Asia Cup 2022: IND vs PAK ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಬಗ್ಗೆ ಸೌರವ್ ಗಂಗೂಲಿ ಹೇಳಿದ್ದೇನು?

ಆಗಸ್ಟ್ 28ರ ಭಾನುವಾರದಂದು ನಡೆಯುವ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ನಿರ್ಣಾಯಕ ಪಂದ್ಯದ ಮೊದಲು ಭಾರತ ತಂಡದ ಮೇಲೆ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ನಂಬಿಕೆ ಇಟ್ಟಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಬಾಬರ್ ಅಜಂ ನಾಯಜತ್ವದ ಪಾಕಿಸ್ತಾನ ತಂಡದ ವಿರುದ್ಧ ಸೆಣಸಲಿದೆ. ಯುಎಇಯಲ್ಲಿನ ಟಿ20 ವಿಶ್ವಕಪ್ ನಂತರ ಎರಡು ತಂಡಗಳ ಮೊದಲ ಪಂದ್ಯವಾಗಿದೆ.
ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಿಸಿಸಿಐ ಅಧ್ಯಕ್ಷರೂ ಅಗಿರುವ ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅನುಭವಿ ಆಟಗಾರರಾಗಿದ್ದು, ಒತ್ತಡವನ್ನು ಹೇಗೆ ಎದುರಿಸಬೇಕೆಂದು ತಿಳಿದಿದ್ದಾರೆ ಎಂದರು.

ನಾಕೌಟ್ ಪಂದ್ಯಗಳಲ್ಲಿ ಹೆಚ್ಚುವರಿ ಒತ್ತಡವಿರುತ್ತದೆ
"ಭಾರತ ಮತ್ತು ಪಾಕಿಸ್ತಾನ ಸೆಣಸಾಟ ಮತ್ತೊಂದು ಪಂದ್ಯವಾಗಿದೆ. ನಿಯಮಿತವಾಗಿ ಆಡುವವರು ಅಥವಾ ನಾನು ಆಡುವಾಗ, ನಾನು ಪಾಕಿಸ್ತಾನವನ್ನು ಯಾವುದೇ ವಿಶೇಷ ಪಂದ್ಯವೆಂದು ತೆಗೆದುಕೊಳ್ಳಲಿಲ್ಲ. ನಾಕೌಟ್ ಪಂದ್ಯಗಳಲ್ಲಿ ಹೆಚ್ಚುವರಿ ಒತ್ತಡವಿರುತ್ತದೆ. ಆದರೆ ಹಾಗೆ ಏನೂ ಇಲ್ಲ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಎಲ್ಲರೂ ಅನುಭವಿ ಆಟಗಾರರು. ಒತ್ತಡವನ್ನು ಹೇಗೆ ನಿಭಾಯಿಸಬೇಕೆಂದು ಅವರಿಗೆ ತಿಳಿದಿದೆ. ಇದು ಅವರಿಗೆ ದೊಡ್ಡ ವಿಷಯವಲ್ಲ," ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.
ಪಾಕಿಸ್ತಾನ ತಂಡದಲ್ಲಿ ಶಾಹೀನ್ ಅಫ್ರಿದಿ ಅನುಪಸ್ಥಿತಿಯ ಬಗ್ಗೆ ಕೇಳಿದ ಪ್ರಶ್ನೆಗೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, "ಒಬ್ಬ ಆಟಗಾರನ ಅನುಪಸ್ಥಿತಿಯು ತಂಡದ ಕ್ರೀಡೆಯಲ್ಲಿ ಹೆಚ್ಚು ಮುಖ್ಯವಲ್ಲ," ಎಂದು ಹೇಳಿದರು.

