ, ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ನಂತರ ಯಾರೂ ತನ್ನನ್ನು ಸಂಪರ್ಕಿಸಿಲ್ಲ ಎಂದು ವಿರಾಟ್ ಹೇಳಿದ್ದಾರೆ. ಇದಾದ ನಂತರ ಮಂಗಳವಾರ ಶ್ರೀಲಂಕಾ ಪಂದ್ಯಕ್ಕೂ ಮುನ್ನ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಲಹೆ ರೀತಿಯಲ್ಲಿ ಸಂದೇಶವನ್ನು ನೀಡಿದ್ದಾರೆ.

ವಿರಾಟ್ ಕೊಹ್ಲಿ ವಿಶೇಷ ಸಂದೇಶ
ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಮಂಗಳವಾರ ಮಧ್ಯಾಹ್ನದ ಸುಮಾರಿಗೆ ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೆಲವು ಸಲಹೆ ನೀಡಿದ್ದಾರೆ. "ನಿಮ್ಮ ಸಂತೋಷಕ್ಕಾಗಿ ಸಂತೋಷವಾಗಿರುವವರನ್ನು ಮತ್ತು ನಿಮ್ಮ ದುಃಖಕ್ಕಾಗಿ ದುಃಖಿಸುವವರನ್ನು ಗಮನಿಸಿ. ಅವರು ನಿಮ್ಮ ಹೃದಯದಲ್ಲಿ ವಿಶೇಷ ಸ್ಥಾನಗಳಿಗೆ ಅರ್ಹರು." ಎಂದು ವೇದಾಂತಿಯ ರೂಪದಲ್ಲಿ ಸಂದೇಶ ಕೊಟ್ಟಿದ್ದಾರೆ.

ನಾಯಕತ್ವ ಬಿಟ್ಟಾಗ ಧೋನಿ ಮಾತ್ರ ನನಗೆ ಸಂದೇಶ ನೀಡಿದ್ದರು ಎಂದ ಕೊಹ್ಲಿ
ಸುದ್ದಿಗೋಷ್ಟಿಯಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವ ಬಿಟ್ಟಾಗ ತನಗೆ ಮೆಸೇಜ್ ಮಾಡಿ ವಿಚಾರಿಸಿದ್ದು ಭಾರತದ ಮಾಜಿ ನಾಯಕ ಎಂಎಸ್ ಧೋನಿ ಮಾತ್ರ ಎಂಬುದನ್ನು ತಿಳಿಸಿದ್ದರು. ತನ್ನ ನಂಬರ್ ಅನೇಕರ ಬಳಿ ಇದ್ದರೂ ಸಹ ಧೋನಿ ಹೊರತುಪಡಿಸಿ ಉಳಿದ ಯಾರೂ ಸಹ ಮೆಸೇಜ್ ಮಾಡಲಿಲ್ಲ ಎಂದು ಕೊಹ್ಲಿ ಬಿಚ್ಚಿಟ್ಟಿದ್ದಾರೆ. ಇದೇ ವೇಳೆಯಲ್ಲಿ ತನಗೆ ಮಹೇಂದ್ರ ಸಿಂಗ್ ಧೋನಿ ಮೇಲೆ ಇರುವ ನಿಜವಾದ ಗೌರವ ಹಾಗೂ ಅವರ ಜೊತೆ ಇರುವ ಸಂಬಂಧ ಎಂತಹದ್ದು ಎಂಬುದರ ಬಗ್ಗೆ ಕೊಹ್ಲಿ ಮಾತನಾಡಿದ್ದರು. ಇದರಿಂದ ವಿರಾಟ್ ಗೆ ಮೆಸೇಜ್ ನೀಡಿಲ್ಲ ಎಂದು ಕಿಡಿಕಾರಿದ್ದವರ ಬಗ್ಗೆ ತಿರಸ್ಕಾರ ಭಾವ ಬಂದರೂ ವಿರಾಟ್ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಮನಸ್ಸಾಗಲಿಲ್ಲ.
IPL ನಿವೃತ್ತಿ ಬಳಿಕ ಸುರೇಶ್ ರೈನಾ ಆಡಬಲ್ಲ 4 ವಿದೇಶಿ ಟಿ20 ಲೀಗ್ ಫ್ರಾಂಚೈಸಿಗಳು

ಏಷ್ಯಾಕಪ್‌ನಂತಹ ಟೂರ್ನಿಗಳಲ್ಲಿ ಕೊಹ್ಲಿ ಹೀಗೆ ಮಾತನಾಡಬಾರದು
ಆದರೆ, ಏಷ್ಯಾಕಪ್ ನಂತಹ ಟೂರ್ನಿಯಲ್ಲಿ ವಿರಾಟ್ ಇಂತಹ ಮಾತುಗಳನ್ನು ಆಡಬಾರದಿತ್ತು ಎಂದು ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ. ಭಾರತದ ಡ್ರೆಸ್ಸಿಂಗ್ ರೂಮ್‌ನಲ್ಲಿನ ವಾತಾವರಣದ ಬಗ್ಗೆ ನನಗೆ ತಿಳಿದಿಲ್ಲ ಎಂದು ಅವರು ಇಂಡಿಯಾ ಟುಡೆಗೆ ತಿಳಿಸಿದರು.
''ಡ್ರೆಸ್ಸಿಂಗ್ ರೂಂನ ಒಳಗಿನ ಪರಿಸ್ಥಿತಿ ನನಗೆ ತಿಳಿದಿಲ್ಲ. ಆಟಗಾರರ ನಡುವಿನ ಸಂಬಂಧವೂ ಯಾವ ರೀತಿಯಲ್ಲಿದೆ ಎಂಬುದು ತಿಳಿದಿಲ್ಲ. ನನ್ನ ಪ್ರಕಾರ ಆತ(ಕೊಹ್ಲಿ) ಒಬ್ಬ ವ್ಯಕ್ತಿಯ ಹೆಸರನ್ನ ಮಾತ್ರ ಉಲ್ಲೇಖಿಸಿ ತನ್ನೊಂದಿಗೆ ಸಂಪರ್ಕದಲ್ಲಿದ್ದರು ಎಂದು ಹೇಳಿದ ಬಳಿಕ, ಸಂಪರ್ಕವಿಲ್ಲದ ಆಟಗಾರರು ಯಾರು ಎಂಬುದನ್ನ ಹೆಸರಿಸುವುದು ಉತ್ತಮ. ಏಕೆಂದರೆ ಆಗ ಎಲ್ಲರೂ ತನ್ನೊಂದಿಗೆ ಸಂಪರ್ಕಕ್ಕೆ ಬಂದಿಲ್ಲ ಎಂದು ಭಾವಿಸುವುದಕ್ಕಿಂತ ಸಂಬಂಧಪಟ್ಟವರಿಗೆ ಸ್ವಲ್ಪ ನ್ಯಾಯಯುತವಾಗಿರುತ್ತಿತ್ತು, "ಎಂದು ಗವಾಸ್ಕರ್ ಹೇಳಿದರು.
ಟಿ20 ವಿಶ್ವಕಪ್ ಗೆಲ್ಲಬೇಕಾದರೆ ಈತ ಭಾರತ ತಂಡಕ್ಕೆ ಅನಿವಾರ್ಯ: ಕನ್ನಡಿಗ ಬಗ್ಗೆ ಮಾಜಿ ಕ್ರಿಕೆಟಿಗನ ವಿಶ್ವಾಸದ ಮಾತು

48 ಗಂಟೆಯೊಳಗೆ ಮತ್ತೊಂದು ಸಂದೇಶ ನೀಡಿದ ವಿರಾಟ್
ಗವಾಸ್ಕರ್ ಹೇಳಿದಂತೆ ವಿರಾಟ್ ಕೊಹ್ಲಿ ಎಲ್ಲಿಯೂ ಹೆಸರನ್ನ ಬಹಿರಂಗಪಡಿಸಿಲ್ಲ. ಆದ್ರೆ, 48 ಗಂಟೆ ಕಳೆಯುವ ಮುನ್ನವೇ ವಿರಾಟ್ ಮತ್ತೊಮ್ಮೆ ಸಿಗ್ನಲ್ ಸಂದೇಶ ನೀಡಿದ್ದಾರೆ. ವಿರಾಟ್ ಅವರ ಪತ್ರಿಕಾಗೋಷ್ಠಿ ಹೇಳಿಕೆಯು Instagram ಸ್ಟೋರಿ ಸಂದೇಶದೊಂದಿಗೆ ಸಂಪರ್ಕ ಹೊಂದಿದೆ ಎಂದು ಹಲವರು ಭಾವಿಸುತ್ತಾರೆ.
ಶ್ರೀಲಂಕಾ ವಿರುದ್ಧ ಮಿಂಚುವ ಭರವಸೆ ಮೂಡಿಸಿದ್ದ ಕೊಹ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ಭಾರೀ ನಿರಾಸೆ ಮೂಡಿಸಿದ್ದಾರೆ. ಕಳೆದೆರಡು ಪಂದ್ಯದಲ್ಲಿ ವಿರಾಟ್ ಅರ್ಧಶತಕ ದಾಖಲಿಸಿದ್ದರು.

ಬಿಸಿಸಿಐನೊಂದಿಗೆ ಕೊಹ್ಲಿ ವಿವಾದ
ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಏಕದಿನ ನಾಯಕತ್ವದಿಂದ ವಜಾಗೊಳಿಸಿ ವಿವಾದ ಸೃಷ್ಟಿಸಿದ್ದರು. ಸೌರವ್ ಗಂಗೂಲಿ ಕೂಡ ಅವರನ್ನು ಸುಳ್ಳುಗಾರ ಎಂದು ಸಾಬೀತುಪಡಿಸಲು ಹಿಂಜರಿಯಲಿಲ್ಲ. ಆದರೆ, ಬಿಸಿಸಿಐ ಅಧ್ಯಕ್ಷರು ಸೇರಿದಂತೆ ಮಂಡಳಿಯ ಅಧಿಕಾರಿಗಳು ಈ ವಿಷಯವನ್ನು ಉತ್ತಮವಾಗಿ ನಿಭಾಯಿಸಿದ್ದಾರೆ.
ಕಳೆದ ಟಿ20 ವಿಶ್ವಕಪ್‌ಗೂ ಮುನ್ನ ಟಿ20 ನಾಯಕತ್ವ ತೊರೆಯಲು ವಿರಾಟ್ ತೆಗೆದುಕೊಂಡ ನಿರ್ಧಾರವನ್ನು ಮಂಡಳಿ ಸರಿಯಾಗಿ ತೆಗೆದುಕೊಂಡಿಲ್ಲ. ಅವರು ಬ್ಯಾಟ್‌ನೊಂದಿಗೆ ಕೆಟ್ಟ ಸಮಯವನ್ನು ಎದುರಿಸುತ್ತಿರುವಾಗಲೂ ಇಂಗ್ಲೆಂಡ್ ಪ್ರವಾಸದ ನಂತರ ಅವರು ಬಯಸಿದ ಕೆಲವು ವಾರಗಳ ರಜೆಗೆ ಬಿಸಿಸಿಐ ಒಪ್ಪಿಕೊಂಡಿತು. ಇದರಿಂದಾಗಿ ಬಿಸಿಸಿಐ ಸಂಪೂರ್ಣ ವಿರಾಟ್ ಪರ ನಿಂತಿದೆ. ಹೀಗಿದ್ದರೂ ಬಿಸಿಸಿಐಗೆ ಅವರ ಪರಕ್ಕಿಂತ ಕೊಹ್ಲಿ ವಿರೋಧದ ಹೇಳಿಕೆಯನ್ನ ನೀಡುತ್ತಿರುವುದು ಅರ್ಥವಾಗುತ್ತಿಲ್ಲ ಎಂದು ಬಿಸಿಸಿಐ ಅಧಿಕಾರಿಗಳ ಅಭಿಪ್ರಾಯವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications