ಟಿ20 ವಿಶ್ವಕಪ್ ಗೆಲ್ಲಬೇಕಾದರೆ ಈತ ಭಾರತ ತಂಡಕ್ಕೆ ಅನಿವಾರ್ಯ: ಕನ್ನಡಿಗ ಬಗ್ಗೆ ಮಾಜಿ ಕ್ರಿಕೆಟಿಗನ ವಿಶ್ವಾಸದ ಮಾತು

ಟಿ20 ವಿಶ್ವಕಪ್ ಟೂರ್ನಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು ಏಷ್ಯಾ ಕಪ್‌ನ ಮೂಲಕ ಭರ್ಜರಿ ಸಿದ್ಧತೆಯನ್ನು ಭಾರತ ಸೇರಿದಂತೆ ಏಷ್ಯಾದ ತಂಡಗಳು ನಡೆಸುತ್ತಿದೆ. ಕಳೆದ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಲೀಗ್ ಹಂತದಿಂದಲೇ ಹೊರಬಿದ್ದ ಭಾರತ ತಂಡ ಈ ಬಾರಿ ಟೂರ್ನಿ ಗೆಲ್ಲಲೇ ಬೇಕೆಂದು ತಯಾರಿ ನಡೆಸುತ್ತಿದೆ. ಈ ಸಂದರ್ಭದಲ್ಲಿ ಏಷ್ಯಾ ಕಪ್‌ನಲ್ಲಿ ಭಾರತ ತಂಡ ನೀಡುವ ಪ್ರದರ್ಶನ ಮಹತ್ವದ್ದಾಗಿದ್ದು ತಂಡದ ಆತ್ಮವಿಶ್ವಾಸ ಹೆಚ್ಚಿಸಲು ಈ ಟೂರ್ನಿ ಸಹಕಾರಿಯಾಗಲಿದೆ. ಅಲ್ಲದೆ ತಂಡದ ಹುಳುಕುಗಳನ್ನು ಸರಿಮಾಡಿಕೊಳ್ಳಲು ಮಹತ್ವದ ಟೂರ್ನಿಗೂ ಅವಕಾಶವೊಂದು ದೊರೆತಂತಾಗಿದೆ.

ಈ ಸಂದರ್ಭದಲ್ಲಿ ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿ ಗೆಲುವು ಸಾಧಿಸಬೇಕಾದರೆ ತಂಡದ ಓರ್ವ ಆಟಗಾರ ಬಹಳ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಆಯ್ಕೆ ಸಮಿತಿಯ ಮುಖ್ಯಸ್ಥ ಕಿರಣ್ ಮೋರೆ ಹೇಳಿದ್ದಾರೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ನೀಡಿದ ಪ್ರದರ್ಶನವನ್ನು ಉಲ್ಲೇಖಿಸಿ ಈ ಮಾತು ಹೇಳಿದ್ದಾರೆ ಕಿರಣ್ ಮೋರೆ.

ಏಷ್ಯಾ ಕಪ್: ಶ್ರೀಲಂಕಾ ವಿರುದ್ಧದ ಮಹತ್ವದ ಕದನಕ್ಕೆ ರೋಹಿತ್ ಪಡೆ ಸಜ್ಜು: ತಪ್ಪು ತಿದ್ದಿಕೊಳ್ಳುತ್ತಾ ಭಾರತ!ಏಷ್ಯಾ ಕಪ್: ಶ್ರೀಲಂಕಾ ವಿರುದ್ಧದ ಮಹತ್ವದ ಕದನಕ್ಕೆ ರೋಹಿತ್ ಪಡೆ ಸಜ್ಜು: ತಪ್ಪು ತಿದ್ದಿಕೊಳ್ಳುತ್ತಾ ಭಾರತ!

ಕನ್ನಡಿಗ ಕೆಎಲ್ ರಾಹುಲ್ ಬಗ್ಗೆ ಮೋರೆ ವಿಶ್ವಾಸ

ಕನ್ನಡಿಗ ಕೆಎಲ್ ರಾಹುಲ್ ಬಗ್ಗೆ ಮೋರೆ ವಿಶ್ವಾಸ

ಮಾಜಿ ವಿಕೆಟ್ ಕೀಪರ್ ಹಾಗೂ ಆಯ್ಕೆ ಸಮಿತಿಯ ಮುಖ್ಯಸ್ಥ ಕಿರಣ್ ಮೋರೆ ಹೊಗಳಿದ್ದು ಕನ್ನಡಿಗ ಕ್ರಿಕೆಟಿಗ ಆರಂಭಿಕ ಆಟಗಾರ ಕೆಎಲ್ ರಾಹುಲ್ ಬಗ್ಗೆ. ಪಾಕಿಸ್ತಾನದ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿದ ಕೆಎಲ್ ರಾಹುಲ್ 16 ಎಸೆತಗಳನ್ನು ಎದುರಿಸಿ 28 ರನ್‌ಗಳನ್ನು ಗಳಿಸಿದ್ದಾರೆ. ಟೂರ್ನಿ ಆರಂಭಿಕ ಪಂದ್ಯ ಪಾಕಿಸ್ತಾನದ ವಿರುದ್ಧ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡಿದ್ದ ರಾಹುಲ್ ನಂತರ ಹಾಂಕಾಂಗ್ ವಿರುದ್ಧ ನಿಧಾನಗತಿಯಲ್ಲಿ ಬ್ಯಾಟಿಂಗ್ ನಡೆಸಿದ್ದರು. ಹೀಗಾಗಿ ಪಾಕ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಮೇಲೆ ಸಾಕಷ್ಟು ಒತ್ತಡಗಳಿತ್ತು. ಆದರೆ ಈ ಒತ್ತಡಗಳ ಮಧ್ಯೆಯೂ ರಾಹುಲ್ ಸರಾಗವಾಗಿ ಬ್ಯಾಟಿಂಗ್ ನಡೆಸಿ ಸೈ ಎನಿಸಿಕೊಂಡಿದ್ದರು.

ಏಷ್ಯಾಕಪ್‌ನಲ್ಲಿ ಭಾರತ ತಂಡದ ಸೆಲೆಕ್ಷನ್‌ನಲ್ಲೇ ದೊಡ್ಡ ಎಡವಟ್ಟು: ಮೊಹಮ್ಮದ್ ಕೈಫ್

ಕೆಎಲ್ ಸುಲಭವಾಗಿ ಶತಕಗಳಿಸುವ ಆಟಗಾರ

ಕೆಎಲ್ ಸುಲಭವಾಗಿ ಶತಕಗಳಿಸುವ ಆಟಗಾರ

ಮಾಜಿ ಕ್ರಿಕೆಟಿಗ ಕಿರಣ್ ಮೋರೆ ಭಾರತ ತಂಡ ಟಿ20 ವಿಶ್ವಕಪ್ ಗೆಲ್ಲಲು ಮಹತ್ವದ ಪಾತ್ರವಹಿಸುವ ಆಟಗಾರ ಎಂದು ಕೆಎಲ್ ರಾಹುಲ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಹುಲ್‌ಗೆ ಬೆಂಬಲ ನೀಡುವ ಅಗತ್ಯವಿದ್ದು ತಂಡದ ಪರವಾಗಿ ಪರಿಣಾಮಕಾರಿ ಪ್ರದರ್ಶನ ನೀಡಬಲ್ಲ ಆಟಗಾರ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ಕೆಎಲ್ ರಾಹುಲ್ ಗಾಯದಿಂದ ಮರಳಿದ್ದಾರೆ. ಅಲ್ಲದೆ ಹರ್ನಿಯಾ ಶಸ್ತ್ರಚಿಕಿತ್ಸೆಗೂ ಅವರು ಒಳಗಾಗಿದ್ದರು. ಅವರು ತಂಡದ ಪ್ರಮುಖ ಆಟಗಾರನಾಗಿದ್ದು ವಿಶ್ವಕಪ್‌ನಲ್ಲಿ ಅವರ ಅಗತ್ಯ ತಂಡಕ್ಕೆ ಬಹಳಷ್ಟಿದೆ. ಅವರು ವಿಶ್ವಕಪ್‌ನಲ್ಲಿ ಸುಲಭವಾಗಿ ಶತಕವನ್ನು ಗಳಿಸಬಲ್ಲರು" ಎಂದಿದ್ದಾರೆ ಕಿರಣ್ ಮೋರೆ.

ಆತಂಕಪಡುವ ಅಗತ್ಯವಿಲ್ಲ

ಆತಂಕಪಡುವ ಅಗತ್ಯವಿಲ್ಲ

ಈ ಸಂದರ್ಭದಲ್ಲಿ ಕಿರಣ್ ಮೋರೆ ಟೀಮ್ ಇಂಡಿಯಾದ ಕೋಚ್ ಹಾಗೂ ನಾಯಕ ರೋಹಿತ್ ಶರ್ಮಾ ಅವರಲ್ಲಿ ರಾಹುಲ್ ಅವರಿಂದ ಅತ್ಯುತ್ತಮ ಪ್ರದರ್ಶನವನ್ನು ಹೊರತೆಗೆಸುವ ಸಾಮರ್ಥ್ಯವಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದಾಗಿಯೇ ಅಭಿಮಾನಿಗಳು ತಾಳ್ಮೆಯಿಂದಿದ್ದು ಸಮಯವನ್ನು ನೀಡಬೇಕು. ಏಷ್ಯಾ ಕಪ್ ಜಯಿಸುವುದಕ್ಕಿಂತಲೂ ಟಿ20 ವಿಶ್ವಕಪ್ ಗೆಲ್ಲುವುದು ಹಾಗೂ ಆ ನಿಟ್ಟಿನಲ್ಲಿ ಸಿದ್ಧತೆ ನಡೆಸುವುದು ಬಹಳ ಮುಖ್ಯವಾಗುತ್ತದೆ ಎಂದಿದ್ದಾರೆ. "ಕೆಎಲ್ ರಾಹುಲ್‌ಗೆ ಬೆಂಬಲ ನೀಡುವುದು ವಿಶ್ವಕಪ್ ದೃಷ್ಟಿಯಿಂದ ಅದೊಂದು ಮಹತ್ವದ್ದಾಗಿದೆ. ನಾವು ಸುಲಭವಾಗಿ ಆತಂಕಗೊಳ್ಳುವ ಅಗತ್ಯವಿಲ್ಲ. ನಾವು ಏಷ್ಯಾ ಕಪ್ ಗೆಲ್ಲಬೇಕಿದ್ದರೂ ದೊಡ್ಡ ಗುರಿ ವಿಶ್ವಕಪ್ ಆಗಿದೆ" ಎಂದಿದ್ದಾರೆ ಕಿರಣ್ ಮೋರೆ.

ದ್ರಾವಿಡ್, ರೋಹಿತ್ ಮೇಲೆ ನಂಬಿಕೆಯಿಡಿ

ದ್ರಾವಿಡ್, ರೋಹಿತ್ ಮೇಲೆ ನಂಬಿಕೆಯಿಡಿ

ಟಿ20 ವಿಶ್ವಕಪ್ ಗೆಲ್ಲುವುದು ಏಷ್ಯಾ ಕಪ್ ಗೆಲುವಿಗಿಂತಲೂ ಮಹತ್ವದ್ದು ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ ಕಿರಣ್ ಮೋರೆ. "ನನಗೆ ಏಷ್ಯಾ ಕಪ್‌ಗಿಂತಲೂ ವಿಶ್ವಕಪ್ ಗೆಲುವ ಬಹಳ ಮುಖ್ಯವೆನಿಸುತ್ತದೆ. ಇದಕ್ಕೆ ಕಾರಣ 2011ರಲ್ಲಿ ವಿಶ್ವಕಪ್ ಗೆದ್ದ ಬಳಿಕ ನಾವು ವಿಶ್ವಕಪ್ ಗೆದ್ದೇ ಇಲ್ಲ. ಹಾಗಾಗಿ ರೋಹಿತ್ ಶರ್ಮಾ ಹಾಗೂ ರಾಹುಲ್ ದ್ರಾವಿಡ್ ಅವರ ಪ್ರಕ್ರಿಯೆಗಳ ಮೇಲೆ ನಂಬಿಕೆಯನ್ನಿಟ್ಟುಕೊಳ್ಳಬೇಕು" ಎಂದಿದ್ದಾರೆ ಕಿರಣ್ ಮೋರೆ.

For Quick Alerts
ALLOW NOTIFICATIONS
For Daily Alerts
Story first published: Tuesday, September 6, 2022, 15:50 [IST]
Other articles published on Sep 6, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X