ವಿರಾಟ್ ಕೊಹ್ಲಿ ಬಗ್ಗೆ ನಾವೆಲ್ಲರೂ ಆಶಾವಾದಿಗಳಾಗಿದ್ದೇವೆ
"ಒಬ್ಬ ಆಟಗಾರನು ವ್ಯತ್ಯಾಸವನ್ನು ಮಾಡಬಹುದು ಅಥವಾ ಇಲ್ಲ ಎಂದು ನಾನು ಭಾವಿಸುವುದಿಲ್ಲ. ಇದು ತಂಡದ ಕೆಲಸ. ನಮ್ಮಲ್ಲಿ ಜಸ್ಪ್ರೀತ್ ಬುಮ್ರಾ ಕೂಡ ಇಲ್ಲ," ಎಂದು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಉತ್ತರಿಸಿದರು.
ವಿರಾಟ್ ಕೊಹ್ಲಿ ಪಂದ್ಯಾವಳಿಯ ಮೊದಲು ಹೆಚ್ಚಿನ ಅಭ್ಯಾಸವನ್ನು ಪಡೆಯಬೇಕಾಗಿದೆ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಈ ಹಿಂದೆ ಹೇಳಿದ್ದರು. ಬ್ಯಾಟರ್‌ನ ಫಾರ್ಮ್ ಬಗ್ಗೆ ಕೇಳಲಾದ ಪ್ರಶ್ನೆಗೆ, ವಿರಾಟ್ ಕೊಹ್ಲಿ ಶೀಘ್ರದಲ್ಲೇ ಪುನರಾಗಮನವನ್ನು ನಾನು ಆಶಿಸುತ್ತೇನೆ ಎಂದು ಗಂಗೂಲಿ ಹೇಳಿದರು.
"ವಿರಾಟ್ ದೊಡ್ಡ ಆಟಗಾರ. ರನ್ ಮಾಡಲು ಅವರದೇ ಆದ ಸೂತ್ರವಿದೆ. ಅವರು ಶೀಘ್ರದಲ್ಲೇ ಪುನರಾಗಮನವನ್ನು ಮಾಡುತ್ತಾರೆ. ನಾವೆಲ್ಲರೂ ಆಶಾವಾದಿಗಳಾಗಿದ್ದೇವೆ," ಎಂದು ಸೌರವ್ ಗಂಗೂಲಿ ತಿಳಿಸಿದರು.

ಭಾರತ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದೆ
"ಭಾರತ ಉತ್ತಮ ತಂಡ. ಭಾರತೀಯ ಕ್ರಿಕೆಟ್ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದೆ. ಆಸ್ಟ್ರೇಲಿಯಾದಲ್ಲಿ ಭಾರತ ಗೆದ್ದಿದೆ, ಇಂಗ್ಲೆಂಡ್‌ನಲ್ಲಿ ಭಾರತ ಗೆದ್ದಿದೆ, ವೆಸ್ಟ್ ಇಂಡೀಸ್‌ನಲ್ಲಿ ಭಾರತ ಗೆದ್ದಿದೆ. ಮುಂಬರುವ ವಿಶ್ವಕಪ್‌ನಲ್ಲಿ ಭಾರತವೂ ಉತ್ತಮ ಪ್ರದರ್ಶನ ನೀಡಲಿದೆ ಎಂಬ ಭರವಸೆ ನನಗಿದೆ," ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಭಿಪ್ರಾಯಪಟ್ಟರು.
ಸೌರವ್ ಗಂಗೂಲಿ ವಿಶೇಷವಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಭಾರತೀಯ ತಂಡದಲ್ಲಿ ಉಲ್ಲೇಖಿಸಿದ್ದಾರೆ ಮತ್ತು ಇದು ಅದ್ಭುತ ಸೇರ್ಪಡೆ ಎಂದು ಶ್ಲಾಘಿಸಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಯಾರೂ ಫೇವರಿಟ್ ಅಲ್ಲ
"ಹಾರ್ದಿಕ್ ಪಾಂಡ್ಯ ತಂಡಕ್ಕೆ ಅದ್ಭುತ ಸೇರ್ಪಡೆಯಾಗಿದೆ. ಹಾರ್ದಿಕ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ವರ್ಷ ಅವರು ಗಾಯಗೊಂಡಿದ್ದರು. ಈ ಬಾರಿ ಅವರೂ ಬೌಲಿಂಗ್ ಮಾಡುತ್ತಿದ್ದಾರೆ," ಎಂದರು.
ಸೌರವ್ ಗಂಗೂಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವನ್ನು ಆಯ್ಕೆ ಮಾಡದಿರಲು ನಿರ್ಧರಿಸಿದರು ಮತ್ತು ದಿನದಂದು ಯಾರು ಉತ್ತಮವಾಗಿರುತ್ತಾರೋ ಅವರು ಗೆಲ್ಲುತ್ತಾರೆ ಎಂದು ಹೇಳಿದರು.
"ಟಿ20 ಕ್ರಿಕೆಟ್‌ನಲ್ಲಿ ಯಾರೂ ಫೇವರಿಟ್ ಅಲ್ಲ. ಹಾಗಾಗಿ ಎಲ್ಲರೂ ಒಳ್ಳೆಯವರು. ಚೆನ್ನಾಗಿ ಆಡುವವರು ಗೆಲ್ಲುತ್ತಾರೆ," ಎಂದು ಮಾಜಿ ನಾಯಕ ಸೌರವ್ ಗಂಗೂಲಿ ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications