For Quick Alerts
ALLOW NOTIFICATIONS  
For Daily Alerts
 

Breaking: ಏಷ್ಯಾ ಕಪ್ 2022: ಭಾರತದ ಹಂಗಾಮಿ ಮುಖ್ಯ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ನೇಮಕ

Asia Cup 2022: VVS Laxman Appointed As Interim Head Coach For Team India

ಪ್ರಸ್ತುತ ಎನ್‌ಸಿಎ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಅವರು ಯುಎಇಯಲ್ಲಿ ನಡೆಯಲಿರುವ ಮುಂಬರುವ ಏಷ್ಯಾ ಕಪ್ 2022ಗಾಗಿ ಟೀಮ್ ಇಂಡಿಯಾ (ಹಿರಿಯ ಪುರುಷರ)ಗೆ ಹಂಗಾಮಿ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ.

ಜಿಂಬಾಬ್ವೆಯಲ್ಲಿ ಏಕದಿನ ಸರಣಿಯನ್ನು ಆಡಿದ ಭಾರತೀಯ ತಂಡದೊಂದಿಗೆ ಪ್ರಯಾಣಿಸಿದ್ದ ವಿವಿಎಸ್ ಲಕ್ಷ್ಮಣ್ ಅವರು UAEಗೆ ತೆರಳುವ ಭಾರತೀಯ ತಂಡದೊಂದಿಗೆ ಪ್ರಯಾಣ ಬೆಳೆಸಲಿದ್ದಾರೆ.

ಏಷ್ಯಾ ಕಪ್‌ಗೆ ಭಾರತ ತಂಡ ನಿರ್ಗಮಿಸುವ ಮೊದಲು ಕೋವಿಡ್-19 ಸೋಂಕಿನ ಧನಾತ್ಮಕ ಪರೀಕ್ಷೆ ನಡೆಸಿದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಅನುಪಸ್ಥಿತಿಯಲ್ಲಿ ತಂಡದ ಸಿದ್ಧತೆಯನ್ನು ವಿವಿಎಸ್ ಲಕ್ಷ್ಮಣ್ ನೋಡಿಕೊಳ್ಳುತ್ತಾರೆ.

Asia Cup 2022: VVS Laxman Appointed As Interim Head Coach For Team India

ರಾಹುಲ್ ದ್ರಾವಿಡ್ ಕೋವಿಡ್-19 ನೆಗೆಟಿವ್ ಪರೀಕ್ಷೆ ನಡೆಸಿದ ನಂತರ ಮತ್ತು ಬಿಸಿಸಿಐ ವೈದ್ಯಕೀಯ ತಂಡದಿಂದ ತೆರವುಗೊಳಿಸಿದ ನಂತರ ಅವರು ತಂಡವನ್ನು ಸೇರಿಕೊಳ್ಳುತ್ತಾರೆ.

ವಿವಿಎಸ್ ಲಕ್ಷ್ಮಣ್ ಅವರು ಹರಾರೆಯಿಂದ ಪ್ರಯಾಣಿಸಿದ ಉಪನಾಯಕ ಕೆಎಲ್ ರಾಹುಲ್, ದೀಪಕ್ ಹೂಡಾ ಮತ್ತು ಅವೇಶ್ ಖಾನ್ ಅವರೊಂದಿಗೆ ದುಬೈನಲ್ಲಿರುವ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಈಗಾಗಲೇ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಕೆಲವು ಆಟಗಾರರು ಭಾರತದಿಂದ ಯುಎಇಗೆ ಪ್ರಯಾಣಿಸಿದ್ದಾರೆ.

ಏಷ್ಯಾ ಕಪ್ 2022 ದುಬೈ ಮತ್ತು ಶಾರ್ಜಾದಲ್ಲಿ ಆಗಸ್ಟ್ 27ರಿಂದ ಸೆಪ್ಟೆಂಬರ್ 11ರವರೆಗೆ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರಮುಖ ಘರ್ಷಣೆ ಆಗಸ್ಟ್ 28 (ಭಾನುವಾರ)ರಂದು ನಡೆಯಲಿದೆ.

ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ 2022ರಲ್ಲಿ ಆಶಾದಾಯಕವಾಗಿ ಮುನ್ನಡೆಯಲು ಎರಡು ತಂಡಗಳು ಸಾಮರ್ಥ್ಯ ಪ್ರದರ್ಶಿಸಲಿವೆ. ಭಾರತ-ಪಾಕಿಸ್ತಾನ ಪಂದ್ಯವನ್ನಾಡುವ ಮೊದಲು ಅನೇಕ ಅಭಿಮಾನಿಗಳು ಎರಡು ತಂಡಗಳು ಹೇಗಿರಲಿವೆ ಎನ್ನುವ ಕುತೂಹಲ ಮನೆಮಾಡಿದೆ.

ಏಷ್ಯಾ ಕಪ್‌ಗಾಗಿ ಭಾರತ ಪೂರ್ಣ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.

ಸ್ಟ್ಯಾಂಡ್‌ಬೈ ಆಟಗಾರರು: ದೀಪಕ್ ಚಹಾರ್, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್.

Story first published: Wednesday, August 24, 2022, 19:57 [IST]
Other articles published on Aug 24, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